ಕ್ರಿಸ್ ಗೇಲ್ ಆರ್ಸಿಬಿ ಬಿಡಲು ಅಸಲಿ ಕಾರಣ ಏನು ಗೊತ್ತಾ..?

ಸ್ನೇಹಿತರೆ, ಕ್ರಿಕೆಟ್ ಸಾವಿರ ಸಿಕ್ಸರುಗಳ ಸರದಾರ, ಚುಟುಕು ಕ್ರಿಕೆಟಿನ ಯೂನಿವರ್ಸಲ್ ಬಾಸ್ ಗೇಲ್ ಫೀಲ್ಡಿಗೆ ಎಂಟ್ರಿ ಕೊಟ್ರೆ ಎದುರಾಳಿಗಳ ಎದೆಯಲ್ಲಿ ನಡುಕ ಉಂಟಾಗುವುದು ಗ್ಯಾರಂಟಿ. ಹೀಗಾಗಿಯೇ ಈ ದೈತ್ಯನ ಮುಂದೆ ಬೌಲಿಂಗ್ ಮಾಡಲು ದೇಶದ ಪ್ರಮುಖ ಬೌಲರ್ಗಳು ಹೆಣಗಾಡುತ್ತಾರೆ. ಅಲ್ಲದೆ ಇತ್ತ ಎದುರಾಳಿ ತಂಡದ ಅಭಿಮಾನಿಗಳು ಕೂಡ ಗೇಲ್ ಸಿಕ್ಸರ್ ಗಳನ್ನು ಬಾರಿಸುವುದನ್ನು ಕಾಯುತ್ತಿರುತ್ತಾರೆ. ಇಂತಹ ಕ್ರಿಸ್ ಗೇಲ್ ಸದ್ಯ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಇದಕ್ಕೂ ಮುನ್ನ ಗೇಲ್ ಆರ್ಸಿಬಿ ತಂಡದಲ್ಲಿದ್ದರು.

ಅಲ್ಲದೆ ಕೊಹ್ಲಿ ಮತ್ತು ಎಬಿಡಿ ರವರನ್ನು ಬಿಟ್ಟರೆ ಈಗಲೂ ಆರ್ಸಿಬಿ ಅಭಿಮಾನಿಗಳಿಗೆ ಕ್ರಿಸ್ ಗೇಲ್ ಎಂದರೆ ಅಚ್ಚುಮೆಚ್ಚು. 2011ರಲ್ಲಿ ಆರ್ಸಿಬಿ ಗೆ ಎಂಟ್ರಿಕೊಟ್ಟ ಗೇಲ್ ಖರೀದಿ ಆಗಿದ್ದು ಎರಡು ಕೋಟಿಗೆ. ನಂತರ ಏಳು ವರ್ಷಗಳ ಕಾಲ ಕ್ರಿಸ್ ಗೇಲ್ ಆರ್ಸಿಬಿ ಪರ ಬ್ಯಾಟ್ ಬೀಸಿದರು. ಈ ನಡುವೆ 2016ರಲ್ಲಿ ಮತ್ತೊಮ್ಮೆ ಆರ್ಸಿಬಿ ತಂಡವನ್ನು ಫೈನಲ್ಗೆ ತಲುಪಿಸುವಲ್ಲಿ ಗೇಲ್ ಮತ್ತು ಕೊಹ್ಲಿ ಜೋಡಿ ಯಶಸ್ವಿಯಾಯಿತು. ಇನ್ನು 2016 ಮೇ 29 ದಿನಾಂಕವನ್ನು ಯಾರು ಮರೆತರು ಆರ್ಸಿಬಿ ಅಭಿಮಾನಿಗಳು ಮಾತ್ರ ಮರಿಯಕ್ಕೆ ಸಾಧ್ಯವಿಲ್ಲ.

ಏಕೆಂದರೆ ಅಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಚೊಚ್ಚಲ ಬಾರಿ ಕಪ್ ಗೆದ್ದ ಬಿಟ್ಟಿತ್ತು ಅನ್ನೋ ಖುಷಿಯಲ್ಲಿದ್ದರು ಅಭಿಮಾನಿಗಳು. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ತಂಡಕ್ಕೆ ಸ್ಫೋಟಕ ಆರಂಭವನ್ನು ಒದಗಿಸಿದರು. ನಂತರ ನಿಗದಿತ 20 ಓವರ್ ಗಳಲ್ಲಿ ಹೈದರಾಬಾದ್ ತಂಡ 208 ರನ್ ಗಳಿಸಿತು. ಈ ಬೃಹತ್ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡಕ್ಕೆ ಕೊಹ್ಲಿ ಮತ್ತು ಗೇಲ್ ಜೋಡಿ ನೆರವಾಯಿತು. ಈ ನಡುವೆ 38 ಎಸೆತಗಳಲ್ಲಿ 76 ರನ್ ಬಾರಿಸಿದ ಗೇಲ್ ವಿಕೆಟ್ ಒಪ್ಪಿಸಿ ಹೊರನಡೆದರು.

ನಂತರ ಕೊಹ್ಲಿ ಕೂಡ ವಿಕೆಟ್ ಕೈಚೆಲ್ಲಿದರು. ನಂತರ ಬಂದ ಎಬಿಡಿ ಹಾಗೂ ರಾಹುಲ್ ಎಲ್ಲರೂ ಸಹ ವಿಕೆಟ್ ಕಳೆದುಕೊಂಡು ಹೊರನಡೆದರು. ಇನ್ನು ಕೊನೆಯ ಓವರಿನಲ್ಲಿ ಗೆಲ್ಲೋದಕ್ಕೆ 18 ರನ್ ಗಳ ಅವಶ್ಯಕತೆ ಇತ್ತು. ಇನ್ನು ಭುವನೇಶ್ವರ್ ಕುಮಾರ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಸನ್ರೈಸರ್ಸ್ ತಂಡ 8 ರನ್ಗಳಿಂದ ವಿಜಯ ಸಾಧಿಸಿತು. ಇದರ ಬಳಿಕ ಕ್ರಿಸ್ ಗೇಲ್ ಆರ್ಸಿಬಿ ಪರ ಆಡಿದ್ದು ಕೇವಲ ಒಂದು ವರ್ಷ ಮಾತ್ರ. ಆದರೆ ಇಂತಹ ಬ್ಯಾಟ್ಸ್ ನನ್ನನ್ನು ಆರ್ಸಿಬಿ ಫ್ರಾಂಚೈಸಿ ಏಕೆ ಬಿಟ್ಟುಕೊಡು ಎಂಬ ಪ್ರಶ್ನೆ ಸಾಮಾನ್ಯವಾಗಿ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಹೌದು 2017 ಐಪಿಎಲ್ ಹರಾಜಿನಲ್ಲಿ ಮೂರು ಆಟಗಾರರನ್ನು ಬಿಟ್ಟು ಮಿಕ್ಕೆಲ್ಲಾ ಆಟಗಾರರನ್ನು ಬಿಡುಗಡೆ ಮಾಡಬೇಕಾಗಿತ್ತು. ಈ ವೇಳೆ ಆರ್ಸಿಬಿ ಉಳಿಸಿಕೊಂಡಿದ್ದು ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ರನ್ನು. ನಂತರ 2018ರಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್ ಗೇಲ್ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ಹಲವಾರು ಫಿಟ್ನೆಸ್ ಸಮಸ್ಯೆಯಿಂದ ಕೂಡ ಬಳಲುತಿದ್ದರು. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಿತು. ಅದರೊಂದಿಗೆ ಆರ್ಸಿಬಿ ಮತ್ತು ಗೇಲ್ ನಡುವಿನ ಯುಗ ಅಂತ್ಯವಾಯಿತು…