ರವಿಚಂದ್ರನ್ ಸದಾ ಕಪ್ಪು ಬಟ್ಟೆ ಹಾಕುವುದು ಯಾಕಂತೇ ಗೊತ್ತೇ ?? ಎಲ್ಲರೆದುರು ಗುಟ್ಟು ರಟ್ಟು ಮಾಡಿದ ಕಿಚ್ಚ ಸುದೀಪ್..!

ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟ ಸುದೀಪ್ ಉತ್ತಮ ಒಡನಾಟ ಹೊಂದಿದ್ದಾರೆ. ಅದೇ ಆತ್ಮೀಯತೆಯ ಕಾರಣದಿಂದ ಕಿಚ್ಚ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ. ಹೌದು ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ‘ಕೋಟಿಗೊಬ್ಬ 3’ ಚಿತ್ರತಂಡ ದೊಡ್ಡ ಕಾರ್ಯಕ್ರಮ ನಡೆಸಿದೆ. ಇದರಲ್ಲಿ ಸ್ಯಾಂಡಲ್ವುಡ್ನ ಅನೇಕರು ಭಾಗಿಯಾಗಿದ್ದರು. ವೇದಿಕೆ ಮೇಲೆ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು ಇನ್ನು ಇದೇ ವೇಳೆ ರವಿಚಂದ್ರನ್ ಅವರು ಯಾವಾಗಲೂ ಕಪ್ಪು ಬಟ್ಟೆ ಧರಿಸುವುದು ಯಾಕೆ ಎಂಬುದನ್ನು ಸುದೀಪ್ ಬಹಿರಂಗಪಡಿಸಿದರು.

“ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡಿಕೊಂಡು ನಾನು ಕೂಡ ಅವರ ರೀತಿಯೇ ಆಗಬೇಕು ಎಂದು ಕಪ್ಪುಬಟ್ಟೆ ಹಾಕುತ್ತಿದೆ. ನಾನು ಬ್ಲಾಕ್ ಬಟ್ಟೆ ಹಾಕಲು ಕಾರಣವೇ ರವಿ ಸರ್. ನೀವು ಯಾವಾಗಲೂ ಯಾಕೆ ಬ್ಲಾಕ್ ಬಟ್ಟೆ ಹಾಕುತ್ತೀರಿ ಎಂದು ಅವರನ್ನು ಒಮ್ಮೆ ನಾನು ಕೇಳಿದ್ದೆ. ಅದಕ್ಕೆ ಎರಡು ಕಾರಣ ಇದೆ ಅಂದರು, ಒಂದು ನಾವು ಬೆಳ್ಳಗೆ ಕಾಣುತ್ತೇವೆ. ಎರಡನೆಯದು ನಾವು ತೆಳ್ಳಗೆ ಕಾಣುತ್ತೇವೆ ಅಂತ ರವಿಚಂದ್ರನ್ ಹೇಳಿದರು” ಎಂದಿದ್ದಾರೆ ಸುದೀಪ್.

ರವಿಚಂದ್ರನ್ ಬಗ್ಗೆ ಬಹಳ ಗೌರವದ ಮಾತುಗಳನ್ನು ಸುದೀಪ್ ಹೇಳಿದ್ದಾರೆ. ರವಿಚಂದ್ರನ್ ರೀತಿಯ ದೊಡ್ಡ ಕಲಾವಿದರು ಈ ವೇದಿಕೆಯಲ್ಲಿ ನಿಂತುಕೊಂಡು ಸುದೀಪ್ ನನ್ನ ದೊಡ್ಡ ಮಗ ಎಂದಾಗ ನನಗೆ ಎಲ್ಲಿಲ್ಲದ ಖುಷಿ ಆಗುತ್ತೆ. ಒಬ್ಬ ಕಲಾವಿದನಾಗಿ ನನ್ನ ಬಗ್ಗೆ ಹೋಗಳುವುದು ಬೇರೆ. ಮನಃಪೂರ್ವಕವಾಗಿ ನನ್ನನ್ನು ದೊಡ್ಡಮಗ ಎನ್ನುವುದೇ ಬೇರೆ. ಆ ಸ್ಥಾನ ಕೊಟ್ಟಿದ್ದಕ್ಕೆ ಥ್ಯಾಂಕ್ಯು ಸೋ ಮಚ್ ಎಂದು ಕ್ರೇಜಿಸ್ಟಾರ್ ಗೆ ಧನ್ಯವಾದ ಸಲ್ಲಿಸಿದರು.

ಇನ್ನು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಅನೇಕ ಸ್ಟಾರ್ಗಳು ಭಾಗವಹಿಸಿದ್ದರು. ಶಿವರಾಜ್ಕುಮಾರ್, ರಮೇಶ್ ಅರವಿಂದ್, ಸುನೀಲ್ ಕುಮಾರ್ ದೇಸಾಯಿ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸುದೀಪ್ ಅವರ 25ವರ್ಷಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಸಾವಿರಾರು ಅಭಿಮಾನಿಗಳು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇನ್ನು ನೀವು ಕೂಡ ಕಿಚ್ಚ ಸುದೀಪ್ ಅವರ ಅಭಿಮಾನಿ ಆಗಿದ್ದಲ್ಲಿ ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ…