ಅತ್ಯುತ್ತಮ್ಮ ಪ್ರದರ್ಶನ ನೀಡಿದ ಪೃಥ್ವಿ ಶಾ ಕುರಿತು ಷಾಕಿಂಗ್ ಹೇಳಿಕೆ ನೀಡಿದ ಡ್ಯಾಶಿಂಗ್ ಓಪನರ್ ಸೆಹ್ವಾಗ್. ಹೀಗಾ ಹೇಳೋದು ??

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ ನೀಡಿದ ಸ್ಫೋಟಕ ಪ್ರದರ್ಶನ ಸಾಕಷ್ಟು ಕ್ರಿಕೆಟ್ ದಿಗ್ಗಜರ ಪ್ರಶಂಸೆಗೆ ಕಾರಣವಾಗಿದೆ. ಇದೀಗ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪೃಥ್ವಿ ಶಾ ಪ್ರದರ್ಶನದ ಬಗ್ಗೆ ಉತ್ತಮ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಶಾ ಸಾಮರ್ಥ್ಯದ ಬಗ್ಗೆ ಸೆಹ್ವಾಗ್ ಕೊಂಡಾಡಿದ್ದಾರೆ. ಇನ್ನು ಡೆಲ್ಲಿ ಹಾಗೂ ಕೊಲ್ಕತ್ತಾ ಪಂದ್ಯದ ಬಳಿಕ ಕ್ರಿಕ್ ಬಝ್ ಜೊತೆಗೆ ಮಾತನಾಡಿದ ಸೆಹ್ವಾಗ್ ಪೃಥ್ವಿ ಶಾ ಬ್ಯಾಟಿಂಗ್ ಬಗ್ಗೆ ಅದ್ಭುತ ಮಾತುಗಳನ್ನು ಆಡಿದ್ದಾರೆ.

ಹೌದು ಈ ಸಂದರ್ಭದಲ್ಲಿ ತಾನು ಆಡುತ್ತಿದ್ದ ದಿನಗಳಲ್ಲಿ ಓವರ್ ನ ಎಲ್ಲಾ ಎಸೆತಗಳನ್ನು ಸಿಕ್ಸರ್ ಗೆ ಅಟ್ಟುವ ಯೋಚನೆ ಮಾಡುತ್ತಿದ್ದೆ. ಆದರೆ ಪೃಥ್ವಿ ಶಾ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮಾಡಿದ ಸಾಧನೆ ಮಾಡಲು ನನ್ನಿಂದ ಸಾಧ್ಯವಾಗಲಿಲ್ಲ ಎಂದಿದ್ದಾರೆ. “ಎಲ್ಲಾರು ಎಸೆತಗಳಲ್ಲಿ ಬೌಂಡರಿಗೆ ಅಟ್ಟುವುದು ಎಂದರೆ ಪ್ರತಿ ಎಸೆತವನ್ನು ಕೂಡ ಅದ್ಭುತವಾದ ಗ್ಯಾಪ್ ನಲ್ಲಿ ಆಡುವುದಾಗಿದೆ. ಅದು ನಿಜಕ್ಕೂ ಸುಲಭವಲ್ಲ. ನಾನು ನನ್ನ ವೃತ್ತಿ ಜೀವನವನ್ನು ಆರಂಭಿಸಿದಾಗಿನಿಂದ ಎಲ್ಲ ಎಸೆತಗಳನ್ನು ಸಿಕ್ಸರ್ ಗೆ ಕಳುಹಿಸುವ ಪ್ರಯತ್ನವನ್ನು ಸಾಕಷ್ಟು ಬಾರಿ ಮಾಡಿದೆ. ಆದರೆ ನನ್ನಿಂದ 18-20 ರನ್ ಗಳು ಪಡೆದುಕೊಳ್ಳಲು ಸಾಧ್ಯವಾಗಿತ್ತು.

ನನ್ನಿಂದ ಯಾವತ್ತಿಗೂ 1 ಓವರ್ ನಲ್ಲಿ 6 ಬೌಂಡರಿ ಅಥವಾ 6 ಸಿಕ್ಸರ್ ಬಾರಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ನೀವು ಅದ್ಭುತವಾದ ಟೈಮಿಂಗ್ ಹೊಂದಿರಬೇಕು ಹಾಕಿದಾಗ ಮಾತ್ರವೇ ಫೀಲ್ಡರುಗಳನ್ನು ವಂಚಿಸಿ ಬೌಂಡರಿ ಬಾರಿಸಲು ಸಾಧ್ಯವಾಗುತ್ತದೆ” ಎಂದು ವೀರೇಂದ್ರ ಸೆಹವಾಗ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸ್ನೇಹಿತರೆ ಇನ್ನು ತಗೋಬಾ ಪೃಥ್ವಿ ಶಾ ಬ್ಯಾಟಿಂಗ್ ಬಗ್ಗೆ ನೀವೇನು ಹೇಳ್ತೀರಾ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ…