ಈ ವಿಶೇಷ ಕಾರಣಕ್ಕಾಗಿ ನಟ ಚೇತನ್ ಈವರೆಗೂ ಭಾರತದಲ್ಲಿ ಮತ ಚಲಾಯಿಸಿಲ್ಲ – ಏಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಭಿನಯ, ಸಿನಿಮಾಗಳಿಗಿಂತ ಆ ದಿನಗಳು ಖ್ಯಾತಿಯ ಚಿತ್ರ ನಟ ಚೇತನ್ ಸದಾ ಸುದ್ದಿಯಲ್ಲಿರುವುದು ವಿವಾದಗಳಿಂದ. ಈ ಹಿಂದೆ ಸಿದ್ದಗಂಗಾ ಶ್ರೀಗಳಿಗೆ ಸಾಮಾಜಿಕ ಬದ್ದತೆಯಿಲ್ಲ ಎಂದು ಹೇಳಿ ವಿವಾದಕ್ಕೆ ಈಡಾಗಿದ್ದರು. ನಂತರ ಸ್ಯಾಂಡಲ್ ವುಡ್ ನಲ್ಲಿ ಕೇಳಿ ಬಂದ ಮೀಟೂ ಪ್ರಕರಣಗಳಲ್ಲೂ ಸಹ ಚೇತನ್ ವಿವಾದ ಸೃಷ್ಠಿ ಮಾಡಿಕೊಂಡಿದ್ದರು. ಈಗ ನಟ ಚೇತನ್ ಬ್ಯಾಹ್ಮಣ್ಯದ ವಿರುದ್ದ ಮಾತನಾಡಿ ದೊಡ್ಡ ವಿವಾದ ಸೃಷ್ಠಿ ಮಾಡಿಕೊಂಡಿದ್ದಾರೆ. ಅವರ ಮೇಲೆ ಹಲವು ಪೋಲಿಸ್ ಸ್ಟೇಶನ್ ಗಳಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ದೂರನ್ನು ಸಹ ನೀಡಿದೆ.

ಈ ಮಧ್ಯೆ ಚೇತನ್ ಮತ್ತೊಂದು ವಿವಾದಕ್ಕೆ ಸಹ ಸಿಲುಕಿದ್ದಾರೆ. ಭಾರತದ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಚೇತನ್, ಭಾರತದಲ್ಲಿ ಇದುವರೆಗೂ ನಡೆದ ಒಂದು ಚುನಾವಣೆಯಲ್ಲಿಯೂ ಸಹ ಮತವನ್ನೇ ಚಲಾಯಿಸಿಲ್ಲವಂತೆ. ಪ್ರಜಾಪ್ರಭುತ್ವ, ಸಂವಿಧಾನ, ಮೂಲಭೂತ ಹಕ್ಕುಗಳ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಚೇತನ್, ಪ್ರಜಾಪ್ರಭುತ್ವದ ಹಬ್ಬ ಎಂದು ಪರಿಗಣಿಸುವ ಮತದಾನದಲ್ಲಿ ಏಕೆ ಭಾಗವಹಿಸಿಲ್ಲ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.

ಆದರೇ ಅಸಲಿ ವಿಷಯವೆಂದರೇ, ಚೇತನ್ ಭಾರತದ ಪ್ರಜೆಯೇ ಅಲ್ಲ. ಚೇತನ್ ಅವರು ಓಸಿಐ ಕಾರ್ಡ್ ಹೊಂದಿರುವವರು. ಅಂದರೇ ಓವರ್ ಸೀಸ್ ಸಿಟಿಜನ್ ಕಾರ್ಡ್ ಎಂದು. ವಿದೇಶದಲ್ಲಿ ನೆಲೆಸಿರುವ ಭಾರತೀಯರ ಮಕ್ಕಳಿಗೆ ಈ ಕಾರ್ಡನ್ನು ನೀಡಲಾಗುತ್ತದೆ. ಇಂತಹವರಿಗೆ ಮತದಾನ ಮಾಡುವ ಹಾಗೂ ಚುನಾವಣೆಗೆ ನಿಲ್ಲುವ ಹಕ್ಕು ಇರುವುದಿಲ್ಲ. ಇವೆರೆಡನ್ನು ಬಿಟ್ಟರೇ ಬೇರೆಲ್ಲಾ ಭಾರತೀಯ ಪ್ರಜೆಗಳಿಗಿರುವ ಹಕ್ಕುಗಳು ಇರುತ್ತವೆ.

ನನ್ನ ತಂದೆ-ತಾಯಿ, ಅಜ್ಜ-ಅಜ್ಜಿ ಎಲ್ಲರೂ ಸಹ ಭಾರತೀಯರು. ನನಗೆ ಪಾಸ್ ಪೋರ್ಟ್ ಮುಖ್ಯವಲ್ಲ. ನನಗೆ ದೇಶದ ಜನರು ಮುಖ್ಯ. ಪಾಸ್ ಪೋರ್ಟ್ ಹೊಂದಿರುವವರು ಪಾರ್ಲಿಮೆಂಟ್ ನಲ್ಲಿ ಕುಳಿತು ಲೂಟಿ ಮಾಡುತ್ತಿದ್ದಾರೆ, ಆದರೇ ನಾನು ಆ ಕೆಟಗರಿಗೆ ಸೇರಿದವನಲ್ಲ, ನನಗೆ ಈ ದೇಶದ ಜನರ ಸೇವೆಯೇ ಮುಖ್ಯ.ಹಾಗಾಗಿ ನಾನು ಸದಾ ಜನರ ಸೇವೆಯಲ್ಲಿ ತೊಡಗಿರುತ್ತೇನೆ ಎಂದು ಚೇತನ್ ಹೇಳಿದ್ದಾರೆ. ನಟ ಚೇತನ್ ರವರ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.