IPL ಶಿಷ್ಟಾಚಾರ ಮುರಿದ ಈ ಬಾರಿಯ ಗೆಲುವಿನ ಕುದುರೆ,, ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಕಿವಿ ಹಿಂಡಿದ ಐಪಿಎಲ್ ಎನು ಗೊತ್ತ ??

ಸ್ನೇಹಿತರೆ, ಐಪಿಎಲ್ 2021ರಲ್ಲಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿತ್ತಿರುವ ಆರ್ಸಿಬಿ ತಂಡ ಗೆಲುವಿನ ಕುದುರೆ ಎನಿಸಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಐಪಿಎಲ್ ಶಿಷ್ಟಾಚಾರ ಮುರಿದಿದ್ದಕ್ಕೆ ದಂಡ ಹಾಕಲಾಗಿದೆ. ಮೊದಲೇ ಕ್ರಿಕೆಟ್ ಅಂದರೆ ಶಿಸ್ತಿನ ಆಟ. ಅಂತದ್ರಲ್ಲಿ ಸಿಸ್ತು, ಶಿಷ್ಟಾಚಾರಗಳನ್ನು ಉಲ್ಲಂಘಿಸುವುದು ಬಾರಿ ಅಪಚಾರವಾದೀತು. ಇನ್ನು ಐಪಿಎಲ್ ಆಟಗಾರರು ಯಾರೇ ಇರಲಿ, ಅವರನ್ನು ಅನುಕರಿಸುವುದು ಹೆಚ್ಚು. ಹಾಗಾಗಿ ಅಂಥವರು ಹೆಚ್ಚು ಜವಾಬ್ದಾರಿಯಿಂದ ಆಡಬೇಕಾಗುತ್ತದೆ. ಅಶಿಸ್ತು ತೋರುವುದು ಆಗಲಿ ಅಥವಾ ಆಟದ ರೀತಿ ರಿವಾಜುಗಳಿಗೆ ದಕ್ಕೆ ತರುವುದೇ ಆಗಲಿ ಬಹಳ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತದೆ.

ಇನ್ನು ಪರಿಸ್ಥಿತಿ ಹೀಗಿರುವಾಗ ಕ್ಯಾಪ್ಟನ್ ಕೊಹ್ಲಿ ಐಪಿಎಲ್ ಅಪರಾಧ 2.2 ಸಂಹಿತೆಯಲ್ಲಿ ಲೆವೆಲ್ 1 ಅಪರಾಧ ಎಸಗಿದ್ದಾರೆ ಎಂದು ಐಪಿಎಲ್ ಮ್ಯಾನೇಜ್ಮೆಂಟ್ ಕಿಡಿಕಾರಿದೆ. ಅಂದರೆ ಪಂದ್ಯದ ವೇಳೆ ಕ್ರಿಕೆಟ್ ಸಲಕರಣೆ ಅಥವಾ ವಸ್ತುಗಳಿಗೆ ಅಗೌರವ ತೋರಿಸುವುದು, ಮೈದಾನದಲ್ಲಿನ ಕ್ರಿಕೆಟ್ ಉಪಕರಣಗಳಿಗೆ ಧಕ್ಕೆಯುಂಟು ಮಾಡುವುದು ಶಿಸ್ತು ಉಲ್ಲಂಘಿಸಿದಂತೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಇಂತಹ ದುರ್ನಡತೆ ತೋರಿಸಿದ ಆರೋಪದ ಮೇಲೆ ಐಪಿಎಲ್ ಶಿಸ್ತುಪಾಲನೆ ಸಮಿತಿ ಅವರಿಗೆ ಕಿವಿ ಹಿಂಡಿದೆ.

ನಿನ್ನೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಪ್ರಸ್ತುತ ಟೂರ್ನಿಯ ಆರನೇ ಪಂದ್ಯದಲ್ಲಿ 29 ಬಾಲಿಗೆ 33 ರನ್ ಗಳಿಸಿದ್ದ ವಿರಾಟ್ ಕೊಹ್ಲಿಯನು ಜಾಸನ್ ಹೋಲ್ಡರ್ ಓಟ್ ಮಾಡಿದರು. ಇನ್ನು ಹೋಲ್ಡರ್ ಬೌಲಿಂಗ್ ವೇಳೆ ಕೊಹ್ಲಿ ಸಿಕ್ಸ್ ಹೊಡೆಯುವ ಪ್ರಯತ್ನ ಮಾಡಿದರು. ಈ ವೇಳೆ ಎಡ್ಜ್ ಆಗಿ ಅದು ಕ್ಯಾಚ್ ಆಗಿತ್ತು. ಈ ಮೂಲಕ ಕೊಹ್ಲಿ ಕೇವಲ 33 ರನ್ ಗಳಿಗೆ ನಿರ್ಗಮಿಸಬೇಕಾಯಿತು. ಇದರಿಂದ ಮೈದಾನದಿಂದ ನಿರ್ಗಮಿಸುವಾಗ ಆರ್ಸಿಬಿ ನಾಯಕ ಕೊಹ್ಲಿ ಬೌಂಡರಿ ಗೆರೆಯ ಬಳಿ ಜೋಡಿಸಿದ ಜಾಹೀರಾತು ಕಟ್ಟೆಗೆ ಬ್ಯಾಟ್ನಿಂದ ಬಡಿದಿದ್ದಾರೆ.

ಅಲ್ಲದೆ ತಂಡ ಕುಳಿತುಕೊಳ್ಳುವ ಜಾಗದಲ್ಲಿಯೂ ಆಕ್ರೋಶದಿಂದ ಚೇರಿಗೆ ಗುದ್ದಿದ್ದಾರೆ. ಇದು ಸಿಸ್ತು ಉಲ್ಲಂಘನೆಯಾಗುತ್ತದೆ ಇದರಲ್ಲಿ ಮ್ಯಾಚ್ ರೆಫ್ರಿ ತೀರ್ಮಾನವೇ ಅಂತಿಮ ಮತ್ತು ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದು ಐಪಿಎಲ್ ಸಿಸ್ತು ಪಾಲನಾ ಸಮಿತಿ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದೆ. ಕ್ಯಾಪ್ಟನ್ ಕೊಹ್ಲಿಯ ಈ ನಡೆ ಬಗ್ಗೆ ನೀವೇನು ಹೇಳ್ತೀರಾ ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ…