ಕೆಜಿಎಫ್ ಅಲ್ಲ ಯಾವ ಸಿನಿಮಾ ಕೂಡ ಮುಂದೆ ಬರಲ್ಲ, ಯುವರತ್ನ ಅಮೆಜಾನ್ಗೆ ಸೆಲ್ ಆಗಿರುವ ಮೊತ್ತ ಕೇಳಿದರೆ ದಂಗಾಗ್ತೀರಾ !!

ಸ್ನೇಹಿತರೆ, ಕಳೆದ ವಾರವಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ. ನೆನ್ನೆ ಅಷ್ಟೇ ನಡೆದ ಆನ್ಲೈನ್ ಮೀಟಿಂಗ್ನಲ್ಲಿ ನಟ ಪುನೀತ್ ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ ರಾಮ್ ಮತ್ತು ಚಿತ್ರದ ನಿರ್ಮಾಪಕರಾಗಿರುವ ವಿಜಯ್ ಕಿರಗಂದೂರು ಈ ಒಂದು ವಿಷಯವನ್ನು ಹಂಚಿಕೊಂಡಿದ್ದಾರೆ. ಇನ್ನು ಯುವರತ್ನ ಸಿನಿಮಾ ಏಪ್ರಿಲ್ ಒಂಬತ್ತರಿಂದ ಅಮೆಜಾನ್ ನಲ್ಲಿ ಪ್ರೈಮ್ ಪ್ರಸಾರವಾಗಲಿದೆ.

ಅಲ್ಲದೆ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾ ಮಣ್ಣ ಅದಾಗಲೇ ಬಿಡುಗಡೆ ಮಾಡುತ್ತಿರುವ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ಕ್ಲಿಷ್ಟಕರ ಸನ್ನಿವೇಶ ಸಿನಿಮಾ ಬಿಡುಗಡೆಯಾದಾಗಿನಿಂದಲೂ ಬಹಳ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು ಆದರೆ ಕೊರೋನಾದ ಕಾರಣದಿಂದ ಈ ಕಷ್ಟದ ಪರಿಸ್ಥಿತಿಯಲ್ಲಿ ಈ ಸಿನಿಮಾವನ್ನು ಅಮೆಜಾನ್ನಲ್ಲಿ ಬಿಡುಗಡೆ ಮಾಡಲೇಬೇಕಾಯಿತು ಅಂತ ಸಿನಿಮಾ ತಂಡ ಹೇಳಿಕೊಳ್ಳುತ್ತಿದೆ.

ಬಿಡುಗಡೆಯಾದ ಒಂದು ವಾರದಲ್ಲಿ ಒ ಟಿ ಟಿ ಯಲ್ಲಿ ಬರುತ್ತಿರುವ ಯುವರತ್ನ ಸಿನಿಮಾವನ್ನು ಅಮೆಜಾನ್ ಕಂಪನಿ ಅತಿ ಹೆಚ್ಚು ಬೆಲೆಗೆ ಕೊಂಡುಕೊಂಡಿದ್ದೆ ಎಂದು ಹೇಳಲಾಗುತ್ತದೆ. ಈ ಮೂಲಕ ಕನ್ನಡದಲ್ಲಿ ಡಿಜಿಟಲ್ ರೈಟ್ಸ್ ವಿಚಾರದಲ್ಲಿ ಈವರೆಗೂ ದಾಖಲೆ ನಿರ್ಮಿಸಿದ್ದ ಯಶ್ ನಟನೆಯ ಕೆಜಿಎಫ್ ಸಿನಿಮಾದ ದಾಖಲೆಯನ್ನು ಯುವರತ್ನ ಸಿನಿಮಾ ಬ್ರೇಕ್ ಮಾಡಿದೆ. ಅಂದಹಾಗೆ ಹೊಂಬಾಳೆ ಬ್ಯಾನರಿನಡಿ ಮೂಡಿಬಂದ ಕೆಜಿಎಫ್ ಸಿನಿಮಾವನ್ನು 18 ಕೋಟಿ ರೂಪಾಯಿಗೆ ಖರೀದಿ ಆಗಿತ್ತು. ಆದರೆ ಯುವರತ್ನ ಸಿನಿಮಾ ಕೆಜಿಎಫ್ ಗಿಂತ ಹೆಚ್ಚು ಬೆಲೆಗೆ ಸೇಲ್ ಆಗಿದೆ ಎನ್ನುವ ಸುದ್ದಿ ಇದೀಗ ಕೇಳಿಬರುತ್ತಿದೆ.

ಗಾಂಧಿನಗರದಲ್ಲಿ ಕೆಲವು ಊಹಾಪೋಹಗಳು ಕೇಳಿಬರುತ್ತಿವೇ ಬರೋಬ್ಬರಿ ಸಿನಿಮಾ ಅಮೆಜಾನ್ ಗೆ 28 ಕೋಟಿಗೆ ಸೇಲ್ ಆಗಿರಬಹುದು ಎಂಬ ಮಾತುಗಳು ಎಲ್ಲೆಡೆ ಹರಿದಾಡುತ್ತಿವೆ, ಆದರೆ ನಿಖರವಾಗಿ ಎಷ್ಟು ಮೊತ್ತ ಅನ್ನೋದರ ಬಗ್ಗೆ ಸಿನಿಮಾ ತಂಡ ಎಲ್ಲೂ ಕೂಡ ಬಾಯಿಬಿಟ್ಟಿಲ್ಲ. ಯುವರತ್ನ ಸಿನಿಮಾ ರಿಲೀಸ್ ಆದ ಕೂಡಲೇ ಸರ್ಕಾರ ಕೋರೋನಾ ಕಾರಣದಿಂದಾಗಿ ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಆಸನ ಭರ್ತಿಗೆ ಅವಕಾಶವನ್ನ ನೀಡಿತ್ತು. ಆದರೆ ಚಿತ್ರ ತಂಡ ಹಾಗೂ ಚಿತ್ರರಂಗದ ಒತ್ತಡಕ್ಕೆ ಮಣಿದು ಏಪ್ರಿಲ್ 7ರವರೆಗೂ ಶೇಕಡ ನೂರರಷ್ಟು ಆಸನ ಭರ್ತಿಗೆ ಅವಕಾಶ ನೀಡಿತ್ತು. ಹೀಗಾಗಿ ಯುವ ರತ್ನ ಸಿನಿಮಾ ತಂಡ ಸಿನಿಮಾವನ್ನು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ.