ಡಾ. ಶಿವರಾಜಕುಮಾರ್ ಅವರು ಎಂಥ ದೈವಭಕ್ತರು ಎಂಬುದು ನಿಮಗೆ ಗೊತ್ತಾ..?

ಸ್ನೇಹಿತರೆ, ಕನ್ನಡದ ಮೇರು ನಟರಾದ ಡಾ. ರಾಜಕುಮಾರ್ ಅವರು ಮಹಾನ್ ದೇಶಭಕ್ತರಾಗಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಅಣ್ಣಾವ್ರ ಮಕ್ಕಳು ಕೂಡ ತಮ್ಮ ಬಾಲ್ಯದಿಂದಲೇ ತಮ್ಮ ತಂದೆಯವರಂತೆ ದೇವರ ಮೇಲೆ ಅಪಾರವಾದ ನಂಬಿಕೆ ಹಾಗೂ ಭಕ್ತಿಯನ್ನು ಬೆಳೆಸಿಕೊಂಡಿದ್ದರು. ಇನ್ನು ಶಿವಣ್ಣ ಅವರು ಆಗಾಗ ಮಾಲೆ ಧರಿಸಿ ಶಬರಿಮಲೆಗೆ ಕೂಡ ಹೋಗಿ ಅಯ್ಯಪ್ಪನ ದರ್ಶನ ಪಡೆದು ಬರುತ್ತಾರೆ. ಎಲ್ಲ ರೀತಿಯ ವಿಭಿನ್ನ ಪಾತ್ರಗಳಲ್ಲಿ ಮಿಂಚಿರುವ ಶಿವರಾಜ್ ಕುಮಾರ್ ಅವರು ಹೆಚ್ಚಾಗಿ ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಲ್ಲ.

ಆದರೆ ಅವರಿಗೆ ದೇವರ ಮೇಲೆ ತುಂಬಾನೇ ಭಕ್ತಿ ಮತ್ತು ನಂಬಿಕೆ ಇದೆ. ಇನ್ನು ಇಲ್ಲಿಯವರೆಗೂ ಶಿವರಾಜಕುಮಾರ್ ಅವರು ಸುಮಾರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಭಕ್ತಿಪ್ರಧಾನ ಚಿತ್ರಗಳಲ್ಲಿ ಶಿವಣ್ಣ ನಡೆಸಿರುವುದು ತುಂಬಾನೇ ಕಡಿಮೆ. ಶಿವ ಮೆಚ್ಚಿದ ಕಣ್ಣಪ್ಪ ಚಿತ್ರವನ್ನು ಬಿಟ್ಟರೆ, ಶಿವಣ್ಣನ ಭಕ್ತಿ ಪ್ರಧಾನ ಚಿತ್ರಗಳು ನಮ್ಮ ಕಣ್ಣಿಗೆ ಬೀಳುವುದಿಲ್ಲ. ಇನ್ನು ಶಿವಣ್ಣ ಅವರು ಸಾಯಿಬಾಬಾ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಅಪಾರ ಬಯಕೆಯನ್ನು ಹೊಂದಿದ್ದಾರೆ.

ಇನ್ನು ಕಾಲ ಕೂಡಿ ಬಂದರೆ ಖಂಡಿತವಾಗಿಯೂ ಭಗವಾನ್ ಶ್ರೀ ಸಾಯಿಬಾಬರ ಪಾತ್ರದಲ್ಲಿ ಕಾಣಿಸಿಕೊಳ್ಳುವುದಾಗಿ ಶಿವಣ್ಣ ಒಮ್ಮೆ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ ಹಾಗೂ ನೀವು ಕೂಡ ಶಿವಣ್ಣನ ಅಭಿಮಾನಿ ಹಾಗಿದ್ದಲ್ಲಿ ಈ ಲೇಖನಕ್ಕೆ ಒಂದು ಲೈಕ್ ಮಾಡಿ.