ಗೆಲ್ಲುತ್ತಿರುವ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾದ ಆರ್ಸಿಬಿ?? ಇಬ್ಬರೂ ಆಟಗಾರರು ಔಟ್, ಯಾರು ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡ ಇದೀಗ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವನ್ನು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ, ಇಂದಿನ ಲೆಕ್ಕಚಾರದ ಪ್ರಕಾರ ಆರ್ಸಿಬಿ ತಂಡವು ಮೊದಲನೇ ಸ್ಥಾನದಲ್ಲಿದ್ದು ಡೆಲ್ಲಿ ತಂಡವು ಮತ್ತೊಂದು ಪಂದ್ಯವನ್ನು ಗೆದ್ದರೆ ಡೆಲ್ಲಿ ತಂಡ ಮೊದಲನೇ ಸ್ಥಾನಕ್ಕೆ ಏರಲಿದೆ

ಇನ್ನು ಈತನಧ್ಯೆ ಆರ್ಸಿಬಿ ತಂಡ ಮೊದಲ ಎರಡು ಪಂದ್ಯದಲ್ಲಿ ಗೆಲುವು ದಾಖಲಿಸಿದ್ದರು ಕೂಡ ಮೂರನೇ ಪಂದ್ಯಕ್ಕೆ ಮಹತ್ವದ ಬದಲಾವಣೆಗಳನ್ನು ನಡೆಸಲು ಆಲೋಚನೆ ನಡೆಸುತ್ತಿದೆ ಎಂಬ ಮಾಹಿತಿ ಇದೀಗ ಮಾಧ್ಯಮಗಳಿಗೆ ತಿಳಿದು ಬಂದಿದೆ. ತಂಡದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಹಾಗೂ ಮೊದಲ ಎರಡು ಪಂದ್ಯಗಳಲ್ಲಿ ಜಯ ಕಂಡಿದ್ದರೂ ಕೂಡ ಊಹಿಸಿದಂತಹ ಪ್ರದರ್ಶನವನ್ನು ಬ್ಯಾಟಿಂಗ್ ನೀಡುವುದರಲ್ಲಿ ವಿಫಲವಾಗಿದೆ.

ಅದೇ ಕಾರಣಕ್ಕಾಗಿ ನ್ಯೂಜಿಲೆಂಡ್ ತಂಡದ ಬಲಾಡ್ಯ ಆಟಗಾರ ಫಿನ್ ಅಲೆನ್ ರವರಿಗೆ ಅವಕಾಶ ನೀಡಲು, ಆಲ್-ರೌಂಡರ್ ಆಗಿ ವಿಫಲವಾಗಿರುವ ಡೆನ್ ಕ್ರಿಶ್ಚಿಯನ್ನರನ್ನು ತಂಡದಿಂದ ಹೊರಗೆ ಕಳುಹಿಸಿ ಫಿನ್ ಅಲೆನ್ ರವರಿಗೆ ಅವಕಾಶ ನೀಡಿ, ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ದೇವದತ್ ಪಡಿಕಲ್ ಅವರನ್ನು ಒಂದು ಪಂದ್ಯದಿಂದ ಹೊರಗೆ ಕಳುಹಿಸಿ ಮತ್ತೊಬ್ಬ ಬೌಲರ್ ಆಯ್ಕೆಯಾಗಿ ನವದೀಪ್ ಸೈನಿ ರವರನ್ನು ಕರೆದು ಕೊಳ್ಳಲು ಆರ್ಸಿಬಿ ತಂಡ ಚಿಂತನೆ ನಡೆಸಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.