IPL 2021,,ಹೈದರಾಬಾದ್ ವಿರುದ್ಧ ಪಡಿಕ್ಕಲ್ ಕಣಕ್ಕಿಳಿಯುವುದು ಫಿಕ್ಸ್..! ಜೈ ಆರ್ಸಿಬಿ….

ಸ್ನೇಹಿತರೆ, ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಶುಭಾರಂಭ ಸಾಧಿಸಿರುವ ಆರ್ಸಿಬಿ ತಂಡ ಇದೀಗ ಎರಡನೆಯ ಹೋರಾಟಕ್ಕೆ ಸಜ್ಜಾಗಿದೆ. ಹೈದರಾಬಾದ್ ವಿರುದ್ಧ ಬುಧವಾರ ಆರ್ಸಿಬಿ ತಂಡ ಕಣಕ್ಕಿಳಿಯಲಿದೆ. ಇನ್ನು ಹೈದರಾಬಾದ್ ವಿರುದ್ಧ ಆರ್ಸಿಬಿ ಪ್ಲೇಯಿಂಗ್ ಲೆವೆನ್ ಬದಲಾಗುತ್ತಾ ಖಂಡಿತವಾಗಿಯೂ ಬದಲಾಗುತ್ತೆ ಅನ್ನೋ ಮುನ್ಸೂಚನೆಯನ್ನು ಆರ್ಸಿಬಿ ಮೂಲಗಳೇ ನೀಡಿದೆ. ಯಾಕಂದ್ರೆ ಮೊದಲ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಆರಂಭಿಕರಾಗಿ ಬಂದಿದ್ದು ನಿಜಕ್ಕೂ ಉತ್ತಮ ಬೆಳವಣಿಗೆಯೇ ಸರಿ.

ಆದರೆ ಅವರಿಂದ ಬಿಗ್ ಇನ್ನಿಂಗ್ ಬರಲಿಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ವಾಷಿಂಗ್ಟನ್ ಸುಂದರ್ ಅವರ ಪರಮನೆಂಟ್ ಸ್ಲಾಟ್ ಕೂಡ ಅದಲ್ಲ. ಹಾಗಾದ್ರೆ ಯಾರು ಬರ್ತಾರೆ ಅಂತೀರಾ ಆರ್ಸಿಬಿಯ ಸ್ಟಾರ್ ಓಪನರ್ ಪಡಿಕಲ್ ಕಂಪ್ಲೀಟ್ ಫೈನ್ ಅಂಡ್ ಫಿಟ್ ಆಗಿದ್ದಾರೆ. ಈ ವಿಷಯವನ್ನು ಸ್ವತಃ ಪಡಿಕಲ್ ಅವರೇ ಹೇಳಿದ್ದಾರೆ. ಹದಿನಾಲ್ಕು ದಿನಗಳ ಕಾಲ ನಾಲ್ಕು ಗೋಡೆಯ ಮಧ್ಯೆ ಸಮಯ ಕಳೆದು ಇದೀಗ ಫೀಲ್ಡಿಗೆ ಇಳಿಯುವುದು ಅಂದ್ರೆ ಅದಕ್ಕಿಂತ ಖುಷಿ ವಿಚಾರ ಮತ್ತೊಂದಿಲ್ಲ ಅಂತ ಹೇಳುತ್ತಿರುವ ಪಡಿಕಲ್ ತಮ್ಮ ಟೈಮ್ ಗಾಗಿ ಕಾತುರನಾಗಿದ್ದೇನೆ ಅಂತ ಹೇಳಿದ್ದಾರೆ.

ಕೋರೋನಾ ಪಾಸಿಟಿವ್ ಹೂಂ ಐಸೋಲೇಶನ್ ಎಲ್ಲವೂ ಕೂಡ ಮುಗಿದಿದೆ. ಓರ್ವ ಕ್ರಿಕೆಟಿಗೆ ಖುಷಿ ಸಿಗುವುದು ಫೀಲ್ಡಿಗೆ ಎಂಟ್ರಿ ಕೊಟ್ಟಾಗಲೇ, ಇನ್ನು ಈ ಮೂಲಕ ಸಿಗುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತೇನೆ ಅಂತ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಈ ಮೂಲಕ ತಾವು ಎರಡನೇ ಪಂದ್ಯಕ್ಕೆ ಸಜ್ಜಾಗಿರುವ ಸುಳಿವನ್ನು ನೀಡಿದ್ದಾರೆ. ಇನ್ನು ಇದಕ್ಕೆ ಪುಷ್ಟಿ ನೀಡುವಂತೆ ಆರ್ಸಿಬಿ ಸ್ಪಿನ್ ಕೋಚ್ ಶ್ರೀಧರನ್ ಶ್ರೀರಾಮ್ ಕೂಡ ಮಾತನಾಡಿದರೆ.

ಕಳೆದ ಐಪಿಎಲ್ ಮುಗಿದಾಗ ಪಡಿಕಲ್ ಯಾವ ಉತ್ಸಾಹದಲ್ಲಿದ್ದರೂ, ಅದೇ ಉತ್ಸಾಹ ಇದೀಗ ಕಾಣಿಸುತ್ತಿದೆ. ಪಡಿಕಲ್ ಬ್ಯಾಟಿಂಗ್ ಬಗ್ಗೆ ತುಂಬಾನೇ ನಂಬಿಕೆ ಇದೆ. ಇನ್ನು ಮುಷ್ಟಾಖ್ ಅಲಿ ಹಾಗೂ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಪ್ರಯೋಜನವನ್ನು ನೀಡಿದ್ದಾರೆ. ಪಡಿಕಲ್ ಇದೀಗ ಜಸ್ಟ್ ಒಂದು ಸಣ್ಣ ಅರೆಸ್ಟ್ ಮುಗಿಸಿ ಬಂದಿದ್ದಾರೆ ಅಷ್ಟೇ, ಆನ್ ಫೀಲ್ಡ್ ಯುದ್ಧಕ್ಕೆ ಅವರು ಹಂಡ್ರೆಡ್ ಪರ್ಸೆಂಟ್ ರೆಡಿಯಾಗಿದ್ದಾರೆ ಎನ್ನುವ ಮೂಲಕ ಎರಡನೇ ಪಂದ್ಯಕ್ಕೆ ಪರ್ಮನೆಂಟ್ ಓಪನರ್ ಎಂಟ್ರಿ ಆಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ. ನೀವು ಕೂಡ ಪಡಿಕಲ್ ಎಂಟ್ರಿ ಗಾಗಿ ಕಾಯುತ್ತಿದ್ದಾರೆ ನಮಗೆ ಕಮೆಂಟ್ ಮಾಡಿ ತಿಳಿಸಿ.