ಅವಕಾಶ ಸಿಕ್ಕರೆ ಆರ್ಸಿಬಿ ಬಿಟ್ಟು ಬೇರೆ ಯಾವ ತಂಡದಲ್ಲಿ ಆಡುತ್ತೀರಾ ಎಂದಿದ್ದಕ್ಕೆ ಎಬಿಡಿ ರವರ ಉತ್ತರವೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಎಬಿ ಡಿವಿಲಿಯರ್ಸ್ ರಂತಹ ಬಲಾಡ್ಯ ಆಟಗಾರ ಬೇಕು ಎಂದು ಎಲ್ಲಾ ಫ್ರಾಂಚೈಸಿಗಳು ಆಸೆ ಪಡುತ್ತವೆ ಎಂಬುವುದರಲ್ಲಿ ಎರಡು ಮಾತಿಲ್ಲ. ಯಾವುದೇ ಫ್ರಾಂಚೈಸಿಗಳಿಗೆ ಎಬಿ ಡಿವಿಲಿಯರ್ಸ್ ರವರಂತಹ ಆಟಗಾರ ಸಿಕ್ಕರೆ ಖಂಡಿತ ಕಣ್ಮುಚ್ಚಿ ಕೋಟ್ಯಂತರ ರೂಪಾಯಿ ಕೊಟ್ಟು ಕೊಂಡು ಕೊಳ್ಳುತ್ತಾರೆ.

ಅದೇ ಸಮಯದಲ್ಲಿ ಇಂತಹ ಆಲೋಚನೆ ನಡೆಸಿ ಇತ್ತೀಚಿಗೆ ನಡೆದ ಒಂದು ಸಂದರ್ಶನದಲ್ಲಿ ಅಂದರೆ ಕೇವಲ ಮೂರ್ನಾಲ್ಕು ದಿನಗಳ ಹಿಂದೆ ನಡೆದ ಸಂದರ್ಶನದಲ್ಲಿ ಎಬಿ ಡಿವಿಲಿಯರ್ಸ್ ರವರನ್ನು ನೀವು ಆರ್ಸಿಬಿ ತಂಡದಲ್ಲಿ ಹಲವಾರು ವರ್ಷಗಳಿಂದ ಬ್ಯಾಟಿಂಗ್ ಮಾಡುತ್ತಿದ್ದೀರಾ ಒಂದು ವೇಳೆ ಅವಕಾಶ ಸಿಕ್ಕರೆ ಇತರ ಯಾವ ತಂಡಗಳ ಅಥವಾ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಲಾಗಿದೆ

ಇದಕ್ಕೆ ಉತ್ತರ ನೀಡಿರುವ ಎಬಿ ಡಿವಿಲಿಯರ್ಸ್ ರವರು ಆರ್ಸಿಬಿ ತಂಡ ಎಂಬುವುದು ಬಹಳ ವಿಶೇಷವಾದ ತಂಡ ನಾನು ಒಂದುವೇಳೆ ಐಪಿಎಲ್ ಆಡುತ್ತೇನೆ ಎಂದರೆ ಅದು ಕೇವಲ ಆರ್ಸಿಬಿ ತಂಡದಲ್ಲಿ ಮಾತ್ರ ನಾನು ಇದಕ್ಕೂ ಮುನ್ನ ಬೇರೆ ತಂದಲ್ಲಿ ಆಟವಾಡಿರಬಹುದು, ಆದರೆ ಆರ್ಸಿಬಿ ತಂಡದಿಂದ ಹೊರಗೆ ಹೋದರೆ ಐಪಿಎಲ್ ಜೀವನ ಮುಗಿದಂತೆ, ನಾನು ಇನ್ನು ಮುಂದೆ ಐಪಿಎಲ್ ಟೂರ್ನಿಯಲ್ಲಿ ಆಡುವುದಿಲ್ಲ ಅದೇ ನನ್ನ ಕೊನೆಯ ಪಂದ್ಯವಾಗಲಿದೆ, ಐಪಿಎಲ್ ಹಾಡುತ್ತಿನಿ ಎಂದರೆ ಅದು ಕೇವಲ ಆರ್ಸಿಬಿಗೆ ಮಾತ್ರ ಎಂದು ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ.