ಕಿರಿಕ್ ಕೀರ್ತಿ ನಿರ್ದೇಶನದ ಸಿನಿಮಾಕ್ಕೆ ಖ್ಯಾತ ಕಿರುತೆರೆ ನಟಿ ಎಂಟ್ರಿ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿರುವ ಕಿರಿಕ್ ಕೀರ್ತಿ ಮೂಲತಹ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದು ಇದೀಗ ನಿರ್ದೇಶಕರಾಗಿ ಕೆಲಸ ಆರಂಭಿಸಿದ್ದಾರೆ. ಮೊದಲು ಮೂಲತಹ ಪತ್ರಕರ್ತರಾಗಿ ಗುರುತಿಸಿಕೊಂಡು ತದ ನಂತರ ಎಫೆಮ್ ರೇಡಿಯೋ ದಲ್ಲಿ ಕೆಲಸ ಮಾಡಿ, ಬಿಗ್ ಬಾಸ್ ಗೆ ತೆರಳಿ ಅಲ್ಲಿ ರನ್ನರ್-ಅಪ್ ಆಗಿ, ತದ ನಂತರ ಹಲವಾರು ರಿಯಾಲಿಟಿ ಶೋಗಳ ನಿರೂಪಕರಾಗಿ ಕೆಲಸ ಮಾಡಿರುವ ಕಿರಿಕ್ ಕೀರ್ತಿ ರವರು ಇದೀಗ ನಿರ್ದೇಶನ ಮಾಡುವುದಕ್ಕೂ ಕೂಡ ಮುಂದಾಗಿದ್ದಾರೆ. ಇವರು ನಿರ್ದೇಶನ ಮಾಡುತ್ತಿರುವ ಸಿನಿಮಾಗೆ ಪ್ರೀತಿ ಮದುವೆ ಇತ್ಯಾದಿ ಎಂದು ಟೈಟಲ್ ಆಯ್ಕೆ ಮಾಡಿಕೊಂಡಿದ್ದು ಕಿರುತೆರೆಯ ಖ್ಯಾತ ನಟಿಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

ಹೌದು ಸ್ನೇಹಿತರೆ ಕ್ರೌಡ್ ಫಂಡಿಂಗ್ ಮೂಲಕ ಸಿನಿಮಾ ನಿರ್ದೇಶನ ಮಾಡಲು ಹೊರಟಿರುವ ಕಿರಿಕ್ ಕೀರ್ತಿ ರವರು ಶ್ರೀರಸ್ತು ಶುಭಮಸ್ತು ಧಾರವಾಹಿಯ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡಿದ ನಂತರ ರಾಧಾ ರಮಣ ಧಾರವಾಹಿಯ ಮೂಲಕ ಮನೆಮಾತಾದ ಹಾಗೂ ಭಾರೀ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಶ್ವೇತಾ ಪ್ರಸಾದ್ ಅವರನ್ನು ತಮ್ಮ ಚಿತ್ರಕ್ಕೆ ನಾಯಕನಾಗಿ ಕಿರಿಕ್ ಕೀರ್ತಿ ರವರು ಆಯ್ಕೆ ಮಾಡಿದ್ದಾರೆ. ಶ್ವೇತಾ ಪ್ರಸಾದ್ ರವರು ಕೆಲವು ತಿಂಗಳುಗಳಿಂದ ಕಿರುತೆರೆಯಿಂದ ದೂರ ಉಳಿದಿದ್ದು ಇದು ಈಗ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.