ಟೀಮ್ ಇಂಡಿಯಾಗೆ ಕ್ಷಮೆ ಕೋರಿ ಅಭಿಮಾನಿಗಳ ಹೃದಯ ಗೆದ್ದ ವಾರ್ನರ್.‌.! ಕಾರಣ ನೋಡಿ !!

ಸ್ನೇಹಿತರೆ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಭಾರತೀಯ ಆಟಗಾರರ ಮೇಲೆ ನಡೆಸಿದ ಜನಾಂಗೀಯ ನಿಂದನೆ ಘಟನೆಯ ಸಂಬಂಧ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಟೀಮ್ ಇಂಡಿಯಾಗೆ ಕ್ಷಮೆಯಾಚಿಸಿದ್ದಾರೆ. ಹೌದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ವೀಕ್ಷಿಸುತ್ತಿದ್ದ ಪ್ರೇಕ್ಷಕರ ಗುಂಪೊಂದು ಜಸ್ಪ್ರೀತ್ ಬುಮ್ರಾ ಹಾಗೂ ಸಿರಾಜ್ ಅವರ ಮೇಲೆ ಜನಾಂಗೀಯ ನಿಂದನೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಭಾರತ ತಂಡ ಐಸಿಸಿ ಹಾಗೂ ಎಸ್ ಸಿಜಿ ಭದ್ರತಾ ಸಿಬ್ಬಂದಿಗೆ ದೂರು ನೀಡಿತ್ತು.

ನಾಲ್ಕನೇ ದಿನ ಗುಂಪೊಂದು ಮೊಹಮ್ಮದ್ ಸಿರಾಜ್ ಗೆ ಮತ್ತೊಮ್ಮೆ ನಿಂದಿಸಿದ್ದು. ಈ ವೇಳೆ ಫೀಲ್ಡ್ ಅಂಪೈರಿಗೆ ಸಿರಾಜ್ ದೂರು ನೀಡಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡ ಎಸ್ ಸಿಜಿ ಭದ್ರತಾ ಸಿಬ್ಬಂದಿ ಆರು ಮಂದಿ ಇದ್ದ ಗುಂಪನ್ನು ಕ್ರೀಡಾಂಗಣದಿಂದ ಹೊರಗೆ ಕಳುಹಿಸಿದರು. ಮಂಗಳವಾರ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಡೇವಿಡ್ ವಾರ್ನರ್ ವರ್ಣಭೇದ ನೀತಿ ಮತ್ತು ನಿಂದನೆ ಎಲ್ಲಿಯೂ ಸ್ವೀಕಾರಾರ್ಹವಲ್ಲ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು, ಹೋರಾಟ ನಡೆಸಿ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡ ಅಜಿಂಕ್ಯ ರಹಾನೆ ನಾಯಕತ್ವದ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

“ಈ ವಾರ ಮತ್ತೆ ಅಂಗಳಕ್ಕೆ ಮರಳಲು ಉತ್ಸುಕನಾಗಿದ್ದೇನೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ನಮ್ಮ ಪರ ಆದರ್ಶ ಫಲಿತಾಂಶ ಮೂಡಿಬರಲಿದೆ. ಆದರೆ ಟೆಸ್ಟ್ ಕ್ರಿಕೆಟ್ ಎಂದ ಮೇಲೆ ಇಂತಹ ಫಲಿತಾಂಶ ಸಾಮಾನ್ಯವಾಗಿರುತ್ತದೆ. ಈ ಕಾರಣದಿಂದಲೇ ಟೆಸ್ಟ್ ಕ್ರಿಕೆಟ್ ಅನ್ನು ಇಷ್ಟಪಡುತ್ತೇನೆ. ಐದು ದಿನಗಳ ಕಾಲ ಪಂದ್ಯ ತುಂಬಾ ಕಠಿಣವಾಗಿತ್ತು ಹಾಗೂ ನಮ್ಮ ಹುಡುಗರು ತುಂಬಾ ಚೆನ್ನಾಗಿ ಆಡಿದ್ದಾರೆ‌. ಆದರೂ ಕಠಿಣ ಹೋರಾಟ ನಡೆಸಿ ಪಂದ್ಯವನ್ನು ಡ್ರಾ ಮಾಡಿಕೊಂಡ ಭಾರತಕ್ಕೆ ಅಭಿನಂದನೆಗಳು. ಇದೀಗ ಸರಣಿ ನಿರ್ಣಾಯಕ ಗಬ್ಬಾ ಟೆಸ್ಟ್ ಕಡೆ ನಾವು ಗಮನ ಹರಿಸಬೇಕಾಗಿದೆ” ಎಂದು ವಾರ್ನರ್ ಬರೆದುಕೊಂಡಿದ್ದರು.

“ಇನ್ನು ಜನಾಂಗೀಯ ನಿಂದನೆಗೆ ಒಳಗಾಗೊ ಟೀಮ್ ಇಂಡಿಯಾ ಹಾಗೂ ಮಹಮ್ಮದ್ ಶಿರಾಜ್ ಬಳಿ ನಾನು ಕ್ಷಮೆ ಕೋರಲು ಬಯಸುತ್ತೇನೆ. ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಲ್ಲಿ ಜನಾಂಗೀಯ ನಿಂದನೆ ಸ್ವೀಕಾರಾರ್ಹ ಅಥವಾ ಸಹಿಸಲು ಸಾಧ್ಯವಿಲ್ಲ. ತವರು ಅಭಿಮಾನಿಗಳಿಂದ ಉತ್ತಮವಾದದ್ದನ್ನು ನಾನು ನಿರೀಕ್ಷಿಸುತ್ತಿದ್ದೇನೆ” ಎಂದು ವಾರ್ನರ್ ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದ ಮೂಲಕ ವ್ಯಕ್ತಪಡಿಸಿದ್ದರು.