ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕ್ರಿಕೆಟ್ ಆಟಗಾರ, ಕನ್ನಡದ ಎಲ್ಲಾ ದಾಖಲೆಗಳನ್ನು ದೂಳೆಬ್ಬಿಸಲು ಬರುತ್ತಿದ್ದಾರೆ !!

ಸ್ನೇಹಿತರೆ, ನಟನೆ ಎಂಬುದು ಎಷ್ಟೂ ಜನರ ಕನಸಾಗಿರುತ್ತದೆ ಒಳ್ಳೆಯ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಬೇಕು ಎನ್ನುವ ಆಸೆ ಎಷ್ಟೂ ಜನರದ್ದಾದಾಗಿರುತ್ತದೆ ಹಾಗೆ ತಾನೊಬ್ಬ ಕ್ರಿಕೆಟಿಗನಾಗಬೇಕು ಎಂದು ಸಹ ಬಹುತೇಕ ಯುವಕರ ಕನಸಾಗಿರುತ್ತದೆ. ಆದರೆ ಕೆಲವರ ಹಣೆಬರಹದಲ್ಲಿ ಎರಡನ್ನು ಮಾಡಬಹುದಾದ ಅದೃಷ್ಟ ದೊರಕುತ್ತದೆ. ಹೌದು ಮೊದಲಿನಿಂದಲೂ ಕ್ರಿಕೆಟ್ನ ಜೊತೆಗೆ ಸಿನಿಮಾರಂಗದಲ್ಲಿಯೂ ನಿಕಟವಾದ ಸಂಬಂಧವಿದ್ದು, ಎಷ್ಟೂ ಆಟಗಾರರು ಕೆಲವು ಸಣ್ಣ ಸಣ್ಣ ಪಾತ್ರಗಳಿಗೆ ಬಣ್ಣ ಹಚ್ಚಿದ್ದು ಉಂಟು. ಅದೇ ರೀತಿ ಇದೀಗ ಕನ್ನಡದ ಕ್ರಿಕೆಟ್ ಆಟಗಾರ ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಹಾಗಾದರೆ ಆಟಗಾರ ಯಾರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಪ್ರವೀಣ್ ಶ್ರೀ ಎಂಬ ಕ್ರಿಕೆಟ್ ಆಟಗಾರ ಕರ್ನಾಟಕವನ್ನು ಅಂಡರ್-19 ಹಾಗೂ ಅಂಡರ್ 22 ಮತ್ತು ರೈಲ್ವೇಸ್ ಟೂರ್ನಮೆಂಟ್ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಯಶಸ್ಸು ಕಂಡವರು. ಸಾಕಷ್ಟು ಜನರ ಪ್ರೀತಿ ಗೆದ್ದು ಬಂದಿದ್ದ ಪ್ರವೀಣ್ ಅವರು ಕೆಪಿಸಿಸಿ ಹಾಗೂ ಕೆಸಿಸಿ ಗೌರ್ನಮೆಂಟ್ಗಳಲ್ಲಿ ಸಹ ಮಿಂಚಿ ಹೆಸರುವಾಸಿಯಾದರು. ಭಾರತ ತಂಡಕ್ಕೆ ಆಡಬೇಕೆಂದು ಕನಸು ಕಟ್ಟಿದ್ದರು. ಆದರೆ ಇದೀಗ ಸಿನಿಮಾರಂಗ ದತ್ತ ಹೆಚ್ಚು ಒಲವು ಮೂಡಿ ಅಭಿನಯದತ್ತ ಮುಖ ಮಾಡಿದ್ದಾರೆ. ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿಯಾಗಿರುವ ಪ್ರವೀಣ್ ಅವರು ನಿರ್ದೇಶಕಿ ವಿಸ್ಮಯ ಗೌಡ ಅವರು ಆಕ್ಷನ್ ಕಟ್ ಹೇಳುತ್ತಿರುವ ಡಿಯರ್ ಕಣ್ಮಣಿ ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಹೀರೋ ಆಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಬ್ಬ ನಾಯಕ ನಟ ಅಷ್ಟೇ ಅಲ್ಲದೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕನಾಗಿ ತಂಡಕ್ಕೆ ಕಪ್ಪು ಗೆಲ್ಲಿಸಿಕೊಟ್ಟ ಅದ್ಭುತ ಆಟಗಾರ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ. ಪ್ರವೀಣ್ ಅವರು ಕೂಡ ಸುದೀಪ್ ಅವರ ಹಾದಿಯನ್ನೇ ಹಿಡಿಯುತ್ತಿದ್ದು, ತಮ್ಮ ಚಿತ್ರದ ಕುರಿತು ಮಾತನಾಡಿದ ಪ್ರವೀಣ್ ಅವರು ನಾನು ಕ್ರಿಕೆಟ್ ಆಟ ಆಡುವಾಗ ನನಗೆ ಮೊದಲು ಯಾರ ಬೆಂಬಲವೂ ಸಿಕ್ಕಿರಲಿಲ್ಲ ಸ್ವಂತ ಪ್ರಯತ್ನದಿಂದ ನಾನು ನನ್ನ ಕೈಯಲ್ಲಾದ ಸಾಧನೆಯನ್ನು ಮಾಡಿದೆ. ನಾನೊಬ್ಬ ಸುದೀಪ್ ಅವರ ಪಕ್ಕ ಅಭಿಮಾನಿ ತೆರೆಯ ಮೇಲೆ ಅವರ ನಟನೆಯನ್ನು ಕಂಡು ಸಹ ನಾಯಕ ನಟನಾಗಬೇಕೆಂಬ ಆಸೆ ಹೊಂದಿದ್ದೆ. ನನಗೆ ಅವರೇ ರೋಲ್ ಮಾಡೆಲ್ ನಾನು ಕ್ರಿಕೆಟ್ನಲ್ಲಿ ಯಾವ ರೀತಿ ಇಷ್ಟಪಟ್ಟು ಆಟವಾಡಿದ್ದೇನೋ ಅದೇ ರೀತಿ ಚಿತ್ರೋದ್ಯಮದಲ್ಲಿ ಸಹ ಅಷ್ಟೇ ಕಷ್ಟಪಟ್ಟು ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ.

ಡಿಯರ್ ಕಣ್ಮಣಿ ಚಿತ್ರ ಅದ್ಭುತವಾದ ಕಥೆಯನ್ನು ಹೊಂದಿರುವ ಚಿತ್ರ ನಾನು ಈ ಚಿತ್ರ ಮಾಡುತ್ತಿದ್ದೇನಿ ಎಂಬುದು ನನಗೆ ಆಶ್ಚರ್ಯವಾಗುತ್ತದೆ. ಇದು ನಿಜವೋ ಸುಳ್ಳೋ ಎಂಬಂತೆ ಭಾಸವಾಗುತ್ತದೆ ಎಂದು ಹೇಳಿದರು. ಕ್ರಿಕೆಟಿಗನಾಗಿ ಮೈದಾನದಲ್ಲಿ ಅದ್ಭುತವಾಗಿ ಮುಂಚೆ ಇದೀಗ ತೆರೆ ಮೇಲೆ ಬರಲು ಸಜ್ಜಾಗಿರುವ ಪ್ರವೀಣ್ ಶ್ರೀ ಅವರು ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ…