ನಮ್ಮ ದೇಶದ ಬೆನ್ನೆಲುಬು ರೈತರಿಗಾಗಿ ಜಾಹೀರಾತು ನೀಡಿರುವ ನಮ್ಮ ಸ್ಟಾರ್ ನಟರು ತೆಗೆದುಕೊಂಡ ಸಂಭಾವನೆ ಎಷ್ಟು ನೋಡಿ !!

ಅಣ್ಣಾವ್ರ ಕಾಲದಿಂದ ಹಿಡಿದು ಇಂದಿನ ಸ್ಟಾರ್ ನಟರ ವರೆಗೂ ನಮ್ಮ ಕರ್ನಾಟಕದ ಹೆಮ್ಮೆ ನಂದಿನಿ ಹಾಲಿಗೆ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ ಹಲವು ನಟರು. ಹೌದು ಆಗಿನ ಕಾಲಕ್ಕೆ ಕನ್ನಡದ ಮೇರು ನಟರಾಗಿದ್ದ ಡಾ. ರಾಜಕುಮಾರ್ ಅವರು ನಂದಿನಿ ಹಾಲಿನ ಜಾಹೀರಾತು ನೀಡುತ್ತಿದ್ದರು. ನಂದಿನಿ ಹಾಲಿನ ಮೊದಲ ರಾಯಭಾರಿ ಎಂಬ ಹೆಗ್ಗಳಿಕೆ ನಟಸಾರ್ವಭೌಮ ಅಣ್ಣಾವ್ರುದ್ದು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಇದೇ ರಾಜಕುಮಾರ್ ಅವರ ಮೊದಲ ಹಾಗೂ ಕೊನೆಯ ಜಾಹೀರಾತು ಎಂಬುದು.

ಅದು ಒಂದು ರೂಪಾಯಿ ಕೂಡ ಸಂಭಾವನೆ ತೆಗೆದುಕೊಳ್ಳದೆ. ಕಾರಣ ನಂದಿನಿ ಹಾಲು ರೈತರದ್ದು, ಅದರಿಂದ ನಾನು ಸಂಭಾವನೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು ರಾಜಣ್ಣ. ಈಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ನಮ್ಮ ಚಂದನವನದ ಸ್ಟಾರ್ ನಟರು. ಹಾಗಿದ್ರೆ ಯಾವೆಲ್ಲಾ ನಟರು ರೈತರ ಸಂಸ್ಥೆಯಾಗಿರುವ ಕೆಎಂಎಫ್ ನಂದಿನಿ ಹಾಲಿನ ಉತ್ಪನ್ನಗಳ ಜಾಹೀರಾತು ನೀಡುವ ಸಲುವಾಗಿ ಸಂಭಾವನೆ ಪಡೆದಿದ್ದಾರೆ ಹಾಗೆ ಯಾರು ಪಡೆದಿಲ್ಲ ಎಂದು ತಿಳಿಯೋಣ ಬನ್ನಿ.

ತಂದೆಯಂತೆ ಮಗ ಎನ್ನುವಂತೆ ರಾಜಕುಮಾರ್ ಅವರ ಪುತ್ರ ಪುನೀತ್ ರಾಜಕುಮಾರ್ ಕೂಡಾ ನಂದಿನಿ ಹಾಲಿನ ರಾಯಭಾರಿಯಾಗಿದ್ದಾರೆ. ರಾಜಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವ ಅಪ್ಪು ನಂದಿನಿ ಹಾಲಿನ ಜಾಹೀರಾತು ಮಾಡುವ ಸಲುವಾಗಿ ಹಣ ಪಡೆದಿಲ್ಲ. ಅಷ್ಟೇ ಅಲ್ಲದೆ ಪುನೀತ್ ಚುನಾವಣೆಯಲ್ಲಿ ಮತ ಹಾಕುವ ಅಭಿಯಾನ ಸೇರಿದಂತೆ ಕರ್ನಾಟಕ ಸರ್ಕಾರದ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ಕೆಲಸ ಮಾಡಿದ್ದು, ಇದಕ್ಕಾಗಿ ಯಾವುದೇ ಸಂಭಾವನೆ ಪಡೆದಿಲ್ಲ.

ಇನ್ನು ಸ್ಯಾಂಡಲ್ವುಡ್ನ ದಾಸ, ಅಭಿಮಾನಿಗಳಿಂದ ಡಿ ಬಾಸ್ ಎಂದೇ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಸರಕಾರದ ಕೆಲ ಕಾರ್ಯಕ್ರಮಗಳಲ್ಲಿ ಕೈಜೋಡಿಸಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗಷ್ಟೇ ದರ್ಶನ ಅವರನ್ನು ಕರ್ನಾಟಕ ಸರ್ಕಾರ ಕೃಷಿ ಇಲಾಖೆಯ ರಾಯಭಾರಿಯಾಗಿ ಮಾಡಿದ. ಇನ್ನು ಅದಕ್ಕಾಗಿ ಅಭಿಮಾನಿಗಳ ನೆಚ್ಚಿನ ದಾಸ ಒಂದು ರೂಪಾಯಿ ಕೂಡ ಪಡೆದಿಲ್ಲ. ಇನ್ನು ಇತ್ತೀಚಿಗಷ್ಟೇ ಸಿನಿಮಾರಂಗದಲ್ಲಿ ತಮ್ಮ 25 ವರ್ಷದ ಜರ್ನಿ ಅನ್ನು ಆಚರಿಸಿಕೊಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ರೈತರ ಪರವಾಗಿ ಜಾಹೀರಾತು ನೀಡಿದ್ದಾರೆ. ಅದು ಕೂಡ ಯಾವುದೇ ಸಂಭಾವನೆ ಪಡೆಯದೆ.