ನಟ ಸುದೀಪ್ ಆರೋಗ್ಯದಲ್ಲಿ ವ್ಯತ್ಯಾಸ,, ಬಿಗ್ ಬಾಸ್ ನಿರೂಪಣೆ ಇಲ್ವಾ..? ಬೇರೆ ಯಾರು ಮಾಡುತ್ತಾರೆ ??

ಸ್ನೇಹಿತರೆ, ನಟ ಕಿಚ್ಚ ಸುದೀಪ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿರುವ ಕಾರಣ ಬಿಗ್ ಬಾಸ್ ಸೇರಿದಂತೆ ಸಿನಿಮಾ ಚಿತ್ರೀಕರಣದಲ್ಲಿಯೂ ಸುದೀಪ್ ಅವರು ಪಾಲ್ಗೊಳ್ಳುತ್ತಿಲ್ಲ. ಹೌದು ಕಿಚ್ಚ ಸುದೀಪ್ ಅವರು ಸತತ ಎಂಟು ಸೀಸನ್ ಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಬಹಳ ಯಶಸ್ವಿಯಾಗಿ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಪ್ರತಿ ವಾರದಲ್ಲಿ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದರು. ಆದರೆ ಅವರ ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಉಂಟಾಗಿರುವ ಕಾರಣ, ಈ ವಾರ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆ ಮಾಡುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಇನ್ನು ಸುದೀಪ್ ಅವರಿಗೆ ಕೋರೋನಾ ಆಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ. ಅಲ್ಲದೆ ಸುದೀಪ್ ಅವರ ಆಪ್ತರಾಗಿರುವ ಜಾಕ್ ಮಂಜು ಅವರನ್ನು ಮಾಹಿತಿಗಾಗಿ ಸಂಪರ್ಕಿಸಲು ಯತ್ನಿಸಲಾಯಿತಾದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಇದೀಗ ಸುದೀಪ್ ಅವರು ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ ರೋಣದ’ ಬಿಡುಗಡೆ ದಿನಾಂಕ ಹಿಂದಷ್ಟೇ ಘೋಷಣೆಯಾಗಿದ್ದು, ಸಿನಿಮಾ ಆಗಸ್ಟ್ 19 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಇನ್ನು ಸುದೀಪ್ ಅವರ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಯೂ ಇದೆ ತಿಂಗಳು ಆಗಬೇಕಿತ್ತು.
ಆದರೆ ಕೋರೋನಾ ಪ್ರಕರಣಗಳು ಏರುತ್ತಿರುವ ಕಾರಣದಿಂದ ಚಿತ್ರಮಂದಿರಗಳ ಮೇಲೆ ಸರ್ಕಾರವು ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಒಟ್ಟಿನಲ್ಲಿ ಕಿಚ್ಚ ಸುದೀಪ್ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶಿಸೋಣ. ಇನ್ನು ನೀವು ಕೂಡ ಕಿಚ್ಚ ಸುದೀಪ್ ಅವರ ನಿರೂಪಣೆಯನ್ನು ಮಿಸ್ ಮಾಡಿಕೊಳ್ಳುವುದಾದರೆ ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ…