ಕೊನೆಗೂ ಐಪಿಎಲ್ ಕುರಿತು ಅಧಿಕೃತ ಆದೇಶ ಹೊರಡಿಸಿದ ಗಂಗೂಲಿ, ನಿರ್ಧಾರ ಸರಿ ಇಲ್ಲ ಎಂದ ನೆಟ್ಟಿಗರು

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಐಪಿಎಲ್ ಟೂರ್ನಿಯ ಇದೀಗ ಅರ್ಥಕ್ಕೆ ನಿಂತು ಹೋಗಿದೆ, ಭಾರತದಲ್ಲಿ ಬಹುತೇಕ ಎಲ್ಲ ನಗರಗಳು ಸ್ತಬ್ಧ ವಾಗುತ್ತಿರುವ ಸಂದರ್ಭದಲ್ಲಿ ಮನೆಯಲ್ಲಿ ಕುಳಿತಿರುವ ಜನರಿಗೆ ಯಾವುದೇ ಮನರಂಜನೆ ನೀಡುವ ಕೆಲಸವನ್ನು ಯಾವುದೇ ಕಾರ್ಯಹ ಪರಿಕ್ರಮಗಳು ಮಾಡದಂತಸ್ಥಿತಿ ಎದುರಾಗಿದೆ. ಆದ ಕಾರಣ ಐಪಿಎಲ್ ಮತ್ತೆ ಮುಂದುವರಿಯಬೇಕು ಎಂಬುದು ಅಭಿಮಾನಿಗಳ ವಾದ.

ಆದರೆ ಅದೇ ಸಮಯದಲ್ಲಿ ಆರ್ಸಿಬಿ ಅಭಿಮಾನಿಗಳು ಕೂಡ ಟೂರ್ನಿ ಯನ್ನು ಮುಂದುವರಿಸಿದರೆ ಬಹಳ ಚೆನ್ನಾಗಿರುತ್ತದೆ, ಆರ್ಸಿಬಿ ಈ ಬಾರಿ ಕಪ್ಪು ಗೆಲ್ಲುತ್ತದೆ ಎಂಬ ಭರವಸೆಯನ್ನು ಇಟ್ಟು ಕೊಂಡಿದ್ದಾರೆ. ಆದರೆ ಇದೇ ಸಮಯದಲ್ಲಿ ಈ ಕುರಿತು ಅಧಿಕೃತ ಆದೇಶವನ್ನು ಗಂಗೋಲಿ ರವರು ಹೊರಡಿಸಿ ಬಿಟ್ಟಿದ್ದಾರೆ

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಸೌರವ್ ಗಂಗೂಲಿ ಅವರು ಭಾರತ ದೇಶದಲ್ಲಿ ಐಪಿಎಲ್ ನಡೆಸಲು ಸಾಧ್ಯವೇ ಇಲ್ಲ, ಹಾಗೆಂದು ಇತರ ದೇಶಗಳಲ್ಲಿ ಕೂಡ ಯಾವುದೇ ಸಾಧ್ಯತೆಯೂ ನನಗೆ ಕಾಣುತ್ತಿಲ್ಲ, ಯಾಕೆಂದರೆ ಭಾರತ ತಂಡವು ಮುಂದಿನ ಆರು ತಿಂಗಳು ಯಾವುದೇ ಕಾರಣಕ್ಕೂ ಬಿಡುವು ಮಾಡಿಕೊಳ್ಳಲು ಸಾಧ್ಯವೇ ಇಲ್ಲ, ಈಗಾಗಲೇ ಇಂಗ್ಲೆಂಡ್ ಶ್ರೀಲಂಕಾ ದೇಶಗಳ ಜೊತೆ ಸರಣಿಗಳು ನಿಗದಿಯಾಗಿದೆ, ಇಂತಹ ಸಂದರ್ಭದಲ್ಲಿ ಅಲ್ಲಿ ಹೋಗಿ ಬಂದು ಮತ್ತೆ 14 ದಿನಗಳ ಕಾಲ ಕ್ವಾರಂಟೈನ್ ಮಾಡಿ ಟೂರ್ನಿ ನಡೆಸುವ ಯಾವುದೇ ಸಾಧ್ಯತೆಗಳು ಕಾಣಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ