ಭಾರತದಿಂದ ಹಾರಿ ಹೋಗುತ್ತಾ ಟ್ವಿಟರ್ ಹಕ್ಕಿ ?? ಸರ್ಕಾರದ ಸಿಂಪಲ್ ಹೊಡಿತಾ ಹೇಗಿದೆ ಗೊತ್ತಾ ?? ಏನೂ ನಡೆದಿದೆ ಗೊತ್ತೆ ?

ಸ್ನೇಹಿತರೆ, ಭಾರತ ನೆಲದ ಕಾನೂನನ್ನು ಒಪ್ಪಿಕೊಳ್ಳುವುದಕ್ಕೆ ನಕ್ಕ್ರಾ ಮಾಡುತ್ತಿದ್ದಂತ ಟ್ವಿಟರ್ ಈಗ ಸ್ವಲ್ಪ ಸರಿಯಾಗಿದೆ. ನಾವು ಸರ್ಕಾರ ಹೇಳಿದ ಹಾಗೆ ಕೇಳುತ್ತೇವೆ ಎನ್ನುವ ಮಾತುಗಳನ್ನಾಡುತ್ತಿದೆ. ಹಾಗೆ ಮಾಡದೇ ಇದ್ದರೂ ಕೂಡ ಭಾರತ ಸರ್ಕಾರ ಟ್ವಿಟರ್ನ ಇಲ್ಲಿ ಬ್ಯಾನ್ ಮಾಡುವುದಕ್ಕೆ ಹೋಗುವುದಿಲ್ಲ. ಬದಲಿಗೆ ಅವರೇ ಅಂಗಡಿ ಮುಚ್ಚಿಕೊಂಡು ಇಲ್ಲಿಂದ ವಾಪಸ್ ಹೋಗ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತಹದೊಂದು ಅಡಕತ್ತರಿಗೆ ಟ್ವಿಟರ್ರನ್ನು ಸಿಲುಕಿಸಿದೆ ಭಾರತ ಸರ್ಕಾರ. ಹಾಗಾದ್ರೆ ಇಲ್ಲಿ ಅಹಂಕಾರ ಮೆರೆಯುತ್ತಿದ್ದ, ಕಾನೂನುಗಳ ಪಾಲನೆಗೆ ಸಿದ್ಧವಿಲ್ಲದ ಟ್ವಿಟರ್ ಏಕಾಏಕಿ ವಲಸೆ ಬದಲಿಸಲು ಕಾರಣವೇನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಭಾರತ ಸರ್ಕಾರ ಸೋಶಿಯಲ್ ಮೀಡಿಯಗಳ ಪ್ಲಾಟ್ಫಾರ್ಮ್ಗಳಿಗೆ ಒಂದಿಷ್ಟು ಅಂಕುಶಗಳನ್ನು ಹಾಕಲು ನಿರ್ಧಾರ ಮಾಡಿತ್ತು. ಅದು ಅವುಗಳ ಸ್ವಾತಂತ್ರ್ಯಹರಣವು ಅಲ್ಲ ಸೋಶಿಯಲ್ ಮೀಡಿಯಾಗಳ ಬಾಯಿ ಮುಚ್ಚುವ ಕೆಲಸವೂ ಅಲ್ಲ. ಇಲ್ಲಿ ನೀವು ವ್ಯವಹಾರ ಮಾಡಬೇಕು ಎಂದರೆ ನಮ್ಮ ದೇಶದ ಕಾನೂನುಗಳನ್ನು ನೀವು ಗೌರವಿಸಬೇಕು. ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವುದಕ್ಕೆ ಒಂದಿಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು, ಮಾನ ಹನಿಯಾಗುವ ಅಥವಾ ಇನ್ನಿತರ ನಷ್ಟಗಳನ್ನು ಉಂಟುಮಾಡುವ ಹೇಳಿಕೆಗಳನ್ನು ಪ್ರಕಟಿಸುವಾಗ ಎಚ್ಚರವಹಿಸಬೇಕು. ಅದಕ್ಕಾಗಿ ನಿಮ್ಮಲ್ಲಿ ಒಂದು ದೂರು ಸ್ವೀಕರಿಸುವ ವ್ಯವಸ್ಥೆಯನ್ನೂ ಮಾಡಿಕೊಳ್ಳಿ.

ಬಂದ ದೂರುಗಳನ್ನು 15ದಿನಗಳ ಒಳಗಾಗಿ ಪರಿಶೀಲಿಸಿ ಅದರ ಬಗ್ಗೆ ಸರಿಯಾದ ಮಾಹಿತಿ ಕೊಡಿ. ಯಾರು ಅದರ ಜವಾಬ್ದಾರಿಯನ್ನು ಸ್ವೀಕರಿಸುತ್ತಾರೆ ಅವರ ನಂಬರ್ ಜನರಿಗೆ ಸಿಗುವ ಹಾಗೆ ಮಾಡಿ, ಪ್ರತಿ ತಿಂಗಳು ಆ ಬಗ್ಗೆ ಒಂದು ವರದಿಯನ್ನು ಸಲ್ಲಿಸಿ ಹೀಗೆ ಒಂದಿಷ್ಟು ನಿಯಮಗಳನ್ನು ಡಿಜಿಟಲ್ ಮೀಡಿಯಾಗಳಿಗೆ ಕೊಟ್ಟಿತ್ತು. ಇಂತಹ ನಿಯಮಗಳನ್ನು ಪೋಲೋ ಮಾಡುವುದಕ್ಕೆ ಫೇಸ್ಬುಕ್ ಹಾಗೂ ಇನ್ನಿತರರು ಒಪ್ಪಿಕೊಂಡರು ಆದರೆ ಟ್ವಿಟರ್ ಈ ನಿರ್ಧಾರಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

ಜಗತ್ತಿನ ಅತಿದೊಡ್ಡ ಸೋಶಿಯಲ್ ಮೀಡಿಯಾ ಅಂತರಾಷ್ಟ್ರೀಯ ಮಟ್ಟದಿಂದ ಎಲ್ಲರೂ ಬಳಸುವಂತಹ ಮಾಧ್ಯಮ ಇದಾಗಿತ್ತು, ಅಷ್ಟೇ ಅಲ್ಲದೆ ಪ್ರಧಾನ ಮಂತ್ರಿಯವರು ಹೆಚ್ಚಾಗಿ ಬಳಸುತ್ತಿದ್ದರು. ದರಿಂದಾಗಿ ನಮ್ಮನ್ನು ಇವರು ಏನು ಮಾಡುತ್ತಾರೆ ಎನ್ನುವ ಗರ್ವ ಟ್ವಿಟರ್ಗೆ ಬಂದಿತ್ತು ಹೀಗಾಗಿ ಸರ್ಕಾರ ಟ್ವಿಟರ್ಗೆ ಇದ್ದಂತಹ ಕಾನೂನು ರಕ್ಷಣೆಯನ್ನು ರದ್ದು ಮಾಡುತ್ತಿದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.