ಬಿಗ್ ಬಾಸ್ ಅರವಿಂದ್ ಮತ್ತು ದಿವ್ಯಾ ಉರುಡುಗ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ..??

ಪ್ರತಿ ಬಿಗ್ ಬಾಸ್ ಸೀಸನ್ ನಲ್ಲಿ ಸಹ ಒಂದು ಜೋಡಿ ನೋಡುಗರ ಕಣ್ಮನ ಸೆಳೆಯುತ್ತದೆ. ಗಾಸಿಪ್ ಗಳಿಗೂ ಸಹ ಆಹಾರವಾಗುತ್ತದೆ. ಟ್ರೋಲ್ ಪೇಜಸ್ ಗಳಿಗೂ ಸಹ ಭರಪೂರ ಕಂಟೆಂಟ್ ಒದಗಿಸುತ್ತದೆ. ಅದೇ ರೀತಿ ಈ ಸೀಸನ್ ಆರಂಭದಿಂದಲೂ ಬೈಕ್ ರೇಸರ್ ಅರವಿಂದ್ ಹಾಗೂ ನಟಿ ದಿವ್ಯಾ ಉರುಡುಗ ಜೋಡಿ ಬಗ್ಗೆ ಹಲವಾರು ವದಂತಿಗಳು ಕೇಳಿ ಬಂದಿದ್ದವು.

ಇವರ ರಿಲೇಶನ್ ಶಿಪ್ ಬಗ್ಗೆ ಪ್ರಶಾಂತ್ ಸಂಬರ್ಗಿ ಕೇವಲವಾಗಿ ಮಾತನಾಡಿದಾಗ ಬಿಗ್ ಬಾಸ್ ಮನೆಯಲ್ಲಿ ಕೋಲಾಹಲವಾಗಿತ್ತು. ಮುಂದೆ ಕೆಲವು ಒಪನ್ ಟಾಸ್ಕ್ ಗಳಲ್ಲಿ ದಿವ್ಯಾ ಉರುಡುಗ ಅವರನ್ನ ಅರವಿಂದ್ ತಮ್ಮ ಗೆಳತಿ ಎಂದು ಒಪ್ಪಿ ಕೊಂಡಿದ್ದರು. ಈ ಮಧ್ಯೆ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ನಡುವೆ ವಯಸ್ಸಿನ ಅಂತರ ಬಹಳಷ್ಟು ಇದೆ ಎಂದು ಕೆಲವರು ಹೇಳಿದ್ದರು.

ಆದರೇ ಮಾಹಿತಿಗಳ ಪ್ರಕಾರ ಇವರ ನಡುವಿನ ವಯಸ್ಸಿನ ಅಂತರ ಕೇವಲ ಐದು ವರ್ಷ . ಹೌದು ಅರವಿಂದ್ ಡಿಸೆಂಬರ್ 8, 1985 ರಲ್ಲಿ ಜನಿಸಿದ್ದರೇ, ದಿವ್ಯಾ ಉರುಡುಗ ಅವರ ಜನ್ಮದಿನಾಂಕ ಜನೇವರಿ 16, 1990. ಬಿಗ್ ಬಾಸ್ ಮುಗಿದ ನಂತರವೂ ಸಹ ಈ ಜೋಡಿ ಜೀವನದಲ್ಲಿ ಒಂದಾಗಿ ಬಾಳಲಿ ಎಂಬುದು ಹಲವಾರು ಅಭಿಮಾನಿಗಳ ಹಾರೈಕೆ.