ವಾರ್ನರ್ ಅಲ್ಲ, ರೈನಾ ಅಲ್ಲ, ವಿರಾಟ್ ಅಲ್ಲ, ಈ ಆಟಗಾರ IPL ಕಿಂಗ್ ಎನ್ನುತ್ತಿವೆ ಈ ಅಂಕಿ ಅಂಶಗಳು, ಯಾರು ಗೊತ್ತೇ ??

ಸ್ನೇಹಿತರೆ, 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 22ನೇ ಪಂದ್ಯ ಮಂಗಳವಾರ ಏಪ್ರಿಲ್ 27 ಅಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯಿತು. ಟೂರ್ನಿಯಲ್ಲಿ ಸಮ ಬಲವನ್ನು ಸಾಧಿಸಿದ ಎರಡು ತಂಡಗಳ ನಡುವೆ ರೋಚಕ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಬಿ ಡಿವಿಲಿಯರ್ಸ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.

172 ರನ್ ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಹಂತದವರೆಗೂ ಹೋರಾಟ ನಡೆಸಿ 20 ಓವರುಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ರನ್ನ ರೋಚಕ ಜಯ ಸಾಧಿಸಿತು. ಪ್ರಸ್ತುತ ಪಂದ್ಯದಲ್ಲಿ 42 ಎಸೆತಗಳಿಗೆ ಅಜೇಯ 75 ರನ್ ಬಾರಿಸಿದ ಎಬಿ ಡಿವಿಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.ಹಾಗೂ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಎಬಿ ಡಿವಿಲಿಯರ್ಸ್ ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲುಗಲ್ಲನ್ನು ಮುಟ್ಟಿದ್ದಾರೆ.

ಹೌದು ಎಬಿ ಡಿವಿಲಿಯರ್ಸ್ 5000 ರನ್ ಗಳನ್ನು ಪೂರೈಸಿದ್ದರು. ಹೀಗೆ 5000 ಪೂರೈಸುವ ಮೂಲಕ ಎಬಿ ಡಿವಿಲಿಯರ್ಸ್ ಸುರೇಶ್ ರೈನಾ ಮತ್ತು ಡೇವಿಡ್ ವಾರ್ನರ್ ಗಿಂತ ಡೇಂಜರಸ್ ಬ್ಯಾಟ್ಸ್ ಮ್ಯಾನ್ ಎಂದು ಸಾಬೀತುಪಡಿಸಿದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಐದು ಸಾವಿರ ರನ್ ಪೂರೈಸಿದ ಆಟಗಾರ ಎಂಬ ಸಾಧನೆಯನ್ನು ಎಬಿಡಿ ಮಾಡಿದ್ದಾರೆ. ಕೇವಲ 3288 ಎಸೆತಗಳಲ್ಲಿ ಎಬಿಡಿ 5000 ರನ್ ಗಳನ್ನು ಪೂರೈಸಿ ಅತಿ ಕಡಿಮೆ ಎಸೆತಗಳಲ್ಲಿ ಐದು ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೊಸ ಮೈಲುಗಲ್ಲನ್ನು ಸೃಷ್ಟಿಸಿದ್ದಾರೆ.

ಎಬಿ ಡಿವಿಲಿಯರ್ಸ್ ಹೊರತುಪಡಿಸಿ ಡೇವಿಡ್ ವಾರ್ನರ್ 3544 ಎಸೆತಗಳಲ್ಲಿ 5 ಸಾವಿರ ರನ್ ಪೂರೈಸಿದ್ದರು. ಇನ್ನು ಸುರೇಶ್ ರೈನಾ 3620 ಎಸೆತಗಳಲ್ಲಿ 5000 ರನ್ ಗಳನ್ನು ಪೂರೈಸಿದ್ದರು. ಸ್ನೇಹಿತರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು, ನೀವು ಕೂಡ ಆರ್ಸಿಬಿ ಅಭಿಮಾನಿಯಾಗಿದ್ದಲ್ಲಿ ನಮಗೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ…