ಐಪಿಎಲ್ ನಲ್ಲಿ ನೆಚ್ಚಿನ ತಂಡವನ್ನು ಘೋಷಣೆ ಮಾಡಿ ಇದೇ ತಂಡ ಗೆಲ್ಲುತ್ತದೆ ಎಂದ ಬ್ರಿಯಾನ್ ಲಾರಾ ! ಯಾವ ತಂಡ ಮತ್ತು ಯಾಕಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಐಪಿಎಲ್ ಟೂರ್ನಿ ವರ್ಣ ರಂಜಿತ ಆರಂಭವನ್ನು ಈ ಬಾರಿಯೂ ಕೂಡಾ ಪಡೆದು ಕೊಂಡಿದೆ, ಈ ಬಾರಿ ಯಾವುದೇ ಉದ್ಘಾಟನಾ ಸಮಾರಂಭ ಇಲ್ಲದೆ ಇದ್ದರೂ ಕೂಡ ಒಂದು ಕಡೆ ಈ ಹಣವನ್ನು ಯೋಧರ ನಿಧಿಗೆ ಸಮರ್ಪಿಸಲಾಗುತ್ತದೆ ಮತ್ತೊಂದೆಡೆ ಕಾರ್ಯಕ್ರಮ ಇಲ್ಲದೆ ಇದ್ದರೂ ಕೂಡ ಕೊನೆಯ ಬಾಲಿನ ವರೆಗೂ ಪಲಿತಾಂಶ ನೀಡದಂತಹ ಪಂದ್ಯಗಳಿಂದ ಟೂರ್ನಿ ಆರಂಭವಾಗಿದೆ

ಅದರಲ್ಲಿಯೂ ಮೊದಲನೇ ಪಂದ್ಯ ಆರ್ಸಿಬಿ ತಂಡದ ಎಂದ ತಕ್ಷಣ ನಿಜಕ್ಕೂ ಟೂರ್ನಿಗೆ ಒಂದು ಕಳೆ ಬಂದಂತೆ ಇರುತ್ತದೆ. ಯಾಕೆಂದರೆ ಆರ್ಸಿಬಿ ತಂಡದ ಅಭಿಮಾನಿಗಳು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇನ್ನಿತರ ರಾಜ್ಯಗಳಲ್ಲಿಯೂ ಕೂಡ ಆರ್ಸಿಬಿ ತಂಡ ತನ್ನ ಅಭಿಮಾನಿ ಬಳಗವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಸತ್ಯ ಆರ್ಸಿಬಿ ತಂಡ ಯಾವುದೇ ಕಪ್ ಗೆಲ್ಲದೇ ಇರಬಹುದು ಆದರೆ ಒಂದಲ್ಲ ಒಂದು ದಿನ ನಾವು ಕಪ್ ಗೆಲ್ಲುತ್ತೇವೆ, ಆದರೆ ಕಪ್ ಗೆದ್ದಿಲ್ಲ ಎಂದು ಯಾವ ಅಭಿಮಾನಿಗಳು ಕೂಡ ಆರ್ ಸಿ ಬಿ ತಂಡವನ್ನು ಇಲ್ಲಿಯವರೆಗೂ ಬಿಟ್ಟುಕೊಟ್ಟಿಲ್ಲ.

ಇನ್ನು ಹೀಗೆ ವರ್ಣರಂಜಿತ ಆರಂಭ ಸಿಕ್ಕಿರುವ ಸಂದರ್ಭದಲ್ಲಿ ಮುಖ್ಯವಾಗಿ ಭಾರತದ ಕ್ರಿಕೆಟ್ ವಿಶ್ಲೇಷಕರು ಅಥವಾ ಮಾಜಿ ಆಟಗಾರರು ಅಷ್ಟೇ ಅಲ್ಲದೆ ವಿವಿಧ ದೇಶಗಳ ಕ್ರಿಕೆಟ್ ದಿಗ್ಗಜರು ಕೂಡ ಐಪಿಎಲ್ ಟೂರ್ನಿ ಯನ್ನು ಸದಾ ಫಾಲೋ ಮಾಡುತ್ತಿರುತ್ತಾರೆ, ಪ್ರತಿಯೊಂದು ಪಂದ್ಯಗಳ ಕುರಿತು ಹಾಗೂ ಪ್ರತಿಯೊಂದು ತಂಡಗಳ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿರುತ್ತಾರೆ.

ಇನ್ನು ಇದೀಗ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟ್ ಲೋಕ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಬ್ರಿಯಾನ್ ಲಾರಾ ರವರು ಈ ಬಾರಿಯ ಐಪಿಎಲ್ ಟೂರ್ನಿಯ ಕುರಿತು ಮಾತನಾಡಿ ವಿವಿಧ ತಂಡಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹಾಗೂ ತಮ್ಮ ನೆಚ್ಚಿನ ತಂಡ ಅಂದರೆ ಆಧಾರದ ಮೇರೆಗೆ ಯಾವ ಗೆಲ್ಲಬಹುದು ಎಂದು ಕಾರಣಗಳ ಸಮೇತ ವಿವರಣೆ ನೀಡಿದ್ದಾರೆ.

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಬ್ರಿಯಾನ್ ಲಾರಾ ರವರು ಕಳೆದ ಐಪಿಎಲ್ ಸೀಸನ್ ಗಳಿಗೆ ಹೋಲಿಸಿದರೇ ಆರ್ಸಿಬಿ ತಂಡ ಈ ಬಾರಿ ಬಹಳ ಸಮತೋಲನದಿಂದ ಕಾಣುತ್ತಿದೆ ಅದರಲ್ಲಿಯೂ ವಿವಿಧ ಆಟಗಾರರು ಉತ್ತಮ ಫಾರ್ಮ್ ನಲ್ಲಿ ಇದ್ದಾರೆ, ಕಳೆದ 13 ವರ್ಷದಿಂದ ಆರ್ಸಿಬಿ ತಂಡ ಕಪ್ಪು ಗೆಲ್ಲದೇ ಇರಬಹುದು,

ಆದರೆ ಕಳೆದ 13 ವರ್ಷಗಳ ಕನಸನ್ನು ನನಸಾಗಿಸುವ ಸಮಯ ಇದೀಗ ಬಂದಂತೆ ಕಾಣುತ್ತಿದೆ ವಿರಾಟ್ ಕೊಹ್ಲಿ ರವರ ನಾಯಕತ್ವದಲ್ಲಿ ಖಂಡಿತ ಆರ್ಸಿಬಿ ತಂಡ ಈ ಬಾರಿಯ ಐಪಿಎಲ್ ಟೂರ್ನಿ ಯನ್ನು ಗೆಲ್ಲ ಬಹುದಾಗಿದೆ ಯಾಕೆಂದರೆ ಬಲಿಷ್ಠ ಮಧ್ಯಮ ಕ್ರಮಾಂಕ ಬಲಿಷ್ಠ ಬೌಲಿಂಗ್ ಪಡೆ ಹಾಗೂ ಇನಿಂಗ್ಸ್ ಆರಂಭದಲ್ಲಿ ವಿರಾಟ್ ಕೊಹ್ಲಿ ರವರು ಬ್ಯಾಟಿಂಗ್ ಮಾಡುವ ಕಾರಣ ಅತಿ ಹೆಚ್ಚು ಬಾಲುಗಳನ್ನು ಆಡುವ ಅವಕಾಶ ಪಡೆಯುತ್ತಾರೆ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಹೆಚ್ಚು ಬಾಲುಗಳನ್ನು ಆಡಿದರೆ ಖಂಡಿತ ಆರ್ಸಿಬಿ ತಂಡ ಪಂದ್ಯ ಗೆಲ್ಲಲಿದೆ ಈ ಮೂಲಕ ಈ ಬಾರಿಯ ಕಪ್ ಆರ್ಸಿಬಿ ತಂಡದ ಎಂದಿದ್ದಾರೆ.