ಜೂನ್ 21ರಿಂದ ಬಿಗ್ ಬಾಸ್ ಮತ್ತೆ ಆರಂಭ, ಇರುವ ಸ್ಪರ್ಧಿಗಳ ಜೊತೆ ಇಬ್ಬರು ಹೊಸಬರ ಸೇರ್ಪಡೆ ಯಾರು ನೋಡಿ !!

ಸ್ನೇಹಿತರೆ, ಬಿಗ್ ಬಾಸ್ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಒಂದು ಸಿಕ್ಕಿದೆ ಅಂತಾನೆ ಹೇಳಬಹುದು. ಹೌದು ಇದೀಗ ಕಲರ್ಸ್ ವಾಹಿನಿ ಅಧಿಕೃತವಾಗಿ ಬಿಡುಗಡೆ ಮಾಡಿರುವ ಪ್ರಕಾರ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮತ್ತೆ ಆರಂಭವಾಗಲಿದೆ. ಅಲ್ಲದೆ ಮೂಲಗಳ ಪ್ರಕಾರ ಜೂನ್ 21ರಂದು ಬಿಗ್ ಬಾಸ್ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಇನ್ನು ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ರದ್ದಾಗಿರುವುದರಿಂದ ಸಾಕಷ್ಟು ಅಭಿಮಾನಿಗಳು ಬೇಸರಗೊಂಡಿದ್ದರು, ಅಲ್ಲದೆ ತಮ್ಮತಮ್ಮ ಫೇವರೆಟ್ ಕಂಟೆಸ್ಟೆಂಟ್ ಗಳನ್ನು ಟಿವಿಯಲ್ಲಿ ಮತ್ತೆ ನೋಡೋಕಾಗಲ್ಲ ಎಂದು ಚಿಂತಿಸುತ್ತಿದ್ದರು.

ಆದರೆ ಕೋರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಪರಿಣಾಮ ರಾಜ್ಯದಲ್ಲಿ ಲಾಕ್ಡೌನ್ ಮತ್ತು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿತ್ತು, ಹೀಗಾಗಿ ಬಿಗ್ ಬಾಸ್ ಅರ್ಧಕ್ಕೆ ರದ್ದಾಗಿತ್ತು. ಆದರೆ ಇದೀಗ ಕೋರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಪುನಹ ಕಾರ್ಯಕ್ರಮವನ್ನು ಆರಂಭಿಸುತ್ತಿರುವ ಬಗ್ಗೆ ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ 72 ದಿನಗಳನ್ನು ಪೂರ್ಣಗೊಳಿಸಿದ್ದು, ಇನ್ನು ಇನ್ನು 28 ದಿನಗಳು ಮಾತ್ರ ಬಾಕಿ ಇದೆ, ಅದು ಕೂಡ 100ದಿನಗಳು ಪೂರೈಕೆ ಆಗೋದಕ್ಕೆ, ಆದರೆ ಸದ್ಯಕ್ಕೆ ಬೇರೆ ಯಾವುದೇ ಮನರಂಜನೆ ಕಾರ್ಯಕ್ರಮಗಳು ಕಲರ್ಸ್ ಕನ್ನಡದಲ್ಲಿ ಇಲ್ಲದಿರುವ ಕಾರಣ ಬಿಗ್ ಬಾಸ್ ಕಾರ್ಯಕ್ರಮವನ್ನು 40 ದಿನಗಳವರೆಗೆ ನಡೆಸಲು ಯೋಜಿಸಲಾಗಿದೆ.

ಇನ್ನು ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಏನಪ್ಪಾ ಅಂದರೆ ಸೀಸನ್ ರದ್ದು ಆಗುವ ಮುನ್ನ ಮನೆಯಲ್ಲಿ 12 ಸ್ಪರ್ಧಿಗಳು ಉಳಿದುಕೊಂಡಿದ್ದರು. ಇನ್ನೂ 12 ಮಂದಿಯ ಜೊತೆಗೆ ಇನ್ನೂ ಇಬ್ಬರು ಸ್ಪರ್ಧಿಗಳು ಕೂಡ ಸೇರಿಕೊಳ್ಳಲಿದ್ದಾರೆ. ಹೌದು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಇಬ್ಬರೂ ಹೊಸ ಸ್ಪರ್ಧಿಗಳಿಗೆ ಅವಕಾಶ ನೀಡಲು ರೂಪಿಸಲಾಗುತ್ತಿದೆ. ಇನ್ನು ಬಲ್ಲ ಮೂಲಗಳ ಪ್ರಕಾರ ಜಾತ ನಿರ್ದೇಶಕರಾಗಿರುವಂತಹ ರವಿಶ್ರೀವತ್ಸ ಅವರು ಈ ಬಾರಿ ಬರಬಹುದು ಎಂದು ಹೇಳಲಾಗುತ್ತಿದೆ ಮತ್ತು ಇನ್ನೊಬ್ಬ ಸ್ಪರ್ಧೆಯ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ. ಒಟ್ಟಾರೆಯಾಗಿ ಬಿಗ್ ಬಾಸ್ ಪುನಹ ಆರಂಭವಾಗುತ್ತಿರುವುದು ಎಲ್ಲರಿಗೂ ಸಂತೋಷ ತಂದಿರುವ ವಿಚಾರ.

ಜೊತೆಗೆ ಈ ಒಂದು ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಹೊಸ ಹೊಸ ರೀತಿಯ ಆಟಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಹೆಚ್ಚು ಮನರಂಜನೆ ನೀಡಲು ಪ್ಲಾನ್ ಸಿದ್ಧಪಡಿಸಲಾಗಿದೆ. ಹೌದು ಈಗಾಗಲೇ ವೀಕ್ಷಕರು ಬಿಗ್ ಬಾಸ್ ನಿಂದ ಕೊಂಚ ಹೊರಹೋಗಿದ್ದಾರೆ ಹೀಗಾಗಿ ಎಲ್ಲರನ್ನೂ ಮರಳಿ ತರುವುದಕ್ಕಾಗಿ ಹೊಸತನವನ್ನು ಏನಾದರೂ ನೀಡಬೇಕಾಗುತ್ತದೆ, ಹೀಗಾಗಿ ಕೆಲ ಹೊಸ ಹೊಸ ಟಾಸ್ಕ್ ಗಳನ್ನು ಕೊಡಲಾಗುತ್ತದೆ. ಸ್ನೇಹಿತರೇ ನೀವು ಕೂಡ ಬಿಗ್ ಬಾಸ್ ಅಭಿಮಾನಿಯಾಗಿದ್ದು ನಿಮ್ಮ ಫೇವರೆಟ್ ಕಂಟೆಸ್ಟೆಂಟ್ ಯಾರು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ…