ಫಿಲಿಪಿ ಸ್ಥಾನಕ್ಕೆ ಫಿನ್ ಅಲೆನ್,, ಬೇಕೇ ಬೇಕು ಅಂತ ಆರ್ಸಿಬಿ ಕರೆತಂದಿದ್ದು ಯಾಕೆ ಗೊತ್ತೇ ??

ಸ್ನೇಹಿತರೆ, ಆರ್ಸಿಬಿ ಅಭಿಮಾನಿಗಳು ಈ ಬಾರಿ ತುಂಬಾನೇ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಮೊದಲ ಪಂದ್ಯದಲ್ಲಿ ಸಿಕ್ಕ ಶುಭಾರಂಭ ಅಂತನೇ ಹೇಳಬಹುದು. ಇನ್ನು ಮತ್ತೊಂದು ಕಡೆ ತಂಡ ತುಂಬಾನೇ ಬ್ಯಾಲೆನ್ಸಿಂಗ್ ಆಗಿರೋದು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ತಂಡದಲ್ಲಿ ಈ ಬಾರಿ ಆಪ್ಷನ್ಸ್ ಗಳು ಜಾಸ್ತಿ ಇರೋದು. ಇನ್ನು ಮೊದಲ ಪಂದ್ಯದಲ್ಲೇ ಮ್ಯಾಕ್ಸ್ವೆಲ್ ಮೇಲೆ ಭರವಸೆ ಮೂಡಿದೆ. ಅಲ್ಲದೆ ಹರ್ಷದ್ ಪಟೇಲ್ ಅದ್ಭುತ ಸೃಷ್ಟಿಸಿದ್ದಾರೆ. ಇದೀಗ ಮೊದಲ ಮ್ಯಾಚ್ ಬಳಿಕ ಆರ್ಸಿಬಿಯ ಆ ಮತ್ತೊಬ್ಬ ಯುವ ಆಟಗಾರ ಫಿನ್ ಅಲೆನ್ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಆರ್ಸಿಬಿಯಲ್ಲಿ ಆಪ್ಷನ್ ಗಳು ಹೆಚ್ಚಾಗಿವೆ ಅನ್ನೋ ಕಾರಣಕ್ಕೆ ಫಿನ್ ಅಲೆನ್ ಕೂಡ ಉದಾಹರಣೆಯಾಗಿದ್ದಾರೆ. ಐಪಿಎಲ್ ನಲ್ಲಿ ಆರ್ಸಿಬಿಗೆ ಆಯ್ಕೆಯಾದ ಬಳಿಕ ರಾಷ್ಟ್ರೀಯ ತಂಡಕ್ಕೆ ಸೆಲೆಕ್ಟ್ ಆದ ಅಲೆನ್ ಬಾಂಗ್ಲಾ ವಿರುದ್ಧದ ಟಿ-20 ಯಲ್ಲಿ ಮಿಂಚಿನ ಓಟದ ಪ್ರದರ್ಶನವನ್ನು ನೀಡಿದರು. ಇನ್ನು ರಾಷ್ಟ್ರೀಯ ತಂಡದಲ್ಲಿ ಆಡುವ ಮೂಲಕ ಕಾನ್ಫಿಡೆನ್ಸ್ ಅನ್ನು ಹೆಚ್ಚಿಸಿಕೊಂಡಿರುವ ಕಿವಿ‌ಸ್ ಕ್ರಿಕೆಟಿಗ, ಇದೀಗ ಆರ್ಸಿಬಿಯಲ್ಲಿ ಕಮಾಲ್ ಮಾಡೋದಕ್ಕೆ ರೆಡಿಯಾಗಿದ್ದಾರೆ. ಆರ್ಸಿಬಿ ಆ ಪ್ರಾಕ್ಟೀಸ್ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ಅಲ್ಲೆನ್ ತುಂಬಾನೇ ಖುಷಿಯಾಗುತ್ತಿದೆ ಅಂತಿದ್ದಾರೆ.

ಕಳೆದ ಏಳು ದಿನಗಳಿಂದ ಐಸೋಲೇಷನ್ ನಲ್ಲಿದ್ದೆ. ಈಗ ತುಂಬಾನೇ ಸಮಾಧಾನ ಆಗುತ್ತದೆ ಭಾರತ ತುಂಬಾನೇ ಕೂಲ್ ಕೂಲ್ ಅನಿಸುತ್ತಿದೆ. ಇನ್ನು ತಂಡದ ಜೊತೆ ಬೆರೆಯಲು ಪ್ರಯತ್ನ ನಡೆಸಿದ್ದೇನೆ. ಇನ್ನು ನಮ್ಮ ದೇಶದವರೇ ಆದ ಸೀನಿಯರ್ ಮೈಕ್ ಹೆಸನ್ ಇದ್ದಾರೆ. ಇನ್ನು ತಂಡದ ಎಲ್ಲಾ ಆಟಗಾರರು ಸ್ನೇಹದಿಂದ ನಡೆಸಿಕೊಳ್ಳುತ್ತಿದ್ದಾರೆ. ಇನ್ನು ತಂಡಕ್ಕೆ ನನ್ನ ನೆರವು ಯಾವ ರೀತಿ ಬೇಕೋ ಆ ರೀತಿ ಕೊಡೋಕೆ ನಾನು ರೆಡಿಯಾಗಿದ್ದೇನೆ ಅಂತ ಫಿನ್ ಅಲೆನ್ ಹೇಳಿದ್ದಾರೆ.

ಇನ್ನು ಪ್ರಾಕ್ಟೀಸ್ ಬೇಳೆ ಬಿಗ್ ಹಿಟ್ ಗಳನ್ನು ಸಿಡಿಸಿದ್ದ ಅಲೆನ್ ಬೌಂಡರಿ ಸಿಕ್ಸರ್ ಗಳನ್ನು ಸಿಡಿಸಿ ತಮ್ಮ ಸಾಮರ್ಥ್ಯ ಏನು ಅನ್ನೋದನ್ನ ತೋರಿಸಿಕೊಟ್ಟರು. ಇನ್ನು ಸ್ಪಿನ್ನರ್ಸ್ ಗಳ ವಿರುದ್ಧ ಅದ್ಭುತವಾಗಿ ಆಟವಾಡುವ ಸಾಮರ್ಥ್ಯ ಅಲೆನ್ ಗೆ ಇದೆ. ಇನ್ನು ಮೊದಲ ಬಾರಿಗೆ ಐಪಿಎಲ್ ಗೆ ಆರ್ಸಿಬಿ ತಂಡದ ಮೂಲಕ ಕಾಲಿಡುತ್ತಿರುವ ಅಲೆನ್, ಭಾರತದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಫಿನ್ ಅಲೆನ್ ಪ್ರಾಕ್ಟೀಸ್ ಅದಾಗಲೇ ಶುರುವಾಗಿದ್ದು, ಆದಷ್ಟು ಬೇಗ ಅವರು ಕಣಕ್ಕಿಳಿಯಲಿ ಅಂತ ಆಶಿಸೋಣ…