ಬಾಲ ಗುರುಜಿ ಅಭಿಗ್ಯ ಪ್ರಕಾರ ಈ ಕೊರೋನಾ ಯಾವಾಗ ಮುಗಿಯುತ್ತೆ ಗೊತ್ತಾ ? ಇದನ್ನು ತಿಳಿದರೆ ಖುಷಿ ಪಡ್ತೀರ !

ಸ್ನೇಹಿತರೆ, ಬಾಲ ಗುರುಜಿ ಅಭಿಗ್ಯ ಅವರು ಸುಮಾರು ಎರಡು ವರ್ಷಗಳ ಹಿಂದೆ ಜಗತ್ತಿಗೆ ಒಂದು ಮಹಾಮಾರಿ ಬರುತ್ತೆ ಎಂದು ಹೇಳಿದರು. ಹಾಗೆಯೇ ಅವರು ಹೇಳಿದ ಹಾಗೆ ಆಯಿತು. ನಮಗೆ ನಿಮಗೆಲ್ಲ ಗೊತ್ತಿರುವ ಹಾಗೆ ಇಡೀ ಭಾರತದಲ್ಲಿ ಕೊರೊನಾದಿಂದ ಸಾಕಷ್ಟು ಸಾವು-ನೋವುಗಳು ಆಗಿವೆ, ನಮ್ಮ ದೇಶದಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ಈ ಸೋಂಕು ಆವರಿಸುತ್ತಿದೆ. ಇಂಥ ಕಷ್ಟದ ಸಮಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಒಂದು ಪ್ರಶ್ನೆಯೆಂದರೆ ಇದಕ್ಕೆಲ್ಲಾ ಕೊನೆ ಯಾವಾಗ ಇನ್ನು ಎಷ್ಟು ದಿನಗಳ ಕಾಲ ಈ ಕಷ್ಟವನ್ನು ನಾವೆಲ್ಲ ಅನುಭವಿಸಬೇಕು ಎಂಬುದು.

ಹೌದು ಬಾಲ ಗುರುಜಿ ಅಭಿಗ್ಯ ಅವರು ಇದರ ಬಗ್ಗೆ ಒಂದು ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ…
ನಮಗೆಲ್ಲ ತಿಳಿದಿರುವ ಹಾಗೆ ಇಲ್ಲಿಯತನಕ ಬಾಲ ಗುರುಜಿ ಆದ ಅಭಿಗ್ಯ ಅವರು ಏನೆಲ್ಲಾ ಹೇಳಿದರು ಬಹುತೇಕ ಎಲ್ಲ ವಿಷಯಗಳು ಸತ್ಯವಾಗಿದ್ದು, ಸಾಕಷ್ಟು ಜನರು ಅವರ ಭವಿಷ್ಯವನ್ನು ನಂಬುತ್ತಾರೆ. ಇನ್ನು ಈ ಬಾಲ ಗುರೂಜಿಯವರು ಕೊರೋನಾದ ಬಗ್ಗೆ ಹಾಗೂ ದೇಶದ ಪರಿಸ್ಥಿತಿಗಳ ಬಗ್ಗೆ ಒಂದು ಖುಷಿಯ ವಿಚಾರವನ್ನು ಜನರ ಜೊತೆ ಹಂಚಿಕೊಂಡಿದ್ದಾರೆ.

ಬಾಲ ಗುರೂಜಿ ಅವರು ತಮ್ಮ ಪಂಚಾಂಗದ ಪ್ರಕಾರ, ಗ್ರಹಗತಿಗಳ ಪ್ರಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಕೆಲವು ರಿಸರ್ಚ್ ಗಳ ಪ್ರಕಾರ ಒಂದು ಖುಷಿ ಸುದ್ದಿಯನ್ನು ಜನರಿಗೆ ನೀಡಿದ್ದಾರೆ. ಹೌದು ಭಾರತದಲ್ಲಿ ಇನ್ನೂ ಕೇವಲ ಒಂದು ತಿಂಗಳು ಮಾತ್ರ ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯ ನಮ್ಮ ಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಮತ್ತು ಕರ್ನಾಟಕ ಸೇರಿದಂತೆ ಸಾಕಷ್ಟು ರಾಜ್ಯಗಳಲ್ಲಿ ಈ ಕೋರೋನಾ ಹಾವಳಿ ಹೆಚ್ಚಾಗಿದ್ದು, ಇನ್ನು ಕೇವಲ ಒಂದೇ ಒಂದು ತಿಂಗಳಲ್ಲಿ ಅಂತ್ಯ ಕಾಣಲಿದೆ ಎಂದು ಹೇಳಿದ್ದಾರೆ.

ಅದರಲ್ಲೂ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಜೂನ್ ಮೊದಲನೇ ವಾರ ಬರುವಷ್ಟರಲ್ಲಿ ಕೊರೋನಾ ಸಂಪೂರ್ಣವಾಗಿ ಕಡಿಮೆಯಾಗಿ ದಿನಕ್ಕೆ ಅಲ್ಲೊಂದು ಇಲ್ಲೊಂದು ಕೇಸುಗಳು ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಒಟ್ಟಿನಲ್ಲಿ ಈ ಕೊರೋನಾ ಹಾವಳಿ ಮತ್ತು ಭೀತಿಯ ನಡುವೆ ಬಾಲ ಗುರುಜಿ ಅಭಿಗ್ಯ ಅವರ ಭವಿಷ್ಯ ಮತ್ತು ಅಭಿಪ್ರಾಯಗಳು ಸಾಕಷ್ಟು ಜನರಲ್ಲಿ ಮನಸ್ಥೈರ್ಯ ನೆಮ್ಮದಿ ಮನೆ ಮಾಡಲು ಸಹಾಯ ಮಾಡಿದೆ ಅಂತಾನೆ ಹೇಳಬಹುದು…