ಆರ್ಸಿಬಿ ಗೆಲುವಿನ ಬಗ್ಗೆ ಕಾಲೆಳೆದ ರೋಹಿತ್ ಶರ್ಮ ಯಾಕೆ ಗೊತ್ತಾ, ಗೆಲ್ಲಬಾರದಿತ್ತ ??

ಸ್ನೇಹಿತರೆ, ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ತಂಡಕ್ಕೆ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಈ ಬಾರಿ ಆರ್ಸಿಬಿ ಪರ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಭರವಸೆಯನ್ನು ಮೂಡುತ್ತಾರಾ, ತಂಡಕ್ಕೆ ನೆರವಾಗುತ್ತಾರಾ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿತ್ತು. ಆದರೆ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಭರವಸೆಯನ್ನು ಹೆಚ್ಚಿಸಿದ್ದಾರೆ ಅಂತಾನೆ ಹೇಳಬಹುದು. ಇದೀಗ ಮೊದಲ ಪಂದ್ಯದ ಬಳಿಕ ಮ್ಯಾಕ್ಸ್ವೆಲ್ ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಬಗ್ಗೆ ಮಾತನಾಡಿದ್ದಾರೆ.

ಇನ್ನು ಸತತ ಎರಡು ವರ್ಷಗಳಿಂದ ಐಪಿಎಲ್ನಲ್ಲಿ ಸಿಡಿಸದೆ ಇದ್ದ ಸಿಕ್ಸರ್ ಬಗ್ಗೆಯೂ ಸಹ ಮಾತನಾಡಿದ್ದಾರೆ. ಮೈದಾನದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಒಂದು ಕಡೆ ನಾಯಕ ವಿರಾಟ್ ಕೊಹ್ಲಿ ಕ್ರೀಸಿನಲ್ಲಿ ಇದ್ದರೆ ನಮಗೆ ಕೆಲಸ ಒಂದು ಮಟ್ಟಕ್ಕೆ ಸುಲಭವಾಗಿ ಹೋಗುತ್ತೆ ಅಂತ ಹೇಳಿದ್ದಾರೆ. ಇನ್ನು ನೆನ್ನೆಯ ಪಂದ್ಯ ಖಂಡಿತವಾಗಿಯೂ ಒಂದು ಒಳ್ಳೆ ಅನುಭವವನ್ನು ನೀಡಿತು, ಇನ್ನು ಕಳೆದ ಒಂದು ವರ್ಷದಿಂದ ನಾನು ಒಂದೇ ಒಂದು ಸಿಕ್ಸರ್ ಕೂಡ ಹೊಡೆದಿರಲಿಲ್ಲ. ಆ ಬಗ್ಗೆ ನನಗೆ ವಿರಾಟ್ ಕೊಹ್ಲಿಯೇ ನೆನಪಿಸಿಕೊಟ್ಟರು.

ಅಲ್ಲದೆ ಈ ಬಾರಿ ಅದನ್ನು ಪೂರ್ಣಗೊಳಿಸುವಂತೆ ಕೂಡ ವಿರಾಟ್ ಹೇಳಿದರು. ಅದರಂತೆ ನಾನು ಸಿಕ್ಸಸ್ ಸಿಡಿಸಲು ಸಹಕಾರಿ ಆಯಿತು ಅಂತ ಹೇಳಿಕೊಂಡಿದ್ದಾರೆ. ಇನ್ನು ಗ್ಲೆನ್ ಮ್ಯಾಕ್ಸ್ವೆಲ್ ಮುಂಬೈ ವಿರುದ್ಧ ಮೊದಲ ಪಂದ್ಯದಲ್ಲಿ 28 ಬಾಲಲ್ಲಿ 39 ರನ್ ಗಳಿಸಿದ್ದರು. ಇನ್ನು ಸತತ ಎರಡು ವರ್ಷಗಳ ನಂತರ ಐಪಿಎಲ್ ನಲ್ಲಿ ಎರಡು ಸಿಕ್ಸರ್ ಸಿಡಿಸುವ ಮೂಲಕ ಸಿಕ್ಸರ್ ಕೊರತೆಯನ್ನು ನೀಗಿಸಿಕೊಂಡರು. ಇನ್ನು ಮೊದಲ ಪಂದ್ಯದಲ್ಲಿ ಸೋಲನ್ನು ಕಂಡ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಇದೀಗ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

2013 ರಿಂದ ಸತತವಾಗಿ ಒಂಬತ್ತನೇ ಬಾರಿಗೆ ಆರಂಭಿಕ ಪಂದ್ಯದಲ್ಲಿ ಸೋಲನ್ನು ಕಂಡಿರುವ ಮುಂಬೈ ಇಂಡಿಯನ್ಸ್ ಇದುವರೆಗೂ ಐದು ಬಾರಿ ಚಾಂಪಿಯನ್ ಆಗಿದೆ. ಆರ್ಸಿಬಿ ವಿರುದ್ಧ ಸೋಲಿನ ಬಳಿಕ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮ ಮೊದಲ ಪಂದ್ಯದ ಗೆಲುವಿಗಿಂತ ಚಾಂಪಿಯನ್ಶಿಪ್ನಲ್ಲಿ ಗೆಲ್ಲುವುದು ಮುಖ್ಯ ಅಂತ ಹೇಳಿದ್ದಾರೆ. ಆ ಮೂಲಕ ಆರ್ಸಿಬಿ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಹಾಗಾದ್ರೆ ರೋಹಿತ್ ಶರ್ಮಾ ಅವರ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ.