ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಮತ್ತೊಂದು ಶಾಕ್ ನೀಡಿದ ಬಿಗ್ ಬಾಸ್ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಪ್ರಸಾರ ವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ದಿನೇ ದಿನೇ ಮಹತ್ವದ ತಿರುವುಗಳ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದೇ ಸಮಯದಲ್ಲಿ ಮನೆ ಒಳಗಡೆ ಇರುವ ಸ್ಪರ್ಧಿಗಳು ಕೂಡ ಈಗಾಗಲೇ ಹಲವಾರು ವಾರಗಳನ್ನು ಮನೆಯಲ್ಲಿ ಕಳೆದಿರುವ ಕಾರಣ ಇನ್ನು ಕೆಲವೊಂದು ವಾರಗಳು ಉಳಿದುಕೊಂಡರೆ ಫೈನಲ್ ವರೆಗೆ ತಲುಪಬಹುದು ಎಂಬ ಲೆಕ್ಕಾಚಾರದಲ್ಲಿ ಆಟವಾಡುತ್ತಿದ್ದಾರೆ.

ಈ ಲೆಕ್ಕಾಚಾರಗಳ ನಡುವೆ ನೆನ್ನೆ ಮನೆಯಿಂದ ಒಬ್ಬರು ಹೊರ ಹೋಗಬೇಕಾಗಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ ಆದರೆ ಅದ್ಯಾಕೋ ತಿಳಿದಿಲ್ಲ. ಬಿಗ್ ಬಾಸ್ ಮನೆಯಲ್ಲಿ ನೆನ್ನೆ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಆದರೆ ಇದೇ ಸಮಯದಲ್ಲಿ ಬಿಗ್ ಬಾಸ್ ಮಹತ್ವದ ತಿರುವೊಂದನ್ನು ನೀಡಿದ್ದಾರೆ.

ಹೌದು ಸ್ನೇಹಿತರೇ ಈ ವಾರ ನೇರವಾಗಿ ಮನೆಯ ಮಂದಿಯನ್ನು ಒಂದೆಡೆ ಕರೆಸಿ ಈ ಮನೆಯಿಂದ ಒಬ್ಬೊಬ್ಬರನ್ನು ಸೇವ್ ಮಾಡುವ ಬದಲು ನೇರವಾಗಿ ಇವರ ಮನೆಯಿಂದ ಹೊರ ಹೋಗುತ್ತಿರುವ ಸದಸ್ಯರು ಯಾರು ಎಂದು ಮಾತನ್ನು ಆರಂಭಿಸದ ಬಿಗ್ ಬಾಸ್ ಈ ವಾರ ಯಾರು ಹೊರಗೆ ಹೋಗುತ್ತಿಲ್ಲ ಆದರೆ ಈ ಬಾರಿ ನಾಮಿನೇಟ್ ಆಗಿರುವ 6 ಸ್ಪರ್ಧಿಗಳು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆಗುತ್ತಾರೆ ಆದರೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಚಕ್ರವರ್ತಿ ರವರು ಈ ಸಾಲಿನಲ್ಲಿ ಇರುವುದಿಲ್ಲ ಎಂದರು. ಆದರೆ ಈ ಸಮಯದಲ್ಲಿ ಮತ್ತೊಮ್ಮೆ ಈ ವಾರಕ್ಕಾಗಿ ಉಳಿದ ಸ್ಪರ್ದಿಗಳ ಜೊತೆ ನಾಮಿನೇಷನ್ ಪ್ರಕ್ರಿಯೆ ನಡೆಸಲಿಲ್ಲ. ಆದ ಕಾರಣ ಮಂಜು ಪ್ರಿಯಾಂಕಾ ಅರವಿಂದ್ ಪ್ರಶಾಂತ್ ಸಂಬರ್ಗಿ ಹಾಗೂ ದಿವ್ಯ ಸುರೇಶ್ ರವರು ಇವರಲ್ಲಿ ಈ ವಾರ ಮನೆಯಿಂದ ಒಬ್ಬರು ಹೊರ ಹೋಗುವುದು ಖಚಿತವಾಗಿದೆ.