ರಾಧಿಕಾ ಮತ್ತು ಕುಮಾರಸ್ವಾಮಿ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವೇನು ಗೊತ್ತಾ ?? ಸುಂದರವಾಗಿದ್ದ ಕುಟುಂಬ ಹೀಗೇಕಾಯಿತು ??

ಸ್ನೇಹಿತರೆ ರಾಧಿಕಾ ಕುಮಾರಸ್ವಾಮಿಯವರು ಕರ್ನಾಟಕದ ಮಂಗಳೂರಿನಲ್ಲಿ ಜನಿಸಿ, ನಂತರ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ ಆಗಿ ಮೆರೆದವರು. ಇನ್ನು ಇಂತಹ ರಾಧಿಕಾ ಮತ್ತು ಕುಮಾರಸ್ವಾಮಿಯವರ ಮದುವೆ ವಿಚಾರ ಸಾಕಷ್ಟು ಸುದ್ದಿ ಮಾಡಿತ್ತು, ತದನಂತರ ಬೇರೆ ಬೇರೆ ವಿಚಾರಗಳು ಅಷ್ಟೇ ಪ್ರಮಾಣದಲ್ಲಿ ಸುದ್ದಿಯಾಗಿತ್ತು. ಇನ್ನು ಅವರಿಬ್ಬರು ಬೇರೆಯಾದ ನಂತರ ಪರಸ್ಪರ ಒಬ್ಬರ ಮೇಲೊಬ್ಬರು ಯಾವುದೇ ರೀತಿಯಾದ ಹೇಳಿಕೆಯನ್ನು ನೀಡಿಲ್ಲ. ಅದರಲ್ಲೂ ಕುಮಾರಸ್ವಾಮಿಯವರು ಒಂದು ಹೆಜ್ಜೆ ಮುಂದೆ ಹೋಗಿ ರಾಧಿಕಾ ಯಾರು ಅನ್ನೋದು ನನಗೆ ಗೊತ್ತೇ ಇಲ್ಲ ಅಂತ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದರು.

ಹಾಗಿದ್ರೆ ಕುಮಾರಸ್ವಾಮಿ ಮತ್ತು ರಾಧಿಕಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಯಾಕೆ? ಯಾವ ಕಾರಣಕ್ಕಾಗಿ ಬೇರೆಬೇರೆಯಾದರು ಈ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಇದನ್ನು ಸಂಪೂರ್ಣವಾಗಿ ಓದಿ. ಹೌದು ಅತಿ ಚಿಕ್ಕ ವಯಸ್ಸಿನಲ್ಲಿ ಮದುವೆಯಾದ ರಾಧಿಕಾ ಹೆಚ್ಚುಕಡಿಮೆ 9ನೇ ತರಗತಿ ಓದುತ್ತಿದ್ದ ಅವರು ಈ ವೇಳೆ ರತನ್ ಕುಮಾರ್ ಎಂಬವರ ಜೊತೆ ಮದುವೆಯಾಗುತ್ತಾರೆ. ನಂತರ ರಾಧಿಕಾ ಅವರ ಪೋಷಕರು ರತನ್ ಕುಮಾರ್ ನನ್ನ ಮಗಳನ್ನು ಕಿಡ್ನಾಪ್ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ. 2000 ಇಸವಿಯಲ್ಲಿ ರಾಧಿಕಾ ಅವರ ಮೊದಲ ಗಂಡ ರತನ್ ಕುಮಾರ್ ಅವರು ಸಾವನ್ನಪ್ಪುತ್ತಾರೆ.

ಇನ್ನು ಅವರ ಮೊದಲ ಗಂಡ ಸಾವನ್ನಪ್ಪಿದ ಬಳಿಕ 2002ರಲ್ಲಿ ರಾಧಿಕಾ ಸುಜನ್ ಲೋಕೇಶ್ ಅವರ ಅಭಿನಯದ ನೀಲಮೇಘಶ್ಯಾಮ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ತದನಂತರ ರಾಧಿಕಾ ಹಿಂತಿರುಗಿ ನೋಡಲೇ ಇಲ್ಲ. ನಂತರದ ದಿನಗಳಲ್ಲಿ ಕನ್ನಡದ ಖ್ಯಾತ ನಟಿಯಾಗಿ ಗುರುತಿಸಿಕೊಳ್ಳುತ್ತಾರೆ. ಇನ್ನು ಇದೇ ಸಮಯದಲ್ಲಿ ಕುಮಾರಸ್ವಾಮಿಯವರು ಕೂಡ ಕನ್ನಡಚಿತ್ರರಂಗದಲ್ಲಿ ಪ್ರೊಡ್ಯೂಸರ್ ಮತ್ತು ವಿತರಕರಾಗಿ ಗುರುತಿಸಿಕೊಂಡಿರುತ್ತಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಸ್ನೇಹ ಉಂಟಾಗುವುದಕ್ಕೆ ಆ ಸ್ನೇಹ ಪ್ರೀತಿಯಾಗಿ ತಿರುಗೋಕೆ ಬಹಳ ಸಮಯ ಬೇಕಾಗಿರಲಿಲ್ಲ.

ಇನ್ನು ಇವರ ಪ್ರೀತಿಯ ಪ್ರತಿಫಲವಾಗಿ 2006ರಲ್ಲಿ ಇಬ್ಬರು ಕೂಡ ಮದುವೆ ಆಗುತ್ತಾರೆ. ಆದರೆ 2010ರವರೆಗೂ ಕೂಡ ಇವರಿಬ್ಬರು ಮದುವೆಯಾಗಿದ್ದಾರೆ ಎಂಬ ವಿಚಾರ ಯಾರಿಗೂ ಕೂಡ ಗೊತ್ತಿರುವುದಿಲ್ಲ. ನಂತರ ಈ ಸಂಗತಿ ಗೊತ್ತಾದ ಬಳಿಕ ರಾಧಿಕಾ ಅವರು ಮಾಧ್ಯಮಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಈ ಎಲ್ಲ ಸ್ವತಹ ರಾಧಿಕಾ ಅವರೇ ಬಹಿರಂಗಪಡಿಸಿ ತಮಗೆ ಒಬ್ಬ ಮಗಳು ಇರುವುದನ್ನು ಕೂಡ ಹೇಳಿಕೊಳ್ಳುತ್ತಾರು. ಇದೇ ವೇಳೆ ಹೈಕೋರ್ಟ್ ನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಆಗುತ್ತೆ. ಕುಮಾರಸ್ವಾಮಿ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಹೇಗೆ ಎರಡನೇ ಮದುವೆಯಾಗಿದ್ದಾರೆ ಅಂತ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಆಗುತ್ತೆ.

ಆಗ ಹೈಕೋರ್ಟ್ ಮದುವೆ ಈ ಅಸಿಂಧು ಎಂದು ಆದೇಶ ನೀಡುತ್ತದೆ. ಇದೇ ಸಂದರ್ಭದಲ್ಲಿ ಕುಮಾರಸ್ವಾಮಿಯವರ ಕುಟುಂಬದಲ್ಲೂ ಕೂಡ ಗಲಾಟೆಗಳು ಶುರುವಾಗುತ್ತವೆ, ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರ ಮೊದಲ ಪತ್ನಿ ಅನಿತಾ ಅವರು ಏನು ಕೂಡ ಮಾತನಾಡುವುದಿಲ್ಲ, ಆದರೆ ಅವರ ಮಗ ನಿಖಿಲ್ ಕುಮಾರಸ್ವಾಮಿ ಯಾವಾಗ ದೊಡ್ಡವರಾಗುತ್ತಾ ಹೋಗುತ್ತಾರೆ ಅಪ್ಪನ ತಪ್ಪುಗಳನ್ನು ಮನವರಿಕೆ ಮಾಡುತ್ತಿರುತ್ತಾರೆ. ಅಲ್ಲದೆ ನಿಮ್ಮ ಮತ್ತು ರಾಧಿಕಾ ಸಂಬಂಧ ಇದೇ ರೀತಿ ಮುಂದುವರೆದರೆ ಸರಿ ಇರುವುದಿಲ್ಲ ಅಂತ ಎಚ್ಚರಿಕೆ ಕೂಡ ನೀಡಿದ್ದರು.

ಇನ್ನು ಕುಮಾರಸ್ವಾಮಿಯವರಿಗೆ ನಿಖಿಲ್ ಅವರೆಂದರೆ ತುಂಬಾನೇ ಪ್ರೀತಿ, ಹೀಗಾಗಿ ಅವರ ಮಾತನ್ನು ತೆಗೆದು ಕೂಡ ಹಾಕುತ್ತಿರಲಿಲ್ಲ. ಇನ್ನು ನಿಕ್ಕಿಲ್ ನೇರವಾಗಿ ರಾಧಿಕಾ ಮನೆಗೂ ತೆರಳಿ ಎಚ್ಚರಿಕೆ ಕೂಡಾ ಕೊಟ್ಟಿದ್ದರಂತೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ 2015ರವೇಳೆಗೆ ಕುಮಾರಸ್ವಾಮಿ-ರಾಧಿಕಾ ಅವರಿಂದ ದೂರವಾಗುತ್ತಾರೆ…