ವಿರಾಟ್ ಕೊಹ್ಲಿ ಆಡಿದ್ದೆ ಆಟ,, ಮಾಡಿದ್ದೆ ದಾಖಲೆ! ಹೊಸ ರೆಕಾರ್ಡ್ ಯಾವುದು ಗೊತ್ತಾ ??

ಸ್ನೇಹಿತರೆ, ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ನ ಮೊದಲ ದಿನದಾಟದಲ್ಲಿ ಮೂರು ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿದೆ. ಇನ್ನು ಮಳೆಯಿಂದಾಗಿ ಮೊದಲ ದಿನದ ಪಂದ್ಯ ಟಾಸ್ ಕೂಡ ಹಾಕದೆ ಅಂತ್ಯವಾಗಿತ್ತು. ಅಲ್ಲದೆ ಎರಡು ದಿನದಲ್ಲಿ ಮಳೆ ಪದೇಪದೇ ಕಾಡಿದ್ದರಿಂದ ಕೇವಲ 64.4 ಓವರ್ ಗಳ ಪಂದ್ಯವನ್ನು ಅಷ್ಟೇ ಆಡಲಾಯಿತು. ಇನ್ನು ದಿನದಂತ್ಯಕ್ಕೆ ವಿರಾಟ್ ಮತ್ತು ರಹನೆ 58 ರನ್ ಗಳ ಜೊತೆಯಾಟ ಪಾರ್ಟ್ನರ್ಶಿಪ್ ನೀಡಿದ್ದರು. ವಿರಾಟ್ ಕೊಹ್ಲಿ 33 ರನ್ ಕಲೆಹಾಕಿದ್ದರೆ, ಅಜಿಂಕ್ಯಾ ರಹಾನೆ 29 ರನ್ನುಗಳನ್ನು ಕಲೆಹಾಕಿದ್ದಾರು.

ಆದರೆ ಗ್ರೇಟ್ ಕೊಹ್ಲಿ ಈ ಪಂದ್ಯದಲ್ಲಿ ಇದೀಗ ಎರಡು ದಾಖಲೆಯನ್ನು ಮಾಡಿದ್ದಾರೆ. ಒಂದು ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿ ಇದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಹೌದು ಮಹೇಂದ್ರ ಸಿಂಗ್ ಧೋನಿ 60 ಪಂದ್ಯಗಳಲ್ಲಿ ನಾಯಕನಾಗಿ ಟೆಸ್ಟ್ ಫಾರ್ಮೆಟ್ ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಇದೀಗ ವಿರಾಟ್ ಕೊಹ್ಲಿ 61ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಮೂಲಕ ಧೋನಿಯ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 40 ರನ್ಗಳನ್ನು ದಾಖಲಿಸಿದ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ 7500 ರನ್ಗಳ ಗಡಿಯನ್ನ ದಾಟಿದ್ದಾರೆ.

ಹೌದು ತಮ್ಮ 92ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಮೈಲುಗಳನ್ನು ಸ್ಥಾಪಿಸಿದ್ದು, ಒಟ್ಟಿನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಟೀಮ್ ಇಂಡಿಯಾ ಪ್ರದರ್ಶನ ಜವಾಬ್ದಾರಿಯಿಂದಲೇ ಸಾಗುತ್ತಿದೆ. ಆದರೆ ಮಳೆ ಪದೇಪದೇ ಅಡ್ಡಿಪಡಿಸದಿದ್ದರೆ ಸೂಕ್ತ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ. ಸ್ನೇಹಿತರೇ ನೀವು ಕೂಡ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರ ಹೊಮ್ಮಬೇಕು ಎಂದು ಬಯಸುವುದಾದರೆ ನಮಗೆ ತಪ್ಪದೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ ಹಾಗೂ ಒಂದು ಲೈಕ್ ಮಾಡಿ…