ಅಗರಬತ್ತಿ ಮಾರುತ್ತಿದ್ದ ಹುಡುಗ ಇಂದು ಕೋಟಿಗಳ ಒಡೆಯ, ಉಪೇಂದ್ರ ಜೀವನದ ಕಣ್ಣೀರಿನ ಕಥೆ, ನೋಡಿ ಒಮ್ಮೆ ನಿಜಕ್ಕೂ ಸ್ಪೂರ್ತಿದಾಯಕ !!

ಸ್ನೇಹಿತರೆ, ಈತ ದೊಡ್ಡ ಸ್ಟಾರ್ ಮೇಕರ್, ಹಸಿವು ಬಡತನದಲ್ಲಿ ಅರಳಿದ ಹೂವು ಉಳಿಯೇಟು ತಿಂದ ಶಿಲೆ ಅದ್ಭುತ ಕಲಾಕೃತಿಯಾಗುತ್ತೆ ಹಾಗೆಯೇ ಜೀವನದ ಕಹಿ ಅನುಭವಗಳನ್ನು ವೃತ್ತಿಯಾಗಿಸಿಕೊಂಡು ಸಾಧನೆಯ ಶಿಖರವನ್ನೇರಿದ ಒಬ್ಬ ಸಾಮಾನ್ಯ ಅಡುಗೆ ಭಟ್ಟರ ಮಗ ಇಡೀ ಕರ್ನಾಟಕಕ್ಕೆ ರುಚಿರುಚಿಯಾದ ಸಿನಿಮಾವನ್ನು ಉಣಬಡಿಸಿದವರು. ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಕಷ್ಟ ಪಡುತ್ತಿದ್ದ ಇವರು ಇವತ್ತು ಕರ್ನಾಟಕದ ಬುದ್ಧಿವಂತ ಸಾಮಾನ್ಯರಿಗೆ ಇವರನ್ನು ಅರ್ಥಮಾಡಿಕೊಳ್ಳಲು ಕಷ್ಟವಾದರೂ ಅರ್ಥ ಆದವರಿಗೆ ಇವರ ಶಕ್ತಿ ಏನು ಎಂಬುದು ಚೆನ್ನಾಗಿಯೇ ಗೊತ್ತಿರುತ್ತದೆ.

ಆತ ಬೇರೆ ಯಾರು ಅಲ್ಲ ರಿಯಲ್ ಸ್ಟಾರ್ ಉಪೇಂದ್ರ. ಉಪೇಂದ್ರ ಬೆಳೆದು ಬಂದಂತಹ ಕಣ್ಣೀರಿನ ಕಥೆಗಳು ಯಾವುವು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಉಪೇಂದ್ರ ಎಂಬ ಹೆಸರಿನಲ್ಲೇ ಒಂದು ಶಕ್ತಿ ಇದೆ ಉಪೇಂದ್ರ ಎಂದ ತಕ್ಷಣವೇ ಇಡೀ ದೇಶವೇ ಚಂದನವನದತ್ತ ತಿರುಗಿ ನೋಡುತ್ತದೆ. ಕೇವಲ ಭಾರತೀಯ ಚಿತ್ರರಂಗ ಮಾತ್ರವಲ್ಲ, ಹಾಲಿವುಡ್ಡಲ್ಲೂ ಕೂಡ ಹೆಸರುಮಾಡಿದ ಸ್ಟಾರ್ ಡೈರೆಕ್ಟರ್ ಇವರು. ತನ್ನ ಬುದ್ಧಿವಂತಿಕೆ ಡಿಫರೆಂಟ್ ಐಡಿಯಾಗಳಿಂದಲೇ ಜನರ ಪ್ರೀತಿಗಳಿಸಿದವರು ಇಂಗ್ಲಿಷ್ನ ಎ ಅಕ್ಷರದಿಂದ ಆರಂಭವಾದ ಇವರ ಪಯಣ ಇಂದು ಬೇರೆಂದು ಲೆವೆಲ್ಗೆ ಬಂದು ನಿಂತಿದೆ.

ಇಂದು ಸೂಪರ್ ಆಗಿರುವ ಉಪೇಂದ್ರರವರ ಜೀವನ ಹಿಂದೊಂದು ಕಾಲದಲ್ಲಿ ರಕ್ತ ಕಣ್ಣೀರಿನಿಂದ ಹೊಳೆಯುತ್ತಿತ್ತು. ಕಷ್ಟಗಳ ಸುರಿಮಳೆಯನ್ನು ಗೊತ್ತಿದ್ದ ಉಪೇಂದ್ರನಿಗೂ, ಇಂದಿನ ಉಪೇಂದ್ರನಿಗೂ ಅಜಗಜಾಂತರ ವ್ಯತ್ಯಾಸವಿದೆ. ಉಪೇಂದ್ರ ಬಡ ಕುಟುಂಬದವರಾದ್ದರಿಂದ ಸಾಲು-ಸಾಲು ಸಂಕಷ್ಟಗಳು ಅವರ ಎದುರಿಗೆ ಬಂದು ನಿಲ್ಲುತ್ತದೆ. ಆದರೆ ಉಪೇಂದ್ರ ಅದಕ್ಕೆಲ್ಲ ಎದೆಗುಂದದೆ ಎದುರಿಸಿ ನಿಲ್ಲುತ್ತಾರೆ. ತಂದೆ ತಾಯಿಗೆ ಯಾವ ತೊಂದರೆಯಾಗದಂತೆ ಪೇಪರ್ ಕವರನ್ನು, ಅಗರ್ಬತ್ತಿಗಳನ್ನು ಮಾರುವ ಮೂಲಕ ತಂದೆ-ತಾಯಿಗೆ ಕಷ್ಟ ನೀಡದಂತೆ ತಮ್ಮ ಖರ್ಚುಗಳನ್ನು ಚಿಕ್ಕವಯಸ್ಸಿನಲ್ಲಿಯೇ ತಾವೇ ನೋಡಿಕೊಳ್ಳುತ್ತಿದ್ದರು.

ಇಂತಹ ಹಲವಾರು ಕಷ್ಟಗಳನ್ನು ಮೆಟ್ಟಿನಿಂತು ಉಪೇಂದ್ರ ಈಗ ದೊಡ್ಡ ಸ್ಟಾರ್ ಡೈರೆಕ್ಟಾಗಿ, ನಟನಾಗಿ ಬೆಳೆದು ನಿಂತಿದ್ದಾರೆ. ಅಷ್ಟೇ ಅಲ್ಲದೆ ಈ ಕೋವಿಡ್ ಸಮಯದಲ್ಲಂತೂ ತಾವು ನಡೆದುಬಂದ ಕಷ್ಟದ ದಿನಗಳನ್ನು ನೆನೆದು ನಟ ಉಪೇಂದ್ರ ಅನೇಕ ಜನರ ಸಹಾಯಕ್ಕೆ ನಿಂತಿರುವುದು ಅವರ ದೊಡ್ಡ ಗುಣ ಎಂದೇ ಹೇಳಬಹುದು. ನಟ ಉಪೇಂದ್ರ ಅವರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…