ಒಂದೇ ಮಾರ್ಗದಲ್ಲಿ ನಡೆಯಲು ಮುಂದಾದ ಜೋಡೆತ್ತು, ಡೆಡ್ಲಿ ಕಾಂಬಿನೇಷನ್ ನಲ್ಲಿ ರೆಡಿ ಆಗ್ತಾ ಎದೆ ಪ್ಯಾನ್ ಇಂಡಿಯಾ ಸಿನಿಮಾ !!

ಸ್ನೇಹಿತರೆ, ಕೆಜಿಎಫ್ ಚಾಪ್ಟರ್ ಟು ಚಿತ್ರದ ಬಿಡುಗಡೆಗಾಗಿ ಕಾದುಕುಳಿತಿರುವ ನಟ ರಾಕಿಂಗ್ ಸ್ಟಾರ್ ಯಶ್. ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಕೆಜಿಎಫ್ ಸಿನಿಮಾ ರಿಲೀಸ್ ಆದ ಬಳಿಕವೇ ಹೊಸ ಸಿನಿಮಾದ ಕುರಿತು ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ ರಾಕಿ ಬಾಯ್. ಈ ನಡುವೆ ಮಫ್ತಿ ನಿರ್ದೇಶಕ ನರ್ತನ್ ನಟ ಯಶ್ಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಹಳದಿನಗಳಿಂದಲೂ ಚರ್ಚೆಯಲ್ಲಿದೆ. ಈ ಹಿಂದೆ ನರ್ತನ್ ರಾಕಿ ಬಾಯ್ಗಾಗಿ ಕಥೆ ಮಾಡುತ್ತಿರುವೆ ಎಂದು ಹೇಳಿಕೊಂಡಿದ್ದರು. ಹಾಗಾಗಿ ರಾಕಿಂಗ್ ಸ್ಟಾರ್ ಯಶ್ನ ಮುಂದಿನ ಸಿನಿಮಾದ ತಯಾರಿ ಸದ್ದಿಲ್ಲದೆ ನಡೆಯುತ್ತಿದೆ.

ಕೆಜಿಎಫ್ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಮುಂದಿನ ಪ್ರಾಜೆಕ್ಟ್ ಬಗ್ಗೆ ಅಧಿಕೃತವಾಗಿ ತಿಳಿಯಬಹುದು ಎಂದು ಹೇಳಿದ್ದಾರೆ. ಆದರೆ ಈಗ ಯಶ್ ಮತ್ತು ನರ್ತನ ಪ್ರಾಜೆಕ್ಟ್ ಬಗ್ಗೆ ತ್ರಿಲ್ಲಿಂಗ್ ಸುದ್ದಿ ಒಂದು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ. ಈ ಸುದ್ದಿ ತಿಳಿದ ಸಿನಿಮಾ ಮಂದಿ ಜೋಡೆತ್ತುಗಳು ಒಂದೇ ದಾರಿಯಲ್ಲಿ ಹೋಗುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಬಹಿರಂಗವಾಗಿರುವ ಸುದ್ದಿಯಾದರು ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕೆಜಿಎಫ್ ನಂತರದ ಸಿನಿಮಾಗಳಲ್ಲಿ ಯಾವ ರೀತಿ ಪಾತ್ರ ಮಾಡುತ್ತಾರೆ ಎನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಕಂಡ ಬಳಿಕ ಮತ್ತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು ಯಶ್ಗಾಗಿ ನರ್ತನ್ ಅವರು ಪ್ಯಾನ್ ಇಂಡಿಯಾ ಮಟ್ಟದ ಕಥೆಯೊಂದನ್ನು ಹುಡುಕಿದ್ದರಂತೆ ಅಲ್ಲದೆ ಆ ಕಥೆ ಪಕ್ಕ ಪ್ಯಾನ್ ಇಂಡಿಯಾ ವೀಕ್ಷಕರ ಮನಸ್ಸು ಗೆಲ್ಲುವ ಎಲ್ಲ ನಿರೀಕ್ಷೆಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ ನರ್ತನ ಹಾಗೂ ಯಶ್ ಜೋಡಿಯಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ನೌಕಾಪಡೆ ಪಾತ್ರದಲ್ಲಿ ನಟಿಸಲಿದ್ದಾರೆ.

ಯಶ್ ಪಾಲಿಗೆ ಬಹಳ ವಿಶೇಷವಾದ ಪಾತ್ರವಾಗಿರಲಿದೆ ಎಂದು ಕೆಜಿಎಫ್ ಸಿನಿಮಾದ ತರಹ ನಿರೀಕ್ಷೆಯನ್ನು ಹುಟ್ಟಿಸುವಲ್ಲಿ ಯಾವುದೇ ಅನುಮಾನವಿಲ್ಲ. ಸಿನಿಮಾದಲ್ಲಿ ಯಶ್ ನೇವಿ ಆಫೀಸರ್ ಆಗಿದ್ದ, ಬಹಳ ಕೋಪಿಷ್ಟ ವ್ಯಕ್ತಿ ಆಗಿರುತ್ತಾರೆ ಎಂಬ ಸುದ್ದಿ ಹೊರಬಿದ್ದಿದೆ. ನಟ ಯಶ್ ಕೋಪಿಸ್ಟ ಅಧಿಕಾರಿಯಾಗಿದ್ದಾರೆ ಹೇಗಿರುತ್ತಾರೆ ಎನ್ನುವುದರ ಕುರಿತು ಸ್ಕ್ರಿಪ್ಟ್ ಮಾಡಲಾಗುತ್ತಿದೆ ಎನ್ನುವ ವಿಷಯ ತಿಳಿದು ಬರುತ್ತಿದೆ. ಅಂದಹಾಗೆ ಈ ವಿಷಯದಲ್ಲಿ ನಟ ಯಶ್ ಮತ್ತು ದರ್ಶನ್ ಒಂದೇ ಮಾರ್ಗದಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಹೌದು ರಾಕ್ ಲೈನ್ ವೆಂಕಟೇಶ್ ಸಿನಿಮಾದಲ್ಲಿ ದರ್ಶನ್ ಕೂಡ ನೇವಿ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗ ಯಶ್ ಸಹ ನೇವಿ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದು, ಜೋಡೆತ್ತುಗಳ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ದೊಡ್ಡಮಟ್ಟದ ಕುತೂಹಲ ಮೂಡಿಬರುತ್ತಿದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…