ವಿಷ್ಣು ದಾದ ಜೊತೆ ಕನ್ನಡದ ಒಂದೇ ಚಿತ್ರದಲ್ಲಿ ನಟಿಸಿದ್ದ ಈ ಪುಟ್ಟ ಬಾಲ ನಟಿ ಏನಾದರೂ ಗೊತ್ತೇ ?? ಗುರುತೇ ಸಿಗಲ್ಲ ನೋಡಿ !!

ನಮಸ್ಕಾರ ಸ್ನೇಹಿತರೆ, ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಬಂದ ಚಿತ್ರಗಳು ಇಂದಿಗೂ ಸಹ ಜನಮನದಲ್ಲಿ ಉಳಿದುಕೊಂಡಿವೆ. ಅವುಗಳನ್ನು ಈಗ ನೋಡಿದರೂ ಸಹ ಮನಸ್ಸಿಗೆ ಏನೋ ಒಂದು ರೀತಿ ಸಂತೋಷ ಉಂಟಾಗುತ್ತದೆ. ಆಗಿನ ಕಾಲದಲ್ಲಿ ಬಾಲಾ ನಟ-ನಟಿಯರಿಗೆ ತುಂಬಾ ಬೇಡಿಕೆ ಇತ್ತು. ಅವರನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಂಡು ಸಿನಿಮಾಗಳು ಮೂಡಿಬಂದು ದೊಡ್ಡ ಸಕ್ಸಸ್ ಅನ್ನು ಕಾಣುತ್ತಿದ್ದವು. ಹಾಗೆಯೇ ಬಾಲನಟಿ ಕೂಡ 1986 ರಲ್ಲಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಳು.

ವಿಷ್ಣುವರ್ಧನ್ ಅವರ ಜೊತೆ ನಟಿಸಿ ಪ್ರೇಕ್ಷಕರ ಹೃದಯ ಗೆದ್ದ ಈ ಪುಟ್ಟ ಹುಡುಗಿ ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಗೊತ್ತಾ? ಈ ಜೀವ ನಿನಗಾಗಿ ಚಿತ್ರದಲ್ಲಿ ಸ್ವರ್ಗಕ್ಕೆ ಫೋನ್ ಮಾಡಿ ತಾಯಿಯ ಜೊತೆ ಮಾತನಾಡುತ್ತಾ ತಾಯಿಯನ್ನು ತಾಯಿಯ ಮಮಕಾರವನ್ನು ಹುಡುಕುವ ಪಾತ್ರದಲ್ಲಿ ನಟಿಸಿದ ಪುಟ್ಟ ಹುಡುಗಿಯ ಹೆಸರು “ಶಾಲಿನಿ”. ಈ ಹುಡುಗಿ ನಟಿಸಿದ್ದು ಒಂದೇ ಕನ್ನಡ ಚಿತ್ರ ,ಆದರೆ ಇವಳ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸಲ್ಲಿ ನೆಲೆಸಿದರು.

ದೊಡ್ಡವರಾದಮೇಲೆ ಹಿಟ್ ಚಿತ್ರಗಳ ಮೇಲೆ ಹಿಟ್ ಚಿತ್ರಗಳನ್ನು ಕೊಟ್ಟ ಶಾಲಿನಿ ದಕ್ಷಿಣಭಾರತದ ಸೂಪರ್ ಸ್ಟಾರ್ ನಟಿಯಾಗಿ ಬೆಳೆದರು. ಇಲ್ಲಿ ಇನ್ನೊಂದು ವಿಷಯ ಏನೆಂದರೆ ತಮ್ಮ ಮಾತೃಭಾಷೆ ಮಲಯಾಳಂ ಆಗಿದ್ದರು ಈ ಜೀವ ನಿನಗಾಗಿ ಚಿತ್ರದಲ್ಲಿ ಕನ್ನಡ ಕಲಿತು ಒಂದು ಹಾಡನ್ನು ಸಹ ಸ್ವತಹ ತಾವೇ ಆಡಿದ್ದಾರೆ ಶಾಲಿನಿ. ಎಂತಹ ಅದ್ಭುತ ಪ್ರತಿಭಾವಂತ ನಟಿ ಅಲ್ಲವೇ ದೊಡ್ಡವರಾಗಿ ಸ್ಟಾರ್ ಆದಮೇಲೆ ತಮಿಳು ನಟ ಅಜಿತ್ ಅವರನ್ನು ಪ್ರೀತಿಸಿ ಮದುವೆಯಾದರೂ ನಟಿ ಶಾಲಿನಿ ಅವರು.

ಇನ್ನೊಂದು ತಿಳಿಯಬೇಕಾದ ವಿಷಯವೇನೆಂದರೆ ಈ ಶಾಲಿನಿ ಅವರ ತಂಗಿಯೇ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಬೇಬಿ ಶ್ಯಾಮಿಲಿ. ಬೇಬಿ ಶ್ಯಾಮಿಲಿ ಅವರು ದೊಡ್ಡವರಾದ ಮೇಲೆ ನಟಿಯಾಗಿ ಅಷ್ಟೇನು ಸಕ್ಸಸ್ ಕಾಣಲಿಲ್ಲ. ಆದರೆ ಶಾಲಿನಿ ಅವರು ಮಾತ್ರ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟರು. ಅದಾಗ್ಯೂ ಮದುವೆಯಾದಮೇಲೆ ಆಕ್ಟಿಂಗ್ ನಿಂದಾ ದೂರ ಉಳಿದರು ನಟಿ ಶಾಲಿನಿ…..