ರಣವೀರ್ ರವರು ನಟನೆ ಮಾಡುತ್ತಿರುವ 83 ಸಿನೆಮಾದ ನಿಮಗೆ ತಿಳಿಯದ ವಿಶೇಷತೆಗಳೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನೀವು ಸೋಶಿಯಲ್ ಮೀಡಿಯಾಗಳಲ್ಲಿ 83 ಎಂಬ ಸಿನಿಮಾದ ಪೋಸ್ಟರ್ ನೋಡಿರುತ್ತಿರಿ. ಕಪಿಲ್ ದೇವ್ ಜೊತೆ ರಣವೀರ್ ಸಿಂಗ್ ರೆಟ್ರೋ ಲುಕ್ಕಿನಲ್ಲಿ ಕಾಣಿಸಿ ಕೊಂಡಿರುವ ರೀತಿ ಇದೆ. ಹಾಗಾದರೇ ಈ ಸಿನಿಮಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಹೌದು ವಿಶ್ವದ ಕ್ರಿಕೇಟ್ ಜಗತ್ತಿನಲ್ಲಿ ಭಾರತ 1983ರಲ್ಲಿ ದೈತ್ಯ ಕೆರೆಬಿಯನ್ ದೊರೆಗಳಾದ ವೆಸ್ಟ್ ಇಂಡಿಸ್ ಟೀಮನ್ನು ಮಣಿಸಿ ವಿಶ್ವಕಪ್ ಎತ್ತಿಹಿಡಿದಿತ್ತು.

ಆ ಚಾಂಪಿಯನ್ಶಿಪ್ ಗೂ ಮುನ್ನ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರಲಿಲ್ಲ. ಮೊದಲ ಸುತ್ತಿನಲ್ಲಿಯೇ ಹೊರಹೋಗಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೇ ಎಲ್ಲರ ಲೆಕ್ಕಾಚಾರ ತಲೆಕೆಳಗುಮಾಡುವಂತೆ ಭಾರತ ಫೈನಲ್ ನಲ್ಲಿ ಕಪ್ ಎತ್ತಿಹಿಡಿದಿತ್ತು. ಅಲ್ಲಿಂದ ಭಾರತದಲ್ಲಿ ಕ್ರಿಕೇಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿ ಹೊರಹೊಮ್ಮಿತು.

ಅಂದಿನ ಟೀಂ ನ ವಾತಾವರಣ, ಡ್ರೆಸ್ಸಿಂಗ್ ರೂಂ ನ ಚರ್ಚೆ ಹೀಗೆ ಸಾಲು ಸಾಲು ಎಮೋಷನಲ್ ದೃಷ್ಯಗಳನ್ನ ಮರು ಸೃಷ್ಠಿಸಲಾಗಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಅಭಿನಯಿಸಿದ್ದು, ಅವರ ಧರ್ಮಪತ್ನಿ ರೋಮಿ ದೇವ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಹಲವಾರು ನಟ ನಟಿಯರು ಇದ್ದಾರೆ. ಭಜರಂಗಿ ಬಾಯಿಜಾನ್, ಕಾಬೂಲ್ ಎಕ್ಸ್ ಪ್ರೆಸ್, ನ್ಯೂಯಾರ್ಕ್ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಕಬೀರ್ ಖಾನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದೇ ಜೂನ್ 5 ರಂದು ಚಿತ್ರ ಬಿಡುಗಡೆ ಮಾಡುತ್ತೆವೆ ಎಂದು ಚಿತ್ರ ತಂಡ ಹೇಳಿದೆ. ಬಹುಷಃ ಲಾಕ್ ಡೌನ್ ಇರುವ ಕಾರಣ ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.