ರೊಚ್ಚಿಗೆದ್ದ ಆರ್ಸಿಬಿ ಹುಡುಗರು ! ಒಂದೇ ದಿನ ಆರ್ಸಿಬಿ ನಾಲ್ವರು ಯುವ ಆಟಗಾರರು ಸಿಹಿಸುದ್ದಿ ನೀಡಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಇದೀಗ ಆರ್ಸಿಬಿ ತಂಡವು ಈ ಬಾರಿ ಹರಾಜಿನಲ್ಲಿ ಹಲವಾರು ಕೋಟಿ ಗಳನ್ನು ನೀಡಿ ಅಂತರಾಷ್ಟ್ರೀಯ ಆಟಗಾರರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ. ಅಂತರರಾಷ್ಟ್ರೀಯ ಆಟಗಾರರಿಗೆ ಕೋಟಿ ಕೋಟಿ ರೂಪಾಯಿಗಳನ್ನು ಸುರಿದಿರುವ ಆರ್ಸಿಬಿ ತಂಡವು ಈ ಬಾರಿ ದೇಶಿಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಆಟಗಾರರನ್ನು ಕೂಡ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ

ವಿಶೇಷವೇನೆಂದರೆ ಅಂತರ್ರಾಷ್ಟ್ರೀಯ ಆಟಗಾರರಿಗೆ ಕೋಟಿ ಕೋಟಿ ನೀಡುವ ಪೈಪೋಟಿ ಎದುರಾದಾಗ ಹಿಂದೆ ಮುಂದೆ ನೋಡದ ಆರ್ಸಿಬಿ ತಂಡವು ಲೆಕ್ಕಾಚಾರದಂತೆ ಪೈಪೋಟಿ ಇಲ್ಲದೆ ಇರುವಾಗ ಕಡಿಮೆ ಮೊತ್ತಕ್ಕೆ ಯುವ ಆಟಗಾರರನ್ನು ಖರೀದಿ ಮಾಡಿದೆ, ಆದರೆ ಕೋಟಿ ಕೋಟಿ ನೀಡಿರುವ ಆಟಗಾರರು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫಲವಾಗುತ್ತಿರುವ ಸಂದರ್ಭದಲ್ಲಿ ಯುವ ಆಟಗಾರರು ದೇಶಿಯ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಈ ಮೂಲಕ ಆರ್ಸಿಬಿ ಹುಡುಗರು ಭರ್ಜರಿ ಸೂಚನೆ ನೀಡಿದ್ದಾರೆ.

ಶುಕ್ರವಾರ ವಿಜಯ ಹಝಾರೆ ಟೂರ್ನಿಯಲ್ಲಿ ನಡೆದ ಪಂದ್ಯಗಳಲ್ಲಿ ಆರ್ಸಿಬಿ ಆಟಗಾರರದ್ದೇ ಕಾರುಬಾರು ಎಂದರೆ ನೀವು ನಂಬಲೇಬೇಕು. ಕರ್ನಾಟಕ-ಕೇರಳ ನಡುವೆ ನಡೆದ ಪಂದ್ಯದಲ್ಲಿ ಎಲ್ಲರೂ ರೊಚ್ಚಿಗೆದ್ದು ಬ್ಯಾಟಿಂಗ್ ಪ್ರದರ್ಶಿಸಿದ್ದು ಕೊಹ್ಲಿ ಪಡೆಯ ಹುಡುಗರು ಎಂಬುದು ವಿಶೇಷ. ಇನ್ನು ಮಧ್ಯಪ್ರದೇಶ-ಆಂಧ್ರ ನಡುವಣ ಪಂದ್ಯದಲ್ಲಿ ಆರ್​ಸಿಬಿ ಹೊಸ ಆಟಗಾರ ರಜತ್ ಪಾಟಿದಾರ್ ರವರು ಮೈದಾನದ ಮೂಲೆ ಮೂಲೆಗೆ ಸಿಕ್ಸರ್ ಗಳಿಸದರು. ಕೇವಲ 61 ಎಸೆತಗಳಲ್ಲಿ 101 ರನ್ ಗಳಿಸದರು ರಜತ್. ಅಷ್ಟೇ ಅಲ್ಲದೆ ಕರ್ನಾಟಕ ಹಾಗೂ ಕೇರಳ ನಡುವೆ ನಡೆದ ಪಂದ್ಯದಲ್ಲಿ ಸಚಿನ್ ಬೇಬಿ ರವರು 63 ಎಸೆತಗಳಲ್ಲಿ 54 ರನ್ ಬಾರಿಸಿದ್ದಾರೆ. ಕಳೆದ ಪಂದ್ಯದಲ್ಲೂ ಅರ್ಧಶತಕ ಬಾರಿಸಿ ಮಿಂಚಿದ್ದ ಸಚಿನ್ ಅದ್ಭುತ ಫಾರ್ಮ್ ಮುಂದುವರೆಸಿದ್ದಾರೆ. ಇನ್ನು ಕಳೆದೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಸ್ಪೋಟಕ ಬ್ಯಾಟ್ಸ್​ಮನ್ ಮೊಹಮ್ಮದ್ ಅಜರುದ್ದೀನ್ ಕರ್ನಾಟಕದ ವಿರುದ್ಧ ಕೇವಲ 38 ಬಾಲ್ ಗಳಲ್ಲಿ ಅಜೇಯ 59 ರನ್​ ಗಳಿಸಿದರು.