ಪೊಗರು ಮತ್ತು ರಾಬರ್ಟ್ ಸಿನಿಮಾದಲ್ಲಿ ಯಾಕೆ ನಟಿಸಿಲ್ಲ ಎಂದು ಬಹಿರಂಗವಾಗಿ ಹಾಗೂ ಧೈರ್ಯವಾಗಿ ಸತ್ಯ ಬಿಚ್ಚಿಟ್ಟ ಸಾಧು !!

ನಮಸ್ಕಾರ ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗದಲ್ಲಿ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ರಾಬರ್ಟ್ ಚಿತ್ರದಲ್ಲಿ ಸಾಧುಕೋಕಿಲ ಅವರು ಯಾಕೆ ಇಲ್ಲ! ಇದಕ್ಕೆ ಉತ್ತರಿಸಿರುವ ಸಾಧುಕೋಕಿಲಾ ಅವರು, ಪೊಗರು ಮತ್ತು ರಾಬರ್ಟ್ ಸಿನಿಮಾದಲ್ಲಿ ನೀವು ಯಾಕೆ ಇಲ್ಲ ಎಂದು ನನ್ನ ಎಲ್ಲ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇವೆರಡು ಸಿನಿಮಾಗಳಲ್ಲಿ ನಾನು ಅಭಿನಯಿಸಿಲ್ಲ. ಅದಕ್ಕೂ ಮುನ್ನ ದರ್ಶನ್ ಅವರ ಯಜಮಾನ ಸಿನಿಮಾದಲ್ಲೂ ಇದ್ದೇನೆ, ಸುದೀಪ್ ಅವರ ರನ್ನ ಸಿನಿಮಾದಲ್ಲೂ ಇದ್ದೇನೆ, ಮುಂದೆ ಬರುವ ಯುವರತ್ನ ಸಿನಿಮಾದಲ್ಲೂ ಇದ್ದೇನೆ.

ಹಾಗಾಗಿಯೇ ಬರುವ ಪ್ರತಿಯೊಂದು ಸಿನಿಮಾಗಳಲ್ಲಿಯೂ ನಾನು ಇಲ್ಲ ಎಂದರೆ ಅಭಿಮಾನಿಗಳು ಬೇಸರ ಪಡುತ್ತಾರೆ, ಆದರೆ ಕೆಲವೊಂದು ಸಿನಿಮಾಗಳು ಕೈ ಜಾರಿ ಹೋಗುತ್ತದೆ ಆದರೆ ಮುಂದೆ ಬರುವ ಸಿನಿಮಾಗಳಲ್ಲಿ ಇರುತ್ತೇನೆ. 2016 ರ ಭಲೆ ಜೋಡಿ ಸಿನಿಮಾ ನಂತರ ನೀವು ನಿರ್ದೇಶನ ಮಾಡಲಿಲ್ಲ ಯಾಕೆ? ಇದಕ್ಕೆ ಉತ್ತರಿಸಿದ ಸಾಧುಕೋಕಿಲ ಅವರು, ಬಲೆ ಜೋಡಿ ಆದಮೇಲೆ ನಾನು ಕೊನೆಯ ಸಿನಿಮಾ ಸೂಪರ್ ರಂಗ ಮಾಡಿದ್ದೇನೆ, ಬಲೆ ಜೋಡಿ ನನ್ನ ಕೊನೆ ನಿರ್ದೇಶನದ ಸಿನಿಮಾವಾಗಿದೆ. ಈ ಸಿನಿಮಾದ ನಂತರ ಮೂರು ವರ್ಷ ಯಾವ ಸಿನಿಮಾಗಳನ್ನು ನಿರ್ದೇಶನ ಮಾಡಿಲ್ಲ.

ನಿಮ್ಮ ಹುಟ್ಟು ಹಬ್ಬದ ದಿನ ನಿಮ್ಮ ನಿರ್ದೇಶನವಿರುವ ಹೊಸ ಸಿನಿಮಾ ಸೆಟ್ಟೇರುತ್ತಿದೆ ಅದರ ಬಗ್ಗೆ ಹೇಳಿ! ಒಂದೆರಡು ವರ್ಷದಿಂದ ಅರ್ಜುನ್ ಮತ್ತು ನಿಷಿಲ್ ಅಂತ ಮತ್ತೆ ನಮ್ಮ ರಾಜಶೇಖರ್ ಇವರು ಬಹಳ ಸಿನಿಮಾ ಮಾಡಿದ್ದಾರೆ ಈಗ ನಾಲ್ಕನೇ ಸಿನಿಮಾ ತ್ರಿಕೋನ ರಿಲೀಸಿಗೆ ರೆಡಿಯಾಗಿದೆ. ಈಗ ಅವರ 5ನೇ ಸಿನಿಮಾ ಅವರ ಕಂಪನಿಯಿಂದ ನಾನು ನಿರ್ದೇಶನ ಮಾಡುತ್ತಿದ್ದೇನೆ. ಈಗ ಮಾಡುವ ಸಿನಿಮಾ ಯಂಗ್  ಸ್ಟಾರ್ ಸಿನಿಮಾ 19 ರಿಂದ  21 ಹುಡುಗರ ಸಿನಿಮಾ. ಅವರು ಹೇಗಿರುತ್ತಾರೆ ಅವರ ಮನಸ್ಸು ಹೇಗಿರುತ್ತದೆ ಅವರು ಯಾವ ತರಹ ಓಡಾಡುತ್ತಾರೆ, ಅವರು ತಂದೆ-ತಾಯಿ ಜೊತೆ ಹೇಗೆ ಇರುತ್ತಾರೆ ಫ್ರೆಂಡ್ಸ್ ಜೊತೆ ಇರುತ್ತಾರೆ, ಅವರು ಯಾವುದಕ್ಕೆ ಬಹುಬೇಗ ಹಾಳಾಗುತ್ತಾರೆ ಮತ್ತು ಯಾವುದಕ್ಕೆ ಬಹುಬೇಗ ಪ್ರತಿಕ್ರಿಯಿಸುತ್ತಾರೆ ಎನ್ನುವುದರ ಬಗ್ಗೆ ಮುಂದೆ ಒಂದು ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಿಮ್ಮ ಸಿನಿ ಜರ್ನಿಯ  ಬಗ್ಗೆ ಒಂದೆರಡು ಮಾತು!
ನಾನು ಒಬ್ಬ ಒಳ್ಳೆಯ ಮ್ಯೂಸಿಯಮ್ ಆಗಬೇಕು ಎಂದು ಬಂದಿದ್ದೇನೆ. ಒಬ್ಬ ಕೀಬೋರ್ಡ್ ಪ್ಲೇಯರ್ ಆಗಿ ಆಗಬೇಕು,ಆದೇ. ನನಗೆ ದೇವರು ಒಂದು ದಾರಿಯನ್ನು ತೋರಿಸಿದ್ದಾನೆ ಎಲ್ಲದಕ್ಕೂ ಮೊದಲು ದೇವರಿಗೆ ಒಂದು ಧನ್ಯವಾದ ಹೇಳಬೇಕು, ಜೊತೆಗೆ ಅಭಿಮಾನಿಗಳು ನನ್ನನ್ನು ಅವರು ಮೆಚ್ಚಿ ಅವರ ಮನೆ ಮನೆಗಳಲ್ಲಿ ನನ್ನನ್ನು ಪ್ರಿಂಟಾಗಿ ಇಟ್ಟುಕೊಂಡು ಬಿಟ್ಟಿದ್ದಾರೆ. ಅದರಿಂದ ನಮ್ಮ ಇಂಡಸ್ಟ್ರಿಯಲ್ಲಿ ಸಹ ಹೀರೋಗಳು ಹೀರೋಯಿನ್ ಗಳು ಪ್ರೊಡ್ಯೂಸರ್, ನಿರ್ದೇಶಕರು ದೊಡ್ಡ ದೊಡ್ಡ ಕಲಾವಿದರು ನನ್ನನ್ನು ಅವರ ಅಣ್ಣ ತಮ್ಮ ಎಂದು ಅಂದುಕೊಂಡಿದ್ದಾರೆ ಈ ರೀತಿಯಾಗಿ ಸಾಧು ಕೋಕಿಲ ಅವರು ಹೇಳಿಕೊಂಡಿದ್ದಾರೆ…