ಡಿ ಬಾಸ್ ಕಾರನ್ನು ಫಾಲೋ ಮಾಡಿದ ವಿಕಲಚೇತನ ಅಭಿಮಾನಿ ! ಕೂಡಲೇ ಡಿ ಬಾಸ್ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಡಿ ಬಾಸ್ ಖ್ಯಾತಿಯ ದರ್ಶನ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ, ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಯಾರು ಎಂದರೆ ಮೊದಲ ಉತ್ತರ ಕೇಳಿ ಬರುವುದೇ ದರ್ಶನ್ ಅವರ ಹೆಸರು. ಹೀಗೆ ಇಷ್ಟೆಲ್ಲಾ ಅಭಿಮಾನಿ ಬಳಗವನ್ನು ಹೊಂದಿರುವ ದರ್ಶನ್ ಅವರು ಎಲ್ಲಿ ಹೋದರೂ ಕೂಡ ಅಭಿಮಾನಿಗಳು ಫಾಲೋ ಮಾಡುವುದು ಸಾಮಾನ್ಯ ವಿಷಯ

ಆದರೆ ದರ್ಶನ ರವರು ಕಾರಿನಲ್ಲಿ ಹೋಗುತ್ತಿದ್ದನ್ನು ಕಂಡ ಒಬ್ಬ ಅಂಗವಿಕಲ ಅಭಿಮಾನಿಯೂ ತನ್ನ ಆಟೋದಲ್ಲಿ ದರ್ಶನ್ ಅವರ ಕಾರನ್ನು ಫಾಲೋ ಮಾಡಲು ಆರಂಭಿಸಿದ್ದಾರೆ, ಆಟೋ ಮೇಲೆ ದರ್ಶನ್ ರವರ ಭಾವಚಿತ್ರ ಹಾಗೂ ಆತನ ಅಂಗವೈಕಲ್ಯವನ್ನು ಕಂಡ ದರ್ಶನ್ ಅವರು ಕೂಡದೆ ಕಾರು ನಿಲ್ಲಿಸಿ ಅವನ ಜೊತೆ ಮಾತನಾಡುವ ಮೂಲಕ ಸೌಜನ್ಯ ತೋರಿದ್ದಾರೆ.

ದಾರಿಯಲ್ಲಿ ಫಾಲೋ ಮಾಡುತ್ತಿದ್ದನ್ನು ಕಂಡ ದರ್ಶನ ರವರು ಕೂಡಲೇ ಕಾರು ನಿಲ್ಲಿಸಿ ಅಭಿಮಾನಿಗಳಲ್ಲಿ ಅವನ ಪಕ್ಕದಲ್ಲಿ ಕೂತು ಮಾತನಾಡಿಸಿ ಆಟೋ ಜೊತೆಗೆ ಫೋಟೋ ತೆಗೆಸಿಕೊಂಡು ಸೌಜನ್ಯ ತೋರಿದ್ದಾರೆ, ಅಷ್ಟೇ ಅಲ್ಲದೆ ನಿನಗೆ ಕಾಲು ಸರಿಯಿಲ್ಲ ಹೇಗೆ ಆಟೋ ಓಡುಸ್ತೀಯ ಚಿನ್ನ ಎಂದು ಪ್ರಶ್ನೆ ಮಾಡಿದಾಗ ಒಂದು ಕಾಲು ಸರಿ ಇದೆ ಎಂದು ಆತ ಉತ್ತರ ನೀಡಿದ್ದಾನೆ ಈ ಮಾತುಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ದರ್ಶನ್ ರವರ ಸೌಜನ್ಯಕ್ಕೆ ಜನರು ಮತ್ತೊಮ್ಮೆ ಫಿದಾ ಆಗಿದ್ದಾರೆ.