ಮದುವೆ ಬಗ್ಗೆ ಕೊನೆಗೂ ಗುಟ್ಟು ರಟ್ಟು ಮಾಡಿದ ವೈಷ್ಣವಿ ಗೌಡ… ಇಲ್ಲಿದೆ ನೋಡಿ ಸಿಹಿಸುದ್ದಿ.

ಸ್ನೇಹಿತರೆ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಎಂಬ ಜನಮೆಚ್ಚಿದ ಧಾರಾವಾಹಿ ಮೂಲಕ ಸನ್ನಿಧಿ ಪಾತ್ರಧಾರಿಯಾಗಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ನಟಿ ವೈಷ್ಣವಿ ಗೌಡ ಸದ್ಯ ಬಿಗ್ ಬಾಸ್ ಎಂಟನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದಾರೆ. ಇನ್ನು ಅಗ್ನಿಸಾಕ್ಷಿ ಧಾರಾವಾಹಿ ಎಷ್ಟರಮಟ್ಟಿಗೆ ಖ್ಯಾತಿ ಗಳಿಸಿತ್ತು ಎಂದರೆ ಸಾಕಷ್ಟು ವರ್ಷಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಈ ಧಾರಾವಾಹಿಯ ಮೂಲಕ ಸನ್ನಿಧಿ ಪಾತ್ರದಾರಿ ವೈಷ್ಣವಿ ಗೌಡ ರವರಿಗೆ ಸಾಕಷ್ಟು ಪ್ರಶಸ್ತಿಗಳು ದೊರಕಿದ್ದು, ಕಿರುತೆರೆ ಲೋಕದ ಸ್ಟಾರ್ ನಟಿಯಾಗಿ ಮೆರೆದಿದ್ದಾರೆ.

ಆದರೆ ಒಂದು ಸಮಯದಲ್ಲಿ ಈ ಧಾರಾವಾಹಿಯ ಮುಖ್ಯಪಾತ್ರದಲ್ಲಿ ವಿಜಯಸೂರ್ಯ ಅವರು ಧಾರಾವಾಹಿಯನ್ನು ತೊರೆದರೆ ಖಳನಾಯಕಿ ಪ್ರಿಯಾಂಕಾ ಅವರು ಕೂಡ ಧಾರವಾಹಿಯನ್ನು ತೊರೆದು ಬಿಗ್ ಬಾಸ್ ಮನೆಗೆ ಹೋಗಿದ್ದರು. ಇವರಿಬ್ಬರೂ ಇಲ್ಲದೆ ಹೋದರೂ ಕೂಡ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡ ವೈಷ್ಣವಿ ಗೌಡ ಅವರು ಧಾರವಾಹಿಯನ್ನು ಯಶಸ್ವಿಯಾಗಿ ಮುನ್ನಡೆಸಲು ಪ್ರಮುಖ ಕಾರಣರಾದರು.

ಸದ್ಯ ಇದರ ಬೆನ್ನಲ್ಲೇ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸುತ್ತಿರುವ ವೈಷ್ಣವಿ ಅವರು ಅಗ್ನಿಸಾಕ್ಷಿ ಧಾರವಾಹಿ ನಿಲ್ಲಿಸಿದ ನಂತರ ಮತ್ತೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಇದೀಗ ಅವರು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಭಾಗವಹಿಸಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ವೈಷ್ಣವಿ ಗೌಡ ಅವರ ಲೈಫ್ ಸ್ಟೈಲ್ ಹಾಗೂ ಅವರ ನಡುವಳಿಕೆ ನಿಜ ಜೀವನದಲ್ಲಿ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೀಗ ವೈಷ್ಣವಿ ಅವರ ನಿಜಸ್ವರೂಪ ನೋಡಿ ಪ್ರೇಕ್ಷಕರು ಅಭಿಮಾನಿಗಳು ಕೂಡ ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಈ ವೇಳೆ ಪ್ರೇಮದ ವಿಚಾರವಾಗಿ ದಿವ್ಯ ಸುರೇಶ್ ಅವರೊಂದಿಗೆ ಮಾತನಾಡುತ್ತ ಕುಳಿತಿದ್ದ ವೈಷ್ಣವಿ ಅವರು ಹೌದು ನಾನು ಮದುವೆ ಆಗುವುದಕ್ಕೆ ತುದಿಗಾಲಲ್ಲಿ ನಿಂತಿದ್ದೇನೆ ಎಂದು ಹೇಳಿರುವ ವೈಷ್ಣವಿ, ಮದುವೆ ಕಾನ್ಸೆಪ್ಟ್ ಎಂದರೆ ನನಗೆ ಬಹಳ ಇಷ್ಟ, ಅದರಲ್ಲಿಯೂ ಪ್ರೀತಿಯ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಪೋಷಕರ ಜೊತೆ ಹಾಗೂ ಸ್ನೇಹಿತರ ಜೊತೆಯಲ್ಲಿ ಎಲ್ಲಾ ವಿಚಾರವನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ನಮ್ಮ ಪತಿಯ ಜೊತೆ ಎಲ್ಲ ವಿಚಾರವನ್ನು ಸುಲಭವಾಗಿ ಹೇಳಿಕೊಳ್ಳಬಹುದು ನಾನು ಇಲ್ಲಿಯವರೆಗೂ ನನ್ನ ಜೀವನವನ್ನು ಒಬ್ಬಂಟಿಯಾಗಿಯೇ ಕಳೆದಿದ್ದೇನೆ.

ನನ್ನವರು ಅಂತ ನನಗೆ ಇರುವುದು ಬಹಳ ಕಡಿಮೆ, ನನಗೆ ಒಂದು ಕನೆಕ್ಷನ್ ಬೇಕು ಎಂದು ಹೇಳಿಕೊಳ್ಳುವ ಮೂಲಕ ಆದಷ್ಟು ಬೇಗ ಪ್ರೀತಿ ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ. ಇದೀಗ ವೈಷ್ಣವಿ ಗೌಡ ಪ್ರೇಮದ ವಿಚಾರವಾಗಿ ಮಾತನಾಡುವ ಮೂಲಕ ಪ್ರಿಯತಮನ ಬಗ್ಗೆ ಕನಸು ಕಾಣುತ್ತಿರುವುದಾಗಿ ತಿಳಿಸಿದ್ದಾರೆ…