ಸುಮಾರು ವರ್ಷಗಳಿಂದ ಜನಮೆಚ್ಚಿದ ನಿರೂಪಕಿ ಯಾಗಿರುವ ಪಬ್ಲಿಕ್ ಟಿವಿ ದಿವ್ಯ ಅವರ ಸಂಭಾವನೆ ಎಷ್ಟು ಗೊತ್ತಾ? ಕುಟುಂಬ ಹೇಗಿದೆ ನೋಡಿ !!

ಸ್ನೇಹಿತರೆ, ಕನ್ನಡ ನ್ಯೂಸ್ ಮಾಧ್ಯಮಗಳ ಜಗತ್ತಿನಲ್ಲಿ ಸದ್ಯ ಪಬ್ಲಿಕ್ ಟಿವಿ ನಂಬರ್ ಒನ್ ಸ್ಥಾನದಲ್ಲಿದೆ ಎಂದೇ ಹೇಳಬಹುದು. ಟಿ ಆರ್ ಪಿ ಯಲ್ಲಿಯೂ ಕೂಡ ಮುಂಚೂಣಿಯಲ್ಲಿರುವ ವಾಹಿನಿ, ಬೇರೆ ಎಲ್ಲಾ ನ್ಯೂಸ್ ಚಾನಲ್ ಗಳನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಪಬ್ಲಿಕ್ ಟಿವಿಯಲ್ಲಿ ನಿರೂಪಕರಾಗಿ ಕೆಲಸ ಮಾಡುತ್ತಿರುವವರಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸಿರುವ ನಿರೂಪಕಿ ಎಂದರೆ ಅದು ದಿವ್ಯಜ್ಯೋತಿ ಅವರು. ಸದ್ಯ ಇವರಿಗೆ ಸಾಕಷ್ಟು ಅಭಿಮಾನಿಗಳಿದ್ದು, ಯುವಪೀಳಿಗೆ ಗಳು ಡಿಂಪಲ್ ದಿವ್ಯ ಎಂದೇ ಕರೆಯುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಡಿಂಪಲ್ ದಿವ್ಯ ಹೆಸರಿನಲ್ಲಿ ಸಾಕಷ್ಟು ಪೇಜ್ ಗಳು ಕೂಡ ಇದು, ಈ ನಗುಮುಖದ ಬೆಡಗಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಚಾರ ಚರ್ಚೆಯಾಗುತ್ತಿದ್ದು, ಡಿಂಪಲ್ ದಿವ್ಯ ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ, ಅವರಿಗೆ ವಿವಾಹವಾಗಿದೆಯೇ ಎಂದು ಮಾತನಾಡಿಕೊಳ್ಳುತ್ತಿರುತ್ತಾರೆ. ಸದ್ಯ ಎಲ್ಲಾ ವಿಚಾರಗಳಿಗೆ ತೆರೆ ಎಳೆಯುವ ಪ್ರಯತ್ನ ಈ ಲೇಖನದಲ್ಲಿ ಆಗಿದೆ. ಹೀಗಾಗಿ ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಕಾಂ ಪದವಿಯನ್ನು ಪಡೆದುಕೊಂಡಿರುವ ದಿವ್ಯಜ್ಯೋತಿ ಉದಯ ಮ್ಯೂಸಿಕ್ ನಲ್ಲಿ ನಿರೂಪಕಿಯಾಗಿ 2007ರಲ್ಲಿ ಸೇರಿಕೊಳ್ಳುತ್ತಾರೆ. ಈ ವಾಹಿನಿಯಲ್ಲಿ ಸಾಕಷ್ಟು ವರ್ಷಗಳ ಕಾಲ ನಿರೂಪಕಿಯಾಗಿ ಕಾಣಿಸಿಕೊಂಡ ಡಿಂಪಲ್ ದಿವ್ಯ ನಂತರ ನ್ಯೂಸ್ ವಾಹಿನಿಯೊಂದರಲ್ಲಿ ಸಿನಿಮಾ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರು. ನಂತರ ಪಬ್ಲಿಕ್ ಟಿವಿಯಲ್ಲಿ ಸಿನಿಮಾ ನ್ಯೂಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಸೇರಿಕೊಂಡರು. ಇದೀಗ ಎರಡು ವರ್ಷಗಳಿಂದ ಪಬ್ಲಿಕ್ ಟಿವಿಯಲ್ಲಿ ಯಶಸ್ವಿ ನಿರೂಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇನ್ನು ಬಲ್ಲ ಮೂಲಗಳ ಪ್ರಕಾರ ದಿವ್ಯಜ್ಯೋತಿ ಅವರು ಪಬ್ಲಿಕ್ ಟಿವಿಯಲ್ಲಿ ಒಂದು ಸಂಚಿಕೆಗೆ ಬರೋಬರಿ 5,000 ಹಣವನ್ನು ಸಂಭಾವನೆಯಾಗಿ ಪಡೆದುಕೊಳ್ಳುತ್ತಿದ್ದು, ಅವರ ತಿಂಗಳ ಸಂಪಾದನೆ ಬರೋಬ್ಬರಿ 1 ಲಕ್ಷ 30 ಸಾವಿರ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಡಿಂಪಿ ಮೂರು ಕೋಟಿ ಆಸ್ತಿಯ ಒಡತಿ ಎಂಬುದು ಕೂಡ ತಿಳಿದುಬಂದಿದೆ. ಇನ್ನು ಪ್ರತಿನಿತ್ಯ 9ರಿಂದ 10ಗಂಟೆಯವರೆಗೆ ಪ್ರಸಾರವಾಗುವ ಬಿಗ್ ಬುಲೆಟಿನ್ ವಿತ್ ಎಚ್ಆರ್ ರಂಗನಾಥ್ ಅವರ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ದಿವ್ಯಜ್ಯೋತಿ ಅವರು ಈ ಕಾರ್ಯಕ್ರಮದ ಮೂಲಕ ಅತ್ಯಂತ ಜನಪ್ರಿಯತೆಯನ್ನು ಕಂಡುಕೊಂಡಿದ್ದಾರೆ.