ಇತ್ತೀಚಿಗೆ ಬಂದವರಲ್ಲಿ ಸ್ಯಾಂಡಲ್ ವುಡ್ ನ ಈ ಯುವ ನಟನ ಆಕ್ಟಿಂಗ್ ಸುಧಾ ಮೂರ್ತಿಯವರಿಗೆ ಬಹಳ ಇಷ್ಟವಂತೆ !!

ಸ್ನೇಹಿತರೆ, ಇನ್ಫೋಸಿಸ್ ಫೌಂಡೇಶನ್ ಮೂಲಕ ಸಂಕಷ್ಟದ ಕಾಲದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡಿದಂತಹ ಸುಧಾಮೂರ್ತಿ ಅಮ್ಮನವರ ಸರಳತೆ ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿತ್ತು. ಡಾಲರ್ ಸೊಸೆ, ಋಣ, ಗುಟ್ಟೊಂದು ಹೇಳುವೆ, ತುಮುಲ, ದಿ ಮದರ್ ಐ ನೆವರ್ ನ್ಯೂ, ಮಹಾಶ್ವೇತಗಳಂತಹ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ಬರೆದಿರುವ ಸುಧಾ ಮೂರ್ತಿಯವರಿಗೆ ಸಿನಿಮಾಗಳ ಬಗ್ಗೆ ಕೂಡ ಆಸಕ್ತಿ ಇದೆ ಅಂತೆ.

ಹೌದು ಅದರಲ್ಲೂ ಕನ್ನಡ ಸಿನಿಮಾಗಳೆಂದರೆ ಸುಧಾ ಮೂರ್ತಿ ಅವರಿಗೆ ಎಲ್ಲಿಲ್ಲದ ಪ್ರೀತಿ ಅಭಿಮಾನ. ಈ ವಿಚಾರವನ್ನು ಸ್ವತಹ ಸುಧಾಮೂರ್ತಿಯವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕೆಲವು ನಟ-ನಟಿಯರನ್ನು ಖುದ್ದಾಗಿ ಭೇಟಿ ಮಾಡಿ ಅವರಿಗೆ ಕಾಂಪ್ಲಿಮೆಂಟ್ಸ್ ಕೂಡಾ ನೀಡಿದ್ದಾರಂತೆ. ಹೌದು ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಸುಧಾಮೂರ್ತಿಯವರು ನಾನು ಇತರ ಭಾಷೆ ಸಿನಿಮಾಗಳಿಗಿಂತ ಕನ್ನಡ ಸಿನಿಮಾಗಳನ್ನು ಹೆಚ್ಚು ನೋಡುತ್ತೇನೆ.

ಯೋಗರಾಜ್ ಭಟ್ ಅವರ ದನಕಾಯೋನು ಸಿನಿಮಾವನ್ನು ನಾನು ನೋಡಿದ್ದೇನೆ, ಚಿತ್ರಕಥೆ ಹಾಕುವ ಸಂದೇಶ ನನಗೆ ಬಹಳ ಹಿಡಿಸಿತು. ಪ್ರಕಾಶ್ ರಾಜ್ ಅವರ ಅಭಿನಯದ ಇದೊಳ್ಳೆ ರಾಮಾಯಣ ಕೂಡ ನೋಡಿದ್ದೇನೆ, ಅದೊಂದು ಅದ್ಭುತವಾದ ಸಿನಿಮಾ ಮತ್ತು ಅವರ ಒಗ್ಗರಣೆ ಡಬ್ಬಿ, ನಾನು ನನ್ನ ಕನಸು ಸಿನಿಮಾಗಳು ಬಹಳ ಚೆನ್ನಾಗಿದೆ. ಇತ್ತೀಚಿಗಷ್ಟೇ ಆಗಮಿಸಿರುವ ಯುವ ನಟರಲ್ಲಿ ನನಗೆ ವೈಯಕ್ತಿಕವಾಗಿ ರಕ್ಷಿತ್ ಶೆಟ್ಟಿ ಎಂದರೆ ಬಹಳ ಇಷ್ಟ.

ಅವರ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರವನ್ನು ಕೂಡ ನೋಡಿದ್ದೇನೆ ಚಿತ್ರಕತೆ ಹಾಗೂ ಸಂಭಾಷಣೆ ನನಗೆ ಬಹಳ ಹಿಡಿಸಿದೆ. ಸಾಹಿತ್ಯ-ಸಂಗೀತ ಕೂಡ ಅದ್ಭುತವಾಗಿದೆ ಎಂದು ಸುಧಾಮೂರ್ತಿ ರಕ್ಷಿತ್ ಶೆಟ್ಟಿ ಅವರನ್ನು ಹಾಡಿ ಹೊಗಳಿದ್ದರು. ಅಷ್ಟೇ ಅಲ್ಲದೆ ತಿಥಿ ಸಿನಿಮಾ ಹಾಗೂ ಆ ಚಿತ್ರದ ಸೆಂಚುರಿಗೌಡ ಪಾತ್ರವನ್ನು ನಾನು ಬಹಳ ಎಂಜಾಯ್ ಮಾಡಿದ್ದೇನೆ ಎಂದು ಹೇಳುತ್ತಾ ನಾನು ಮನೆಯಲ್ಲಿ ಕುಳಿತು ಸಿನಿಮಾ ನೋಡಲು ಇಷ್ಟಪಡುವುದಿಲ್ಲ.

ಬದಲಿಗೆ ಥೇಟರಿಗೆ ಹೋಗಿ ಸಿನಿಮಾ ನೋಡಲು ಇಷ್ಟಪಡುತ್ತೇನೆ ಮನೆಯಲ್ಲಿ ಆಸಕ್ತಿಯಿಂದ ಸಿನಿಮಾ ನೋಡುವಾಗ ಯಾರಾದರೂ ನನಗೆ ತೊಂದರೆ ನೀಡಬಹುದು. ಥೇಟರ್ನಲ್ಲಿ ಯಾರೂ ಡಿಸ್ಟರ್ಬ್ ಮಾಡುವುದಿಲ್ಲ ಪ್ರತಿದಿನ ಪುಸ್ತಕಗಳನ್ನು ಹೇಗೆ ಓದಬೇಕು ಎನಿಸುತ್ತದೆಯೋ ಹಾಗೆ ಸಿನಿಮಾ ನೋಡುವ ಆಸಕ್ತಿ ಇದೆ ಎಂದು ಸುಧಾಮೂರ್ತಿ ಅಮ್ಮನವರು ತಮ್ಮ ಸಿನಿಮಾಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು…