ಹೊಸ ದಾಖಲೆ ಬರೆದ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ..ಆ ದಾಖಲೆ ಯಾವುದು ಗೊತ್ತಾ..?

ನಮಸ್ಕಾರ ಸ್ನೇಹಿತರೇ ರಾಜ್ಯಪಾಲ ಹುದ್ದೆ ಅತ್ಯಂತ ಮಹತ್ವದ ಹುದ್ದೆಯಾಗಿದೆ. ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವಲ್ಲಿ ರಾಜ್ಯಪಾಲರ ಪಾತ್ರ ಅತಿ ಮಹತ್ವದ್ದು. ಪ್ರತಿ ರಾಜ್ಯದಲ್ಲಿಯೂ ರಾಜ್ಯಪಾಲರು, ಆ ರಾಜ್ಯದ ಮೊದಲ ಪ್ರಜೆಯಾಗಿರುತ್ತಾರೆ. ಕರ್ನಾಟಕದ ರಾಜ್ಯಪಾಲ ವಜುಭಾಯಿವಾಲಾ ಗುಜರಾತಿನವರು. ಈ ಹಿಂದೆ ಗುಜರಾತ್ ರಾಜ್ಯದ ಹಣಕಾಸು ಸಚಿವರಾಗಿ ಹಾಗೂ ಗುಜರಾತ್ ವಿಧಾನಸಭೆಯ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದರು.

ನರೇಂದ್ರ ಮೋದಿ ಮೊದಲ ಭಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಅವರಿಗಾಗಿ ತಮ್ಮ ಕ್ಷೇತ್ರ ರಾಜ್ ಕೋಟ್ ನ್ನು ಬಿಟ್ಟುಕೊಟ್ಟಿದ್ದರು. ಈಗ ರಾಜ್ಯಪಾಲ ವಜುಭಾಯಿವಾಲಾ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ರಾಜ್ಯಪಾಲ ಹುದ್ದೆಯ ಅವಧಿ 5 ವರ್ಷದಾಗಿರುತ್ತದೆ. ಕೆಲವೊಮ್ಮೆ ಆ ಅವಧಿಯನ್ನ ವಿಸ್ತರಿಸಲಾಗುತ್ತದೆ. ಕರ್ನಾಟಕದ ಮಟ್ಟಿಗೆ ಅತಿ ಹೆಚ್ಚು ದಿನ ರಾಜ್ಯಪಾಲರಾಗಿದ್ದವರು ಖುರ್ಷಿದ್ ಅಲಂ ಖಾನ್. ಅವರು ಬರೋಬ್ಬರಿ 7 ವರ್ಷ 330 ದಿನಗಳ ಕಾಲ ಕರ್ನಾಟಕದ ರಾಜ್ಯಪಾಲರಾಗಿದ್ದರು.

ಆ ನಂತರ ಎರಡನೇ ಸ್ಥಾನದಲ್ಲಿದ್ದದ್ದು , ಕರ್ನಾಟಕದ ಮೊದಲ ರಾಜ್ಯಪಾಲರಾಗಿದ್ದ ಜಯಚಾಮರಾಜೇಂದ್ರ ಓಡೆಯರ್ ಅವರು. ಅವರು 6 ವರ್ಷ 184 ದಿನ ರಾಜ್ಯಪಾಲರಾಗಿದ್ದರು. ಈಗ ವಜುಭಾಯಿವಾಲ ಆ ದಾಖಲೆಯನ್ನು ಮುರಿದು, ಎರಡನೇ ಅತಿ ಹೆಚ್ಚು ರಾಜ್ಯಪಾಲರಾಗಿರುವ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಇದೇ ಸೆಪ್ಟೆಂಬರ್ 1 ನೇ ತಾರೀಖಿಗೆ ಕರ್ನಾಟಕದ ರಾಜ್ಯಪಾಲರಾಗಿ 7 ವರ್ಷವನ್ನ ಪೂರೈಸಲಿದ್ದಾರೆ. ಹೊಸ ರಾಜ್ಯಪಾಲರನ್ನು ಕರ್ನಾಟಕದ ಜನತೆ ಆದಷ್ಟು ಬೇಗ ಎದುರುನೋಡುವ ಸಂಭಭವವೂ ಜಾಸ್ತಿಯಾಗಿದೆ.