ಬಿಗ್ ಬಾಸ್ ಸೀಸನ್ 8ರ ಈ 8 ಸ್ಪರ್ಧಿಗಳು ಎಷ್ಟು ಓದಿದ್ದಾರೆ ಗೊತ್ತಾ..?

ಸ್ನೇಹಿತರೆ, ಬಿಗ್ ಬಾಸ್ ರಿಯಾಲಿಟಿ ಶೋ ತನ್ನ ರೋಚಕತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರೇಕ್ಷಕರಲ್ಲಿ ಈ 8 ಸ್ಪರ್ಧಿಗಳ ಕುರಿತು ಕೂಡ ಕುತೂಹಲ ಹೆಚ್ಚಾಗುತ್ತದೆ. ಅವರ ವೈಯಕ್ತಿಕ ಜೀವನದ ಕುರಿತು, ಕುಟುಂಬದ ವಿಷಯ, ಅವರು ಏನು ಓದಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗುತ್ತದೆ. ನೀವು ಕೂಡ ಬಿಗ್ ಬಾಸ್ ಸ್ಪರ್ಧಿಗಳ ಎಜುಕೇಶನ್ ಎಷ್ಟಾಗಿರಬಹುದು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮೊದಲಿಗೆ ಪ್ರಶಾಂತ್ ಸಂಬರ್ಗಿ ಇವರು ತುಂಬಾನೇ ಅಗ್ರೆಸಿವ್ ಅಂತ ಒಮ್ಮೊಮ್ಮೆ ಅನಿಸಿದರೆ ಇನ್ನು ಕೆಲವೊಮ್ಮೆ ತುಂಬಾ ಸಾಫ್ಟ್ ಎಂದೆನಿಸುತ್ತದೆ. ಇವರು ಫೈನಲ್ಗೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಅಭಿಮಾನಿಗಳು ಹೇಳುತ್ತಿರುತ್ತಾರೆ. ಇಂತಹ ಪ್ರಶಾಂತ್ ಸಂಬಂಧಿ ಎಂಬಿಎ ಅನ್ನು ಪೂರ್ಣಗೊಳಿಸಿದ್ದಾರೆ.ಆರಂಭದ ದಿನಗಳಲ್ಲಿ ಬೇರೆಯವರ ಬಳಿ ಹೋಗಿ ಕೆಲಸ ಮಾಡುತ್ತಿದ್ದವರು ಈಗ ತಮ್ಮದೇ ಆದಂತಹ ವೋನ್ ಬಿಸಿನೆಸ್ ಶುರು ಮಾಡಿ ಸುಖಜೀವನವನ್ನು ನಡೆಸುತ್ತಿದ್ದಾರೆ.

ಚಕ್ರವರ್ತಿ ಚಂದ್ರಚುಡ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದವರು ಆರಂಭದ ದಿನಗಳಲ್ಲಿ ತುಂಬಾನೇ ಅಗ್ರೆಸ್ಸಿವ್ ಎನಿಸಿಕೊಳ್ಳುತ್ತಿದ್ದ ಇವರು ಬಿಎ ಅನ್ನು ಕಂಪ್ಲೀಟ್ ಮಾಡಿದ್ದಾರೆ. ತದನಂತರ ಸೈಕಾಲಜಿಯಲ್ಲಿ ಎಂ ಎ ಮುಗಿಸಿದ್ದಾರೆ. ವೈಷ್ಣವಿ ಸದ್ಯ ಮನೆಯಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವಂತಹ ಸ್ಪರ್ಧೆ ಆಗಿಬಿಟ್ಟಿದ್ದಾರೆ. ಇಂತಿಪ್ಪ ವೈಷ್ಣವಿ ಬಿಎ ಅನ್ನೋ ಕಂಪ್ಲೀಟ್ ಮಾಡಿದ್ದಾರೆ ಆದರೆ ಎಜುಕೇಶನ್ಗೆ ಸಂಬಂಧಪಟ್ಟ ಯಾವುದೇ ಕೆಲಸವನ್ನು ಮಾಡುತ್ತಿಲ್ಲ ಬದಲಾಗಿ ಮಾಡ್ಲಿಂಗ್ ಮತ್ತು ಕಿರುತೆರೆ ಕ್ಷೇತ್ರದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ರಘು ಗೌಡ ಮನೆಯಲ್ಲಿ ಆರಂಭದಲ್ಲಿ ತುಂಬಾನೇ ಸೈಲೆಂಟಾಗಿದ್ದ ಇವರು ಈಗ ಎಲ್ಲರಿಗೂ ಕಾಮಿಡಿ ಕಚಗುಳಿಯನ್ನು ನೀಡುವ ಮೂಲಕ ಹೆಚ್ಚು ಸದ್ದು ಮಾಡುತ್ತಿದ್ದಾರೆ. ರಘು ಗೌಡ ಬಿಎಸ್ಸಿ ಮುಗಿಸಿದ್ದಾರೆ ಮೊದಲಿಗೆ ಒಂದು ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಇವರು ಕೈತುಂಬಾ ಸಂಪಾದಿಸುತ್ತಿದ್ದರು ಸಹ ತಮ್ಮ ಪ್ಯಾಶನ್ ಆದ ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿ ಈಗ ಅದರಿಂದ ಆದಾಯ ಗಳಿಸುತ್ತಿದ್ದಾರೆ.

ನಿಧಿ ಸುಬ್ಬಯ್ಯ ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಕೂಡ ಒಂದೇ ರೀತಿ ಇದ್ದಾರೆ ಬದಲಾವಣೆ ಅವರಲ್ಲಿ ಕಂಡು ಬರುತ್ತಿಲ್ಲ. ಇವರು ಇಂಜಿನಿಯರಿಂಗ್ ಪದವೀಧರೆ ಆದರೆ ಅವರು ಕೂಡ ತಮ್ಮ ಎಜುಕೇಶನ್ಗೆ ತಕ್ಕ ಹಾಗೆ ಕೆಲಸವನ್ನು ಮಾಡಲಿಲ್ಲ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಿನಿರಂಗದಲ್ಲಿ ಪ್ರಸಿದ್ಧಿಯಾಗಿದ್ದರೆ. ಶುಭ ಪೂಂಜಾ, ಬಿಗ್ ಬಾಸ್ನ ಟಫೇಸ್ಟ್ ಕಂಟೆಸ್ಟೆಂಟ್ಗಳಲ್ಲಿ ಇವರು ಕೂಡ ಒಬ್ಬರು‌ ಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವಿಶ್ವನಾಥ್ ಹಾವೇರಿ ಸಾಮಾನ್ಯವಾಗಿ ಮನೆಯಲ್ಲಿ ಚಿಕ್ಕ ಹುಡುಗ ಎಂದು ಕರೆಸಿಕೊಳ್ಳುತ್ತಿದ್ದ ಇವರು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ರಾಜೀವ್ ಕೂಡ ಆರಂಭದಿಂದಲೂ ಮನೆಯಲ್ಲಿ ಒಂದೇ ರೀತಿ ಕಾಣಿಸಿಕೊಳ್ಳುತ್ತಿದ್ದರು.ಎಲ್ಲರೂ ಇವರನ್ನು ಟಫೇಸ್ಟ್ ಕಂಟೆಸ್ಟೆಂಟ್ ಎಂದು ಭಾವಿಸಿದ್ದರು ಆದರೆ ಮನೆಯಿಂದ ಎಲಿಮಿನೇಟ್ ಆಗಿ ಹೋಗಿದ್ದು ಎಲ್ಲರಿಗೂ ಬೇಸರವನ್ನು ತಂದುಕೊಟ್ಟಿದ್ದು ಇಂತಿಪ್ಪ ರಾಜೀವ್ ಡಿಗ್ರಿಯನ್ನು ಕಂಪ್ಲೀಟ್ ಮಾಡಿದ್ದಾರೆ.