ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ.! ಎರಡನೇ ಗೆಲುವಿನ ಬಳಿಕ ವಿರಾಟ್ ಬಗ್ಗೆ ಎಬಿಡಿ ಮನದಾಳ ಮಾತು !!

ಸ್ನೇಹಿತರೆ, ಆರ್ಸಿಬಿ ತಂಡ ಎರಡು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದ್ದಾಯ್ತು, ಇನ್ನು ಆರ್ಸಿಬಿಗೆ ಮುಂದಿನ ಪಂದ್ಯ ಇರೋದು ಭಾನುವಾರ ಅದು ಕೂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ. ಈ ಒಂದ ಪಂದ್ಯದಲ್ಲೂ ಆರ್ಸಿಬಿ ತಂಡಕ್ಕೆ ಒಳ್ಳೆದಾಗಲಿ. ಇನ್ನು ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಸ್ನೇಹದ ವಿಚಾರವಾಗಿ ಮಾತನಾಡುವುದಾದರೆ. ಇತ್ತೀಚಿನ ಇಂಟರ್ವ್ಯೂಗಳಲ್ಲಿ ಮಾತನಾಡಿರುವ ಎಬಿಡಿ ತಮ್ಮ ಹಾಗೂ ವಿರಾಟ್ ಕೊಹ್ಲಿ ನಡುವಿನ ಬಾಂಧವ್ಯ ಹಾಗೂ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಹೌದು ವಿರಾಟ್ ಕೊಹ್ಲಿ ಹಾಗೂ ಡಿವಿಲಿಯರ್ಸ್ ಸ್ನೇಹ ಹೇಗಪ್ಪ ಅಂದ್ರೆ ಕೃಷ್ಣ ಹಾಗೂ ಅರ್ಜುನನ ಸ್ನೇಹ ಇದ್ದಂತೆ.

ಕ್ಯಾಪ್ಟನ್ ಕೊಹ್ಲಿಗೆ ಏನೇ ಸಲಹೆ ಬೇಕಾದರೂ ಮೊದಲು ಎಬಿಡಿವಿಲಿಯರ್ಸ್ ಹತ್ರನೇ ಹೋಗ್ತಾರೆ. ಇನ್ನು ಎಬಿಡಿ ಕೂಡ ಅಷ್ಟೇ, ಯಾವುದೇ ಸಮಸ್ಯೆ ಇಂದ ಕೊಹ್ಲಿ ಅವರ ಬಳಿ ಬಂದರೆ ಅಷ್ಟೇ ಚೆನ್ನಾಗಿ ಅದಕ್ಕೆ ಪರಿಹಾರ ನೀಡುತ್ತಾ ಕೊಹ್ಲಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅದಕ್ಕೆ ಉದಾಹರಣೆಯೆಂಬಂತೆ ಇತ್ತೀಚಿನ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಷ್ಟೇನೂ ಚೆನ್ನಾಗಿ ಪ್ರದರ್ಶನವನ್ನು ತೋರುತ್ತಿರಲಿಲ್ಲ, ಇನ್ನು ಈ ವೇಳೆ ಕೊಹ್ಲಿ ಹೋಗಿದ್ದು ಎಬಿಡಿ ಹತ್ತಿರ. ಈ ವೇಳೆ ಎಬಿಡಿ ಉತ್ತಮ ಸಲಹೆ ಕೊಡುತ್ತಾರೆ

ಆ ಸಲಹೆ ಏನಪ್ಪಾಂದ್ರೆ ಮೊದಲು ಬಾಲನ್ನು ಗಮನಿಸು, ಹಾಗೆ ಬಾಲು ನಿನ್ನ ಬಳಿ ಬರುವ ಹಾಗೆ ಸ್ಪೇಸ್ ಕೊಡು ಮತ್ತು ಬಾಡಿಲಾಂಗ್ವೇಜ್ ಚೆನ್ನಾಗಿ ಇಟ್ಟುಕೋ, ಇನ್ನು ಬಾಲನ್ನು ನೋಡಿ ಸರಿಯಾಗಿ ಹೊಡಿ ಎಂದು 4 ಅತ್ಯಮೂಲ್ಯ ಸಲಹೆಯನ್ನು ನೀಡುತ್ತಾರೆ. ಇನ್ನು ವಿರಾಟ್ ಕೊಹ್ಲಿ ಈ ಸಲಹೆಯನ್ನು ಪಡೆದುಕೊಂಡ ನಂತರವೇ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ಇನ್ನು ಈ ಮೂಲಕ ಯಾವುದೇ ಸಮಸ್ಯೆ ಆದರೂ ಇಬ್ಬರೂ ಕೂಡ ಪರಸ್ಪರ ಹಂಚಿಕೊಂಡು ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ.

ಇನ್ನು ವಿರಾಟ್ ಕೊಹ್ಲಿ ಅವರ ಹೆಸರನ್ನು ಡಿವಿಲಿಯರ್ಸ್ ಪ್ರೀತಿಯಿಂದ ಸೇವ್ ಮಾಡಿಕೊಂಡಿರುವುದು ಬಿಸ್ಕೆಟ್ ಅಂತ. ಹೌದು ಎಬಿಡಿ ಅವರಪಾಲಿಗೆ ವಿರಾಟ್ ಕೊಹ್ಲಿ ಅವರು ಬಿಸ್ಕೆಟ್ ತಿನ್ನುವ ಹುಡುಗ ಇದ್ದಂತೆ. ಇಷ್ಟೆಲ್ಲಾ ಮಾಹಿತಿಯನ್ನು ಸ್ವತಹ ಎಬಿ ಡಿವಿಲಿಯರ್ಸ್ ಅವರೇ ಹಂಚಿಕೊಂಡಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿಗೆ ಆರ್ಸಿಬಿ ಅಭಿಮಾನಿಗಳನ್ನು ಕಂಡರೆ ತುಂಬಾನೇ ಇಷ್ಟ ಈ ಬಾರಿಯಾದರೂ ಕಪ್ ಗೆದ್ದು, ಅಭಿಮಾನಿಗಳಿಗೆ ಸಂತಸ ಮೂಡಿಸಬೇಕು ಎಂದು ಶ್ರಮವಹಿಸುತ್ತಿದ್ದಾರೆ ಎಂದು ಡಿವಿಲಿಯರ್ಸ್ ಹೇಳಿಕೊಂಡಿದ್ದಾರೆ…