ರಾಮು ಅವರ ಆಸ್ತಿ ವಿಲ್ ಬಯಲು..! ಸಾಯುವ ಮುಂಚೆ ಆಗಿದ್ದೇನು ನೋಡಿ !!

ಸ್ನೇಹಿತರೆ, ಲಕ್ಷಗಳನ್ನು ಖರ್ಚು ಮಾಡಿ ಸಿನಿಮಾಗಳನ್ನು ನಿರ್ಮಾಣ ಮಾಡಲು ಕೂಡ ಕಷ್ಟಪಡುತ್ತಿದ್ದ ಆ ಕಾಲದಲ್ಲಿ, ಕೋಟಿಗಟ್ಟಲೆ ಹಣ ಸುರಿದು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿ, ಕನ್ನಡ ಚಿತ್ರರಂಗಕ್ಕೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿದ ರಾಮು ಅವರು ಇನ್ನು ನೆನಪು ಮಾತ್ರ. ಕನ್ನಡ ಚಿತ್ರರಂಗದಲ್ಲಿ ಇಂದು ಕೋಟಿಗಳಿಗೆ ಲೆಕ್ಕ ಇಲ್ಲ ಬಿಡಿ, ಆದರೆ ಮೊದಲ ಬಾರಿಗೆ ಸ್ಯಾಂಡಲ್ವುಡ್ನಲ್ಲಿ ಕೋಟಿ ಹಣವನ್ನು ಸುರಿದು ಸಿನಿಮಾ ನಿರ್ಮಾಣ ಮಾಡಿದ್ದು ಮಾತ್ರ ಕೋಟಿ ರಾಮು ಅವರು. ಹಾಗಿದ್ದರೆ ಹೆಸರಲ್ಲೇ ಕೋಟಿ ಇರುವ ರಾಮುರವರ ನಿಜವಾದ ಆಸ್ತಿ ಎಷ್ಟು ತಿಳಿಯಲು ಮುಂದೆ ಓದಿ…

ಹೌದು ಒಂದು ವಾರದಿಂದ ಕೊರೋನಾದಿಂದ ಬಳಲುತ್ತಿದ್ದ ನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ಕೋಟಿ ರಾಮು ಅವರ ಚಿಕಿತ್ಸೆ ಫಲಕಾರಿಯಾಗದೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದರು. ಇನ್ನು ರಾಮು ಮತ್ತು ಮಾಲಾಶ್ರೀ ಅವರ ದಂಪತಿಗೆ ಅನನ್ಯ ಎಂಬ ಮಗಳು ಮತ್ತು ಆರ್ಯನ್ ಎಂಬ ಮಗ ಇದ್ದಾನೆ. ಆರಂಭದಲ್ಲಿ ಹಂಚಿಕೆದಾರರಾಗಿ ಕೆಲಸ ಮಾಡಿದ ರಾಮು ಅವರು ಗೋಲಿಬಾರ್ ಚಿತ್ರದ ಮೂಲಕ ನಿರ್ಮಾಪಕರಾದರು.

ಇನ್ನು ಲಾಕಪ್ ಡೆತ್, ಕಲಾಸಿಪಾಳ್ಯ, ಏಕೆ 47, ರಾಕ್ಷಸ, ಶಿವಾಜಿನಗರ, ಗೂಳಿ, ಕಿಚ್ಚ, ಹಾಲಿವುಡ್, ಚಾಮುಂಡಿ ಸೇರಿದಂತೆ ಇದೀಗ ಪ್ರಜ್ವಲ್ ದೇವರಾಜ್ ಅವರ ಅರ್ಜುನ್ ಗೌಡ ಸಿನಿಮಾವನ್ನು ಕೂಡ ನಿರ್ಮಾಣ ಮಾಡಿದ್ದರು ರಾಮು. ಒಟ್ಟು 37 ಸಿನಿಮಾಗಳನ್ನು ಇವರು ನಿರ್ಮಿಸಿ ಕನ್ನಡದ ಚಿತ್ರರಂಗದ ಓರ್ವ ಯಶಸ್ಸು ನಿರ್ಮಾಪಕರಾಗಿದ್ದರು. ಇವರ ಸಾವಿಗೆ ನಟ-ನಟಿಯರು ಸೇರಿದಂತೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ. ಇನ್ನು ಕೋಟಿ ನಿರ್ಮಾಪಕರಾಗಿದ್ದ ಇವರು ಆಸ್ತಿಯನ್ನು ಕೂಡ ಸಿರಿವಂತರು.

ಹುಟ್ಟು ಶ್ರೀಮಂತರಾಗಿದ್ದ ಕಾರಣದಿಂದ ಅವರು ಚಿತ್ರರಂಗಕ್ಕೆ ಬಂದಿದ್ದರು. ಚಿತ್ರರಂಗದಲ್ಲಿ ಸಾಕಷ್ಟು ಬಿಟ್ ಮತ್ತು ಉತ್ತಮ ಚಿತ್ರವನ್ನು ನೀಡುವ ಮೂಲಕ ಯಶಸ್ವಿ ಮತ್ತು ಬುದ್ಧಿವಂತ ನಿರ್ಮಾಪಕ ಎನಿಸಿಕೊಂಡಿದ್ದರು. ಇನ್ನು ಬೆಂಗಳೂರಿನಲ್ಲಿ ಮನೆ ಮತ್ತು ಹುಟ್ಟೂರಿನಲ್ಲಿ ಆಸ್ತಿ ಮನೆ ಸೇರಿದಂತೆ ಸುಮಾರು 150 ಕೋಟಿ ಯಿಂದ 200 ಕೋಟಿಯ ಒಡೆಯ ರಾಮು ಅವರಾಗಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಆಸ್ತಿಗಳು ಇದೀಗ ಮಕ್ಕಳು ಹಾಗೂ ಪತ್ನಿ ಮಾಲಾಶ್ರೀ ಅವರಿಗೆ ಸೇರಲಿದೆ. ಇನ್ನು ಕನ್ನಡ ಚಿತ್ರರಂಗಕ್ಕೆ ಇಂತಹ ದೊಡ್ಡ ಮಾರುಕಟ್ಟೆಯ ತಂದುಕೊಟ್ಟ ರಾಮು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ.