ಮದುವೆಗೂ ಮುನ್ನ ತಂದೆಯಾಗುತ್ತಿರುವ ಕೆ.ಕೆ.ಆರ್ ನ ಮತ್ತೊಬ್ಬ ಸ್ಟಾರ್ ವೇಗಿ ಯಾರು ಗೊತ್ತಾ..?

ಮದುವೆಗೂ ಮುನ್ನ ಮಕ್ಕಳನ್ನ ಪಡೆಯುವುದು ಸದ್ಯ ಸೆಲೆಬ್ರಿಟಿಗಳಲ್ಲಿ ಒಂದು ಟ್ರೆಂಡಾಗುತ್ತಿದೆ. ಈ ಹಿಂದೆ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮದುವೆಗೂ ಮುನ್ನ ತಂದೆಯಾಗಿದ್ದರು. ಈಗ ಈ ಲಿಸ್ಟ್ ಗೆ ಮತ್ತೊಬ್ಬ ಸೆಲೆಬ್ರಿಟಿ ಸೇರಿದ್ದಾರೆ. ಹೌದು ಆಸ್ಟ್ರೇಲಿಯಾ ಹಾಗೂ ಐ.ಪಿ.ಎಲ್ ನಲ್ಲಿ ಕೆ.ಕೆ.ಆರ್ ತಂಡದ ಪರ ಆಡುತ್ತಿರುವ ಸ್ಟಾರ್ ವೇಗಿ ಪ್ಯಾಟ್ ಕಮಿನ್ಸ್ ಈಗ ಮದುವೆಯಾಗುವ ಮುನ್ನ ತಂದೆಯಾಗುತ್ತಿದ್ದಾರೆ.

ಪ್ಯಾಟ್ ಕಮಿನ್ಸ್ ಆರು ವರ್ಷಗಳಿಂದ ಇಂಗ್ಲೆಂಡ್ ನ ಬೆಕೆ ಬೋಸ್ಟನ್ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಕಳೆದ ವರ್ಷ ಮದುವೆಯಾಗುವುದಾಗಿ ಈ ಜೋಡಿ ತಿಳಿಸಿತ್ತು. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಬೇಬಿ ಬಂಪ್ ತೋರಿಸಿ ಅಭಿಮಾನಿಗಳಿಗೆ ಹೊಸ ಸುದ್ದಿ ನೀಡಿದ್ದಾರೆ. ಕೆ‌ಕೆಆರ್ ತಂಡ ಅಧೀಕೃತ ಸೋಶಿಯಲ್ ಮೀಡಿಯಾ ಅಕೌಂಟ್ ನಿಂದ ಈ ಜೋಡಿಗೆ ಶುಭ ಹಾರೈಕೆಯ ವಿಷ್ ಮಾಡಲಾಗಿದ್ದು, ಪ್ರಪಂಚಾದ್ಯಂತ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಪ್ಯಾಟ್ ಕಮಿನ್ಸ್ ಭಾವಿ ಪತ್ನಿ ಬೆಕೆ ಬೋಸ್ಟನ್ ಲಂಡನ್ ನಲ್ಲಿ ಒಂದು ಶಾಪಿಂಗ್ ವೆಬ್ ಸೈಟ್ ನಡೆಸುತ್ತಿದ್ದು ಮಕ್ಕಳ ಆಟಿಕೆ, ಶೂ, ಬಟ್ಟೆ ದೊರೆಯುತ್ತಿದೆ. ಭಾರತದಲ್ಲಿ ನಡೆಯುತ್ತಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೋವಿಡ್ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗಾಗಿ ಪ್ಯಾಟ್ ಕಮಿನ್ಸ್ ಸದ್ಯ ಮಾಲ್ಡೀವ್ಸ್ ನಲ್ಲಿದ್ದಾರೆ.