ಸುದೀಪ್ ಬದಲಿಗೆ ಈ ವಾರ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುತ್ತಾರಾ ಉಪೇಂದ್ರ..?

ಅಭಿನಯ ಚಕ್ರವರ್ತಿ, ಅಭಿಮಾನಿಗಳ ನೆಚ್ಚಿನ ಕಿಚ್ಚ ಸುದೀಪ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇನ್ನು ಈ ಬಗ್ಗೆ ಟ್ವಿಟರ್ ನಲ್ಲಿ ಸ್ವತಹ ಸುದೀಪ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವುದು ಆಗಿ ಸ್ಪಷ್ಟಪಡಿಸಿರುವ ಕಿಚ್ಚ ಸುದೀಪ್ ಅವರು ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಇನ್ನು “ಅನಾರೋಗ್ಯಕ್ಕೀಡಾಗಿದ್ದೇನೆ ವಾರದೊಳಗೆ ಚೇತರಿಸಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯ ಅಗತ್ಯವಿದೆ, ಆದ್ದರಿಂದ ವಾರಾಂತ್ಯದ ಬಿಗ್ ಬಾಸ್ ಸಂಚಿಕೆಯಲ್ಲಿ ಭಾಗಿಯಾಗುತ್ತಿಲ್ಲ.

ಇನ್ನು ಈ ವಾರದ ಬಿಗ್ ಬಾಸ್ ಎಲಿಮಿನೇಷನ್ ಗಾಗಿ ಕ್ರಿಯೇಟಿವಿಟಿ ಕೈಗೊಳ್ಳುತ್ತಿರುವ ಇನ್ನೋವೇಟಿವ್ ಪ್ಲಾನನ್ನು ತಿಳಿದುಕೊಳ್ಳುವ ಕುತೂಹಲ ಇದೆ” ಇಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಕಿಚ್ಚ ಆರೋಗ್ಯದಲ್ಲಿ ತೊಂದರೆ ಉಂಟಾಗಿರುವ ಹಿನ್ನೆಲೆ ಬಿಗ್ ಬಾಸ್ ಕಾರ್ಯಕ್ರಮದಿಂದ ಸುದೀಪ್ ಹಿಂದೆ ಸರಿದಿದ್ದಾರೆ. ವಾರಾಂತ್ಯದಲ್ಲಿ ಸುದೀಪ್ ಎರಡು ಸಂಚಿಕೆ ನಡೆಸಿಕೊಡುತ್ತಿದ್ದರು. ಆದರೆ ಈ ವಾರ ಸುದೀಪ್ ಇಲ್ಲದೆ ಆ ಸಂಚಿಕೆಯನ್ನು ಯಾರು ನಡೆಸಿಕೊಡುವವರು ಎಂಬ ಕ್ಯೂರಿಯಾಸಿಟಿ ಸ್ವತಃ ಕಿಚ್ಚನಿಗೆ ಉದ್ಭವವಾಗಿದೆ.

ಈ ಬಗ್ಗೆ ಕಲರ್ಸ್ ಚಾನೆಲ್ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾಹಿತಿ ನೀಡಿದ್ದು “ಆರೋಗ್ಯದ ತೊಂದರೆ ಇರುವುದರಿಂದ ಕಿಚ್ಚ ಸುದೀಪ್ ಅವರು ಈ ವಾರ ಬಿಗ್ ಬಾಸ್ ಚಿತ್ರೀಕರಣದಲ್ಲಿ ಭಾಗವಹಿಸುತ್ತಿಲ್ಲ. ಆದರೆ ನಾಳೆ ಮತ್ತು ಭಾನುವಾರ ಬಿಗ್ ಬಾಸ್ ಎಪಿಸೋಡ್ ಗಳು 9:00 ಗಂಟೆಗೆ ಎಂದಿನಂತೆ ಪ್ರಸಾರವಾಗಲಿವೆ. ಜೊತೆಯಲ್ಲಿ ಈ ವಾರ ಅತಿ ಕಡಿಮೆ ಮತಗಳನ್ನು ಪಡೆದ ಒಬ್ಬ ಕಂಟೆಸ್ಟೆಂಟ್ ಮನೆಯಿಂದ ಹೊರ ಹೋಗಲಿದ್ದಾರೆ. ಇನ್ನು ಎಲಿಮಿನೇಷನ್ ಹೇಗೆ ನಡೆಯುತ್ತದೆ ಎನ್ನುವ ಕುತೂಹಲ ನಿಮಗಿದ್ದರೆ ಹೇಗೆಲ್ಲಾ ಮಾಡಬಹುದು ಎಂಬ ಆಯ್ಕೆಗಳನ್ನು ಎದುರಿಗೆ ಇಟ್ಟುಕೊಂಡು ಬಿಗ್ ಬಾಸ್ ತಂಡ ಕೆಲಸ ಮಾಡುತ್ತಿದೆ” ಎಂದಿದ್ದಾರೆ.

ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ ಸೂಪರ್ ಸ್ಟಾರ್ ಉಪೇಂದ್ರ ಈ ಬಾರಿ ವಾರದ ಬಿಗ್ ಬಾಸ್ ಶೋ ನಡೆಸಿಕೊಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ವಿಷಯ ತಿಳಿದ ಅಭಿಮಾನಿಗಳು ಸಕ್ಕತ್ ಕ್ಯೂರಿಯಸ್ ಆಗಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಒಟ್ಟಿನಲ್ಲಿ ಈ ವಾರದ ಬಿಗ್ ಬಾಸ್ ಶೋವನ್ನು ಉಪೇಂದ್ರ ನಿರೂಪಣೆಯ ಮಾಡುತ್ತಾರಾ? ಹಾಗೆ ಒಬ್ಬ ಕಂಟೆಸ್ಟೆಂಟ್ ಅನ್ನೋ ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸುತ್ತಾರಾ? ಈ ಎಲ್ಲ ಪ್ರಶ್ನೆಗೆ ಉತ್ತರ ಶನಿವಾರ ಮತ್ತು ಭಾನುವಾರದ ಎಪಿಸೋಡ್ ನಲ್ಲಿ ಸಿಗಲಿದೆ…