ಜೆ ಜೆ ಧಾರಾವಾಹಿಗೆ ಅನಿರುದ್ಧ್ ಪಡೆಯುವ ಸಂಭಾವನೆ ಯಾವ ಸ್ಟಾರ್ಸ್ ಗಳಿಗೂ ಕಮ್ಮಿಯಿಲ್ಲ ಎಷ್ಟು ಲಕ್ಷ ಗೊತ್ತೆ ??😳👌

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಮನೆಮನೆಯಲ್ಲೂ ಕೇಳಿಬರುತ್ತಿರುವ ಹೆಸರು ಆರ್ಯವರ್ಧನ್ ಮತ್ತು ಅನು ಸಿರಿಮನೆ., ಜೊತೆ ಜೊತೆಯಲಿ ಧಾರಾವಾಹಿಯಲ್ಲಿನ ಪಾತ್ರಧಾರಿಗಳು. ಒಂದು ರೀತಿ ಎಲ್ಲ ವೀಕ್ಷಕರ ಮನೆಯವರೊಂದಿಗೆ ಈ ಇಬ್ಬರೂ ನಟರು ಕೂಡ ಒಬ್ಬರಾಗಿ ಬಿಟ್ಟಿದ್ದಾರೆ. ಆರ್ಯವರ್ಧನ್ ಅನು, ಪುಷ್ಪ, ಸುಬ್ಬು ಎಲ್ಲರನ್ನು ಸಹ ಕರ್ನಾಟಕದ ಜನ ಬಹಳಷ್ಟು ಇಷ್ಟಪಟ್ಟಿದ್ದಾರೆ ಮನಮುಟ್ಟುವಂತಹ ಕಥೆ ಒಳ್ಳೊಳ್ಳೆಯ ತಿರುವುಗಳು., ಕಲಾವಿದರ ಉತ್ತಮ ಆಯ್ಕೆ, ಮತ್ತು ಅಭಿನಯ ಈ ಎಲ್ಲಾ ಕಾರಣದಿಂದಾಗಿ ಕನ್ನಡದ ಕಿರುತೆರೆಯ ಇತಿಹಾಸದಲ್ಲಿ ಹೊಸದೊಂದು ಸಂತೋಷವನ್ನು ಮೂಡಿಸಿದೆ ಜೊತೆ ಜೊತೆಯಲಿ ಧಾರಾವಾಹಿ.

ಹೀಗೆ ಉಳಿದ ಎಲ್ಲಾ ಪಾತ್ರಗಳಿಗಿಂತ ನಿರೀಕ್ಷಕರನ್ನು ಹೆಚ್ಚು ಆಕರ್ಷಣೆ ಮಾಡಿದ್ದು ಆರ್ಯವರ್ಧನ್ ಮತ್ತು ಅನು ಸಿರಿಮನೆ ಪಾತ್ರಗಳು. ಆರ್ಯವರ್ಧನ್ ಅವರ ಜಾಣ್ಮೆ ಸರಳತೆ ಗಾಂಭೀರ್ಯ ಅನು ಸಿರಿಮನೆ ಮನೆಯ ಮುಗ್ಧತೆ ಇವೆಲ್ಲವೂ ಸಹ ಧಾರವಾಹಿಯನ್ನು ವೀಕ್ಷಣೆ ಮಾಡುವಂತಹ ಪ್ರೇಕ್ಷಕರಿಗೆ ತುಂಬಾ ಇಷ್ಟ ಆಗಿದೆ. ಅದರಲ್ಲೂ ಆರ್ಯವರ್ಧನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಸಂಸ್ಥಾಪಕ ಆರ್ಯವರ್ಧನ್ ಪಾತ್ರ ಕಿರಿಯರಿಂದ ಹಿಡಿದು ಹಿರಿಯರವರೆಗೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪಾತ್ರಕ್ಕೆ ಹಾಗೂ ವಯಸ್ಸಿಗೆ ತಕ್ಕಂತೆ ಇರುವ ಅನಿರುದ್ಧ ಅವರ ನಟನೆಯಲ್ಲಿ ಪ್ರಬುದ್ಧತೆ,ಉತ್ತಮ ಮ್ಯಾನರಿಸಂ ಪ್ರೇಕ್ಷಕರಲ್ಲಿ ಹಾಗೂ ಅವರ ಅಭಿಮಾನಿಗಳು ಮೆಚ್ಚುಗೆಗೆ ಪಾತ್ರವಾಗಿದೆ . ನಟನೆಯ ಜೊತೆಗೆ ಆರ್ಯವರ್ಧನ್ ಅವರ ಸಾಲ್ಟ್ ಅಂಡ್ ಪೆಪ್ಪರ್ ಲೂಕ್ ಕೂಡ ಹೊಸ ಟ್ರೆಂಡ್ಲೈನೆ ಕರ್ನಾಟಕದಲ್ಲಿ ಸೃಷ್ಟಿ ಮಾಡಿದೆ.

ಹಿರಿತೆರೆಯಿಂದ ಕಿರುತೆರೆಗೆ ಬಂದ ನಂತರ ಎಂದೂ ಸಿಗದಂತಹ ಯಶಸ್ಸು ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಸಿಕ್ಕಂತಾಗಿದೆ ಹೀಗೆ ನಟ ಅನಿರುದ್ಧ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಎಂದು ಗೊತ್ತಾದರೆ ನಿಜಕ್ಕೂ ಶಾಕ್ ಆಗುತ್ತೀರಾ. ಹೌದು ಆರ್ಯವರ್ಧನ್ ಪಾತ್ರದಲ್ಲಿ ನಟಿಸಲು ನಟ ಅನಿರುದ್ಧ ಒಂದು ದಿನಕ್ಕೆ ಪಡೆದುಕೊಳ್ಳುವಂತಹ ಸಂಭಾವನೆ ಬರೋಬ್ಬರಿ 35 ಸಾವಿರ ರೂಪಾಯಿ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅನಿರುದ್ಧ ಸಾಹಸಸಿಂಹ ವಿಷ್ಣುವರ್ಧನ್ ಅವರ ಮಗಳ ಗಂಡ ಅಂದರೆ ವಿಷ್ಣುವರ್ಧನ್ ಅವರ ಅಳಿಯ. ವಿಷ್ಣುವರ್ಧನ್ ಅವರು ಇದ್ದಾಗ ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ, ಪೋಷಕ ನಟನಾಗಿ ಕೂಡ ಅನಿರುದ್ಧ ನಟಿಸಿದ್ದರು ಆದರೆ ವಿಷ್ಣುವರ್ಧನ್ ಅವರ ಅಗಲಿಕೆ ನಂತರ ಅನಿರುದ್ಧ ನಟಿಸಿದ ಸಿನಿಮಾಗಳು ಹೆಚ್ಚು ಯಶಸ್ಸು ಕಾಣಲಿಲ್ಲ. ಹೀಗಾಗಿ ಹಿರಿತೆರೆಯಿಂದ ಕಿರುತೆರೆಗೆ ಕಾಲಿಟ್ಟರು.

ಅನಿರುದ್ಧ ಅವರ ಜೊತೆ ಜೊತೆಯಲಿ ಧಾರಾವಾಹಿ ಎಷ್ಟರಮಟ್ಟಿಗೆ ಯಶಸ್ಸನ್ನು ತಂದುಕೊಟ್ಟಿತು ಎಂದರೆ ಈಗಿನ ಸ್ಟಾರ್ ನಟರು ಪಡೆಯುವ ಸಂಭಾವನೆಯನ್ನು ಅನಿರುದ್ಧ್ ಅವರ ಜೊತೆ ಜೊತೆಯಲಿ ಧಾರಾವಾಹಿಗೆ ಪಡೆಯುತ್ತಾರೆ. ಧಾರವಾಹಿ ಪ್ರತಿದಿನ 35000 ರೂಪಾಯಿಗಳನ್ನು ಪಡೆಯುವ ಅನಿರುದ್ಧ ತಿಂಗಳಿಗೆ ಏನಿಲ್ಲ ಅಂದರೂ 10 ಲಕ್ಷ ಸಂಭಾವನೆಯನ್ನು ಆರ್ಯವರ್ಧನ್ ಪಡೆಯುತ್ತಿದ್ದಾರೆ…