RCB vs KKR 2021, ಆರ್ಸಿಬಿ ತಂಡ ಶಹಾಬಾಜ್ ಖರೀದಿಸೋಕೆ ಕಾರಣ ಏನು ಗೊತ್ತಾ..?

ಸ್ನೇಹಿತರೆ, ಕಳೆದ ಪಂದ್ಯದಲ್ಲಿ ಆರ್ಸಿಬಿ ತಂಡ ಹೈದರಾಬಾದ್ ವಿರುದ್ಧ ಆಟವಾಡಿ ಗೆದ್ದಿತ್ತು. ಇನ್ನೂ ಈ ಒಂದು ಪಂದ್ಯ ಗೆಲ್ಲುವುದಕ್ಕೆ ಮೂಲ ಕಾರಣ ಆಗಿದ್ದು ಶಹಬಾಜ್ ಅಹಮದ್ ಅವರು. ಇನ್ನು ಆರ್ಸಿಬಿ ತಂಡದವರು ಯಾವ ಪ್ಲಾನನ್ನು ಇಟ್ಟುಕೊಂಡು ಈ ಆಟಗಾರನನ್ನು ಮೂರನೇ ಕ್ರಮಾಂಕದಲ್ಲಿ ಕಳಿಸಿದರು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ಆದರೆ ತಂಡದ ಪ್ಲಾನ್ ಏನಾಗಿತ್ತು ಅಂದ್ರೆ ತಂಡದ ಬ್ಯಾಟಿಂಗ್ ಅನ್ನು ಬಲಿಷ್ಠ ಮಾಡುವುದು. ಹೌದು ಈ ಒಂದು ಕಾರಣಕ್ಕಾಗಿ ಶಹಬಾಜ್ ಅಹಮದ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಯಿತು.

ಇನ್ನು ಇದೆ ಸ್ಟಾಟರ್ಜಿಯನ್ನು ಬೇರೆಬೇರೆ ಪಂದ್ಯ ಗಳಲ್ಲೂ ಸಹ ಬಳಸಬಹುದು. ಅಲ್ಲದೆ ಆರ್ಸಿಬಿ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರಬೇಕು. ಈ ಮೂಲಕ ಯಾವುದೇ ರಣತಂತ್ರ ಪ್ರಯೋಗಿಸಿದರು ಆರ್ಸಿಬಿ ತಂಡ ಗೆಲ್ಲೋಕೆ ಆಗಬೇಕು. ಒಟ್ಟಿನಲ್ಲಿ ಇದೇ ರೀತಿ ಹೊಸ ಹೊಸ ಪ್ರಯೋಗಗಳನ್ನು ಆರ್ಸಿಬಿ ತಂಡ ಮಾಡಲಿ ಜೊತೆಗೆ ಆರ್ಸಿಬಿ ತಂಡಕ್ಕೆ ಶುಭವಾಗಲಿ. ಇನ್ನು ಈ ಪಂದ್ಯ ಮುಗಿದ ಬಳಿಕ ಎಲ್ಲಾ ಆಟಗಾರರು ಮತ್ತೆ ಕೋಚ್ ಗಳು ಶಹಬಾಜ್ ಆಹ್ಮದ್ ಅವರಿಗೆ ಬಹಳ ಪ್ರಶಂಸೆ ವ್ಯಕ್ತಪಡಿಸಿದರು.

ಇನ್ನು ಸ್ಕ್ರೀನನ್ನು ಬಲಗೈ ಬ್ಯಾಟ್ಸ್ಮನ್ಗಳು ಬಲವಾಗಿ ಗಟ್ಟಿ ನಿಂತಾಗ ಒಂದು ವಿಕೆಟ್ ಬೇಕು ಅಂದ್ರೆ ಶಹಬಾಜ್ ಆಹ್ಮದ್ ಅವರನ್ನು ಉಪಯೋಗಿಸಿಕೊಳ್ಳಬೇಕು ಎಂಬ ಮಾತುಗಳು ಆರ್ಸಿಬಿ ಕೋಚ್ ಅವರಿಂದಲೇ ಕೇಳಿಬಂದಿದೆ. ಅದೇ ರೀತಿ ಹರ್ಷದ್ ಪಟೇಲ್ ಅವರು ಕೂಡ ಶಹಬಾಜ್ ಅಹಮದ್ ಅವರಿಗೆ ಕಾನ್ಫಿಡೆನ್ಸ್ ಜಾಸ್ತಿ ಆಗಿದೆ ಅಂತ ಕೂಡ ಹೇಳಿದ್ದಾರೆ. ಅಲ್ಲದೆ ಮಹಮದ್ ಸಿರಾಜ್ ಕೂಡ ಈ ಒಂದು ಆರ್ಸಿಬಿ ತಂಡಕ್ಕೆ ಒಳ್ಳೆಯ ಆಸರೆಯಾಗುತ್ತಾರೆ ಎಂಬ ಮಾತುಗಳನ್ನು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಶಹಬಾಜ್ ಆಹ್ಮದ್ ಕ್ಯಾಪ್ಟನ್ ಕೊಹ್ಲಿ ಹಾಗೂ ಕೋಚ್ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಇನ್ನು ಇದೇ ಭಾನುವಾರ ಆರ್ಸಿಬಿ ತಂಡ ಕೆಕೆಆರ್ ವಿರುದ್ಧ ಕಣಕ್ಕಿಳಿದಿದ್ದು, ಈ ಪಂದ್ಯ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ. ನಿಮ್ಮ ಪ್ರಕಾರ ಯಾವ ಟೀಮ್ ಗೆಲ್ಲುತ್ತೆ ಮತ್ತು ನೀವು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯಾಗಿದ್ದಲ್ಲಿ ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ…