ಬಿಗ್ ಬಾಸ್ ಸೀಸನ್ 8 ದಿಡೀರ್ ರದ್ದು !! ಮನೆಯೊಳಗೆ ಏನಾಗಿದೆ ಗೊತ್ತಾ ?

ಸ್ನೇಹಿತರೆ, ಒಂಟಿ ಮನೆಯಲ್ಲಿ ಹತ್ತಾರು ಕ್ಯಾಮೆರಾ 16 ಜನರಿರುವ ವಿಭಿನ್ನ ಆಟವೇ ಬಿಗ್ ಬಾಸ್. ಸದ್ಯ ಕನ್ನಡದ ಬಿಗ್ ಬಾಸ್ ಈಗಾಗಲೇ 71 ದಿನವನ್ನು ಪೂರೈಸಿದ್ದು, ಇನ್ನು 30 ದಿನಗಳ ಕಾಲ ಬಿಗ್ ಬಾಸ್ ಮುಂದುವರಿಯ ಬೇಕಾಗಿತ್ತು. ಆದರೆ ಕೊರೋನಾ ಪ್ರಕರಣದಿಂದಾಗಿ ಬಿಗ್ ಬಾಸ್ ನಿಂತಿದೆ. ಇನ್ನು ನಾಳೆಯೇ ಬಿಗ್ ಬಾಸ್ ಸೀಸನ್ ಎಂಟರ ಕೊನೆಯ ಎಪಿಸೋಡ್ ಎಂದು ಕಲರ್ಸ್ ಕನ್ನಡ ಚಾನೆಲ್ ಸ್ಪಷ್ಟಪಡಿಸಿದೆ. ಇತ್ತ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಜನರು ಕೊರೋನಾಗೆ ತತ್ತರಿಸಿಹೋಗಿದ್ದಾರೆ.

ಅದರಲ್ಲು ರಾಜ್ಯದಲ್ಲಿ ಒಂದೇದಿನಕ್ಕೆ ಹೆಚ್ಚು ಕಡಿಮೆ ಐವತ್ತು ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಲಾಕ್ಡೌನ್ ಘೋಷಿಸಿ ಸುಮಾರು ವಾರಗಳು ಕಳೆದರೂ ಅದು ಫಲಕಾರಿಯಾಗದೆ ಕಾರಣ ಸೋಮವಾರದಿಂದ ಕಠಿಣ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ರಾಜ್ಯದಲ್ಲೆಡೆ ಮುಂದಿನ 15 ದಿನಗಳ ಕಾಲ ಧಾರ್ಮಿಕ, ರಾಜಕೀಯ ಅಥವಾ ಮತ್ಯಾವುದೋ ಕಾರ್ಯಕ್ರಮಗಳಿಗೂ ಜನ ಸೇರುವಂತಿಲ್ಲ. ಅಲ್ಲದೆ ಮದುವೆಗೂ 50 ಜನರ ಮೇಲೆ ಸೇರುವಂತಿಲ್ಲ.

ಇನ್ನು ಪರಿಸ್ಥಿತಿ ಹೀಗಿರುವಾಗ 150ಕ್ಕೂ ಹೆಚ್ಚು ಜನ ತೆರೆ ಹಿಂದೆ ಕೆಲಸ ಮಾಡುವ ಕಾರ್ಯಕ್ರಮ ಬಿಗ್ ಬಾಸ್. ಹೀಗಾಗಿ ಈ ಕಾರ್ಯಕ್ರಮ ಮುಂದುವರೆಯುವುದು ಅಸಾಧ್ಯವಾದ ಮಾತಾಗಿದೆ. ರಾಜ್ಯದಲ್ಲಿ ಅಂತ್ಯಸಂಸ್ಕಾರಕ್ಕೂ ಐದು ಜನ ಭಾಗವಹಿಸಬೇಕಾಗಿದೆ ಪರಿಸ್ಥಿತಿ ಹೀಗಿರುವಾಗ ಬಿಗ್ಬಾಸ್ ನಿಲ್ಲಿಸಬೇಕಾಗಿದೆ. ಅಲ್ಲದೆ ಏಕಕಾಲದಲ್ಲಿ 150 ಜನ ಕಾರ್ಯನಿರ್ವಹಿಸುವುದು ಅಪಾಯ ಎಂಬುದನ್ನು ಮನಗಂಡ ಕಲರ್ಸ್ ಕನ್ನಡ ಚಾನೆಲ್ ನ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಈ ಮಹತ್ವದ ನಿರ್ಧಾರ ಮಾಡಿದ್ದಾರೆ.

ಜೊತೆಗೆ ತಮ್ಮ ಮನದ ನೋವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಬಿಗ್ ಬಾಸ್ ಶುರುವಾಗಿ ಇವತ್ತಿಗೆ 71 ದಿನ ಕಳೆದಿದೆ. ಪಿಸಿಆರ್ ನಲ್ಲಿ ನಿಂತು ಮನೇಲಿ ಇರೋ 11ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲ ಮೂಡುತ್ತದೆ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೆ ಇರುವವರೆಲ್ಲ ಖುಷಿಯಾಗಿದ್ದಾರೆ. ಅಲ್ಲದೆ ಸೇಫ್ ಆಗಿಯೂ ಸಹ ಇದ್ದಾರೆ. ಏನೋ ಎಲ್ಲರಿಗೂ ಹೊರಗಡೆ ಹಾಗಿರುವ ಬೆಳವಣಿಗೆಯನ್ನು ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ, ಆನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಸಿದ್ಧತೆಗಳು ನಡೆಯುತ್ತಿವೆ.

ನೂರಾರು ದಿನಗಳ ಕೆಲಸ ನೂರಾರು ಜನರ ಕೆಲಸ ಎಲ್ಲವನ್ನು ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೆ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ತಂದುಕೊಟ್ಟ ತೀರ್ಮಾನ. ಮನಸ್ಸು ಭಾರವಾಗಿದೆ ಈ ಶೋ ನಿಂತಿದೆ ಅಂತಲ್ಲ, ಹೊರಗಡೆ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ. ಎಲ್ಲರಿಗೂ ಈ ಕಳವಳಗೊಂಡು ಉತ್ತರ ಬೇಗ ಸಿಗಲಿ, ಸುರಕ್ಷಿತವಾಗಿದೆ ಎಂದು ಬರೆದುಕೊಂಡಿದ್ದಾರೆ ಪರಮೇಶ್ವರ್ ಗುಂಡ್ಕಲ್…