ಆರೆಂಜ್ ಕ್ಯಾಪ್ ಗೆಲ್ಲಬಹುದಾದ ಟಾಪ್ 5 ಆಟಗಾರರು ಯಾರು ಗೊತ್ತಾ?? ಆರ್ಸಿಬಿಯ ಇಬ್ಬರು ಆಯ್ಕೆ

ನಮಸ್ಕಾರ ಸ್ನೇಹಿತರೇ ಪ್ರತಿವ ರ್ಷದಂತೆ ಈ ವರ್ಷವೂ ಕೂಡ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ, ಈ ಬಾರಿಯ ಪಂದ್ಯಗಳಲ್ಲಿ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ತೋರಲು ಆರಂಭಿಸಿದ್ದು ಹಲವಾರು ಆಟಗಾರರು ಆರೆಂಜ್ ಕ್ಯಾಪ್ ಧರಿಸುವ ಎಲ್ಲ ಸಾಧ್ಯತೆಗಳನ್ನು ತೋರಿದ್ದಾರೆ, ಅಷ್ಟೇ ಅಲ್ಲದೆ ಯುವ ಆಟಗಾರರು ಕೂಡ ಆರೆಂಜ್ ಕ್ಯಾಪ್ ಗೆಲ್ಲುವ ನೆಚ್ಚಿನ ಆಟಗಾರರ ಸಾಲಿನಲ್ಲಿ ಕಂಡು ಬರುತ್ತಿರುವುದು ಇಷ್ಟು ದಿವಸ ಬಲಾಢ್ಯ ಆಟಗಾರರಾಗಿ ಮೆರೆದ ಆಟಗಾರರನ್ನು ಕೂಡ ಪಕ್ಕಕ್ಕೆ ಸರಿಸಿ ಆರೆಂಜ್ ಕ್ಯಾಪ್ ಗೆಲ್ಲಬಹುದಾಗಿದೆ. ಇಂದಿನ ಈ ಲೇಖನದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಗೆಲ್ಲಬಹುದಾದ top5 ಆಟಗಾರರು ಯಾರು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಹೇಳಿ

ಸ್ನೇಹಿತರೇ ಐದನೇ ಸ್ಥಾನದಲ್ಲಿ ಸನ್ರೈಸರ್ಸ್ ತಂಡದ ಆರಂಭಿಕ ಆಟಗಾರರಾಗಿರುವ ಡೇವಿಡ್ ವಾರ್ನರ್ ಅವರು ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಆರಂಭವನ್ನು ಪಡೆದಿರುವ ಡೇವಿಡ್ ವಾರ್ನರ್ ಅವರು ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋದರೆ ಆರೆಂಜ್ ಕ್ಯಾಪ್ ಗೆಲ್ಲಬಹುದಾದ ಎಲ್ಲಾ ಸಾಧ್ಯತೆಗಳು ಇವೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ನಾಲ್ಕನೇ ಸ್ಥಾನದಲ್ಲಿ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹಾಗೂ ಆರಂಭದ ಪಂದ್ಯಗಳಲ್ಲಿ ಪಂದ್ಯಗಳನ್ನು ಗೆಲ್ಲಿಸಿಕೊಡುವ ಮೂಲಕ ಆರ್ಸಿಬಿ ತಂಡಕ್ಕೆ ಹೊಸ ಕಳೆ ತಂದಿರುವ ಮ್ಯಾಕ್ಸ್ವೆಲ್ ರವರು ಕಾಣಿಸಿ ಕೊಳ್ಳುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಮ್ಯಾಕ್ಸ್ ವೆಲ್ ರವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೇ ಖಂಡಿತಾ ಇವರು ಆರೆಂಜ್ ಕ್ಯಾಪ್ ಗೆಲ್ಲಬಹುದಾದ ಎಲ್ಲಾ ಸಾಧ್ಯತೆಗಳು ಇವೆ ಎಂದು ಕ್ರಿಕೆಟ್ ವಿಶ್ಲೇಷಕರು ಹೇಳುತ್ತಿದ್ದಾರೆ.

ಇನ್ನು ಮೂರನೇ ಸ್ಥಾನದಲ್ಲಿ ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಸುರೇಶ್ ರೈನಾ ರವರು ಕಳೆದ ಬಾರಿಯ ಐಪಿಎಲ್ ಹಾಡದೇ ಇದ್ದರೂ ಕೂಡ ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಆರಂಭವನ್ನು ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವುದರಲ್ಲಿ ವಿಫಲವಾದರೂ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಹಾಗೂ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ವಿದೇಶಿ ನೆಲೆಗಳಲ್ಲಿ ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿರುವ ರಿಷಬ್ ಪಂತ್ ರವರು ಸ್ಥಾನ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ, ಅದರಲ್ಲಿಯೂ ಈ ಬಾರಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕಾರಣ ಹೆಚ್ಚು ಸಮಯ ಮೈದಾನದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನುರಿಷಬ್ ಪಂತ್ ರವರು ಪಡೆಯುತ್ತಿದ್ದಾರೆ.

ಇನ್ನು ಮೊದಲನೇ ಸ್ಥಾನದಲ್ಲಿ ನಾವು ನೀವು ಕ್ರಿಕೆಟ್ ವಿಶ್ಲೇಷಕರು ಸೇರಿದಂತೆ ಎಲ್ಲರೂ ಹೇಳುವ ಕಿಂಗ್ ಖ್ಯಾತಿಯ ಕಿಂಗ್ ಕೊಹ್ಲಿ ರವರು ಸ್ಥಾನ ಪಡೆದು ಕೊಂಡಿದ್ದಾರೆ ಅದರಲ್ಲಿಯೂ ಈ ಬಾರಿ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿರುವ ಕಾರಣ ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಬಾಲ್ಗಳನ್ನು ಆಡುವ ಅವಕಾಶವನ್ನು ವಿರಾಟ್ ಕೊಹ್ಲಿ ರವರು ಪಡೆಯುತ್ತಿದ್ದಾರೆ, ಈ ಮೂಲಕ ವಿರಾಟ್ ಕೊಹ್ಲಿ ರವರು ಆರೆಂಜ್ ಕ್ಯಾಪ್ ಗೆಲ್ಲಬಹುದಾದ ನೆಚ್ಚಿನ ಆಟಗಾರರಲ್ಲಿ ಮೊದಲ ಸ್ಥಾನ ಪಡೆದು ಕೊಂಡಿದ್ದಾರೆ.