ಕರೀನಾ ಕಪೂರ್ ಬಳಸುವ ಫೆಸ್ ಮಾಸ್ಕ್ ಬೆಲೆ ಕೇಳಿದರೆ ನೀವು ಒಂದು ಸ್ತಬ್ದವಾಗೊದು ಗ್ಯಾರಂಟೀ ಏಷ್ಟು ಗೊತ್ತ ??

ಸ್ನೇಹಿತರ, ಯಾವುದೇ ಹೊಸ ವಸ್ತು ಅಥವಾ ವಸ್ತ್ರ ಮಾರುಕಟ್ಟೆಗೆ ಬಂದರೆ ಅದಕ್ಕೆ ಹೆಚ್ಚು ಮೌಲ್ಯವನ್ನು ಕೊಟ್ಟು ಖರೀದಿಸುವವರು ಸ್ಟಾರ್ ನಟ ನಟಿಯರು ಮಾತ್ರ. ಹೌದು ಇದೀಗ ಬಾಲಿವುಡ್ ನಟಿಯೊಬ್ಬರು ದುಬಾರಿ ಮಾಸ್ಕ ಧರಿಸಿ ಫೋಟೋಗೆ ಪೋಸ್ ಕೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೊರೋನಾ ಬಂದ ಮೇಲೆ ಎಲ್ಲರ ಮುಖವನ್ನು ಮಾಸ್ಕ್ ಆವರಿಸಿಕೊಂಡಿದ್ದು, ಆರಂಭದಲ್ಲಿ ಎಲ್ಲರೂ ಕೊರೊನಾದಿಂದ ಬಚಾವಾಗಲು ಮಾಸ್ ಧರಿಸುತ್ತಿದ್ದರು. ಹೀಗಾಗಿ ಹತ್ತು ರೂಪಾಯಿಂದ ಒಂದು ಕಾಟನ್ ಮಾಸ್ಕ್ ದುಬಾರಿಯಾಯಿತು.

ನಂತರ ಯಾರು ಹೆಚ್ಚು ಬೆಲೆಯ ಬ್ರಾಂಡೆಡ್ ಕಾಟನ್ ಮಾಸ್ಕ್ ಗಳನ್ನು ಧರಿಸುತ್ತಾರೆ ಎಂಬ ಕಾಂಪಿಟಿಶನ್ ಕೂಡ ಶುರು ಆಯ್ತು. ಈ ಮೂಲಕ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪ್ರತಿಷ್ಠಿತ ದೊಡ್ಡ ದೊಡ್ಡ ಕಂಪನಿಗಳು ಇದೀಗ ಮಾಸ್ಕ್ ತಯಾರಿಸುತ್ತಿದೆ. ಅದರಲ್ಲಿ ಇದೀಗ ಮೊದಲ ಸ್ಥಾನದಲ್ಲಿ ಇರೋದು ಲೂಯಿಸ್ ವುಟ್ಟಾನ್ ಕಂಪನಿಯ ಫೇಸ್ ಮಾಸ್ಕ್. ನೋಡಲು ಸರಳ ಕಪ್ಪುಬಣ್ಣದ ಫೇಸ್ ಮಾಸ್ಕ್ ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚು. ಅಲ್ಲದೆ ಈ ಲೋಗೋ ಇರುವ ಮಾಸ್ಕನ್ನು ಹಾಕಿಕೊಂಡರೆ ಅವರ ಲೆವೆಲ್ಲೇ ಬೇರೆ ಬಿಡಿ. ಅಲ್ಲದೆ ಪ್ರಮುಖವಾಗಿ ಬಾಲಿವುಡ್ ನಲ್ಲಿ ಈ ಕಂಪನಿಯ ಮಾಸ್ಕ್ ಗಳ ಬೆಲೆ ಗಗನಕ್ಕೇರಿದೆ.

ಇನ್ನು ನಟರಾದ ರಣವೀರ್ ಕಪೂರ್, ದೀಪಿಕಾ ಪಡುಕೋಣೆ ಹಾಗೂ ಇನ್ನಿತರ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಎಲ್ ವಿ ಕಂಪನಿಯ ಫೇಸ್ ಮಾಸ್ಕ್ ಬಳಸುತ್ತಾರೆ. ಇದೀಗ ನಟಿ ಕರೀನಾ ಕಪೂರ್ ಕೂಡ ಇದೇ ಕಂಪನಿಯ ಫೇಸ್ ಮಾಸ್ಕ್ ಬಳಸಿ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಕಪ್ಪು ಮಾಸ್ಕ್ ಬೆಲೆ ಸುಮಾರು 250 ರೂಪಾಯಿ ಆಗಿರಬಹುದು ಅಂತ ನೀವು ಊಹಿಸಬಹುದು. ಆದರೆ ಇದರ ಅಸಲಿ ಬೆಲೆಯನ್ನು ಕೇಳಿದರೆ ನೀವು ಒಂದು ಕ್ಷಣ ಶಾಕ್ ಆಗೋದು ಖಂಡಿತ.

ನಟಿಯ ಈ ಮಾಸ್ಕ್ ನ ಬೆಲೆ ಬರೋಬ್ಬರಿ 26 ಸಾವಿರ ರೂಪಾಯಿ. ಲೂಯಿಸ್ ವುಟ್ಟಾನ್ ನಾ ಕಂಪನಿಯ ವೆಬ್ಸೈಟ್ನಲ್ಲಿ ಈ ಮಾಸ್ಕ್ ಬೆಲೆ 255 ಅಮೆರಿಕನ್ ಡಾಲರ್ ಎಂದು ತೋರಿಸುತ್ತದೆ. ಅಂದರೆ ನಮ್ಮ ಭಾರತೀಯ ರೂಪಾಯಿ ಲೆಕ್ಕದಲ್ಲಿ ಅದರ ಬೆಲೆ 26 ಸಾವಿರ ರೂಪಾಯಿ. 40 ವರ್ಷದ ಕರೀನಾ ಕಪೂರ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ದುಬಾರಿ ಬೆಲೆಯ ಮಾಸ್ಕ್ ಧರಿಸಿರುವ ಫೋಟೋ ಶೇರ್ ಮಾಡುವ ಮೂಲಕ ಜನರಿಗೆ ಮಾಸ್ಕ್ ಧರಿಸಿ ಎಂದು ಕೇಳಿಕೊಂಡಿದ್ದಾರೆ.