ನಿಧಿ ಸುಬ್ಬಯ್ಯ ಅವರ ದಾಂಪತ್ಯ ಜೀವನ ಎರಡನೆಯ ವರ್ಷಕ್ಕೆ ಮುರಿದು ಬೀಳಲು ಕಾರಣವೇನು ?? ಈ ರೀತಿ ಆಗಬರದಿತ್ತು !!

ಸ್ನೇಹಿತರೆ, ನಿಧಿಸುಬ್ಬಯ್ಯ ಸದ್ಯ ಬಿಗ್ ಬಾಸ್ ಸೀಸನ್ 8ರಲ್ಲಿ ತುಂಬಾ ಚೆನ್ನಾಗಿ ಆಟ ಆಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಬರುವ ಎಲ್ಲಾ ಸ್ಪರ್ಧಿಗಳ ಹಿಂದೆ ಒಂದು ನೋವಿನ ಕಥೆ ಇದ್ದೆ ಇರುತ್ತೆ. ಹಾಗೆ ನಿಧಿಸುಬ್ಬಯ್ಯ ಅವರ ಹಿಂದೆ ಕೂಡ ಒಂದು ನೋವಿನ ಕಥೆ ಇದೆ. ಅದು ಅವರ ದಾಂಪತ್ಯ ಜೀವನದ ಕಥೆ. ನಿಧಿ ಸುಬ್ಬಯ್ಯ ಅವರು ಮದುವೆಯಾಗಿದ್ದ ಹುಡುಗನ ಹೆಸರು ಲವೇಶ್ ಅಂತ, ನಿಧಿ ಸುಬ್ಬಯ್ಯ ಮೊದಲು ಲವೇಶ್ ಅವರನ್ನು ಜಸ್ಟ್ ಫ್ರೆಂಡ್ ಆಗಿ ಬೇಟಿ ಮಾಡ್ತಾರೆ. ಇನ್ನು ಲವೇಶ್ ಅವರು ದೊಡ್ಡ ಬಿಸಿನೆಸ್ ಮ್ಯಾನ್ ಮತ್ತು ದೊಡ್ಡ ರಿಚ್ ಪಾರ್ಟಿ.

ಇನ್ನು ಸ್ವಲ್ಪ ದಿನಗಳ ಕಾಲ ನಿಧಿಸುಬ್ಬಯ್ಯ ಮತ್ತು ಲವೇಶ್ ಡೇಟ್ ಕೂಡ ಮಾಡ್ತಾರೆ. ಅದಾದಮೇಲೆ 2017ರಲ್ಲಿ ನಿಧಿ ಸುಬ್ಬಯ್ಯ ಮತ್ತು ಲವೇಶ್ ಕೊಡವ ಸಂಪ್ರದಾಯದಂತೆ ಮದುವೆ ಕೂಡ ಆಗ್ತಾರೆ. ಇನ್ನು ಮದುವೆಯಾದ ಸ್ವಲ್ಪ ದಿನಗಳ ನಂತರ ನಿಧಿ ಮತ್ತು ಲವೇಶ್ ತುಂಬಾ ಅದ್ಭುತವಾಗಿ ಜೀವನವನ್ನು ನಡೆಸುತ್ತಿರುತ್ತಾರೆ. ಆದರೆ ಸ್ವಲ್ಪ ತಿಂಗಳು ಸರಿದ ಹಾಗೆ ನಿಧಿ ಸುಬ್ಬಯ್ಯ ಮತ್ತು ಲವೇಶ್ ಅವರ ನಡುವೆ ಅನೇಕ ಮನಸ್ತಾಪಗಳು ಶುರುವಾಗುತ್ತವೆ. ಇನ್ನು ಇದು ಸಣ್ಣ ಪುಟ್ಟ ಜಗಳ ಗಳಿಗೂ ಕೂಡ ಅದು ಕಾರಣವಾಗುತ್ತದೆ.

ಈ ಕಾರಣದಿಂದ ನಿಧಿ ಸುಬ್ಬಯ್ಯ ಹಾಗೂ ಲವೇಶ್ 2019ರಲ್ಲಿ ದೂರವಾಗ್ತಾರೆ. ಇನ್ನು ಎರಡು ವರ್ಷಗಳ ಕಾಲ ಇವರಿಬ್ಬರು ಒಟ್ಟಿಗೆ ದಂಪತಿಗಳಾಗಿ ಜೀವನ ನಡೆಸುತ್ತಾರೆ. ಆದರೆ ಲವೇಶ್ ಸದ್ಯ ಮತ್ತೊಂದು ಹುಡುಗಿಯ ಜೊತೆ ಸಂಪರ್ಕದಲ್ಲಿದ್ದು, ನಿಧಿ ಸುಬ್ಬಯ್ಯ ಅದಕ್ಕೆ ಯಾವ ಪ್ರತಿಕ್ರಿಯೆಯೂ ಕೊಟ್ಟಿಲ್ಲ. ಇನ್ನು ನಿಧಿ ಸುಬ್ಬಯ್ಯ ಲವೇಶ್ ಅವರಿಂದ ದೂರ ಆದಮೇಲೆ ಒಬ್ಬರೇ ಇರೋದಕ್ಕೆ ಶುರುಮಾಡಿದರು. ಈಗ ಸದ್ಯಕ್ಕೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಆದರೆ ತಮ್ಮ ಸಾಂಸಾರಿಕ ಜೀವನದ ಬಗ್ಗೆ ಅವರು ಬಿಗ್ ಬಾಸ್ ಮನೆಯಲ್ಲಿ ಯಾವತ್ತೂ ಚರ್ಚೆ ಮಾಡಿಲ್ಲ.

ಇನ್ನು ಮದುವೆಯಾದ ಎರಡೇ ವರ್ಷಗಳಲ್ಲಿ ಇವರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ನಿಜಕ್ಕೆ ಇವರಿಗೆ ಇದು ದೊಡ್ಡ ಸವಾಲು ಅಂತನೇ ಹೇಳಬಹುದು. ಸ್ನೇಹಿತರೆ ನೀವು ಕೂಡ ಬಿಗ್ ಬಾಸ್ ವೀಕ್ಷಕರಾಗಿದ್ದರೆ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಅನ್ನೋದನ್ನ ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ…