IPL 2021, ವಿರಾಟ್ ಕೊಹ್ಲಿ ಹೇಳಿದ ಕೆಲಸ ಮಾಡಲು ಆಗಲ್ಲ ಎಂದ ಕೈಲ್ ಜಮಿಸನ್ ! ಕಾರಣ ಏನು ಗೊತ್ತಾ ?

ಸ್ನೇಹಿತರೆ, ಐಪಿಎಲ್ನಲ್ಲಿ ಈ ಬಾರಿ ಆರ್ಸಿಬಿ ಅದರಲ್ಲೂ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದ್ದು, ಅನುಭವಿಗಳ ಜೊತೆಯಲ್ಲಿ ಯುವಕರು ಸೇರಿ ಒಂದು ಉತ್ತಮ ತಂಡವಾಗಿದೆ. ಇನ್ನು ಕಪ್ ಗೆಲ್ಲುವ ಸಲುವಾಗಿ ನೆಟ್ ನಲ್ಲೂ ಕೂಡ ಭರ್ಜರಿ ಪ್ರಾಕ್ಟೀಸ್ ನಡೆಸುತ್ತಿದ್ದಾರೆ ಆರ್ಸಿಬಿ ಹುಡುಗರು. ಆದರೆ ಇದೀಗ ಡ್ಯಾನಿಯಲ್ ಕ್ರಿಶ್ಚಿಯನ್ ನಿಟ್ಟಿನಲ್ಲಿ ನಡೆದ ಒಂದು ಹಾಸ್ಯಾಸ್ಪದ ಘಟನೆಯ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ. ಹಾಗಿದ್ರೆ ಕ್ರಿಶ್ಚಿಯನ್ ಹಂಚಿಕೊಂಡ ಆ ಮಾಹಿತಿ ಆದ್ರೂ ಏನು? ಈ ಎಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ನೆಟ್ ನಲ್ಲಿ ವಿರಾಟ್ ಕೊಹ್ಲಿ ಪ್ರಾಕ್ಟೀಸ್ ಮಾಡುವಾಗ ಕೊಹ್ಲಿಯ ಮಾತನ್ನು ಕೈಲ್ ಜೆಮಿಸನ್ ನಿರಾಕರಿಸಿರುವ ಬಗ್ಗೆ ಹಂಚಿಕೊಂಡಿದ್ದಾರೆ. ಹೌದು ಪ್ರಾಕ್ಟೀಸ್ ವೇಳೆ ಕ್ಯಾಪ್ಟನ್ ಕೊಹ್ಲಿ ಜೆಮಿಸನ್ ಅವರಿಗೆ ಡ್ಯೂಪ್ ಬಾಲನ್ನು ಬಳಸಿ ಬೌಲಿಂಗ್ ಮಾಡಿ ಎಂದು ಹೇಳಿದ್ದಾರೆ. ಇದೇ ವೇಳೆ ಜಮಿಸನ್ ನಾನು ಡ್ಯೂಪ್ ಬಾಲ್ ಬಳಸಿ ನಿಮಗೆ ಬೌಲಿ ಮಾಡುವುದಿಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಡ್ಯಾನಿಯಲ್ ಕ್ರಿಶ್ಚಿಯನ್ ರಿವಿಲ್ ಮಾಡಿದ್ದು, ಇದಕ್ಕೆ ಕಾರಣವನ್ನು ನೋಡುವುದಾದರೆ.

ಇದೇ ವರ್ಷ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯುವುದರಿಂದ ಅಲ್ಲಿ ಡ್ಯೂಪ್ ಬಾಲನ್ನು ಜೆಮಿಸನ್ ಬಳಸಲಿದ್ದಾರೆ. ಹೀಗಾಗಿ ಈ ಬಾಲನ್ನು ಮೊದಲೇ ಬಳಸಿದರೆ ವಿರಾಟ್ ಕೊಹ್ಲಿಗೆ ಜೆಮಿಸನ್ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಬಳಸುವ ಡ್ಯೂಪ್ ಬಾಲ್ ಬಗ್ಗೆ ತಿಳಿದುಬಿಡುತ್ತದೆ ಎಂದು ಜಮಿಸನ್ ನೆಟ್ ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ಬೌಲಿಂಗ್ ಮಾಡಲು ನಿರಾಕರಿಸಿದ್ದಾರೆ. ಅಲ್ಲದೆ ಜೆಮಿಸನ್ ಈ ಮಾತನ್ನು ಹೇಳಿದ ಮೇಲೆ ವಿರಾಟ್ ಕೊಹ್ಲಿ ಅವರ ಮುಖವನ್ನು ನೋಡಿ ಇಬ್ಬರೂ ಪರಸ್ಪರ ಮುಗುಳ್ನಕ್ಕಿ ತಾರೆ…